ಆ್ಯಪ್ನಗರ

ಸಹ್ಯಾದ್ರಿ ಸಹಕಾರಿಗೆ 47ಲಕ್ಷ ರೂ. ಲಾಭ

ಯಲ್ಲಾಪುರ: ಸಹ್ಯಾದ್ರಿ ಸೇವಾ ಸಹಕಾರಿ ಸಂಘದ ಪಟ್ಟಣದ ಶಾಖೆಯಲ್ಲಿಗ್ರಾಹಕರ ಸಭೆ ನಡೆಯಿತು. ಈ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಉಮೇಶ ಭಾಗ್ವತ್‌, ತಾಲೂಕಿನ ಕಳಚೆಯಲ್ಲಿಕೇಂದ್ರ ಕಚೇರಿ ಹೊಂದಿರುವ ಸಹ್ಯಾದ್ರಿ ಸೇವಾ ಸಹಕಾರಿ ಸಂಘವು ಪ್ರಸ್ತುತ 55ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ.

Vijaya Karnataka 18 Sep 2019, 5:00 am
ಯಲ್ಲಾಪುರ: ಸಹ್ಯಾದ್ರಿ ಸೇವಾ ಸಹಕಾರಿ ಸಂಘದ ಪಟ್ಟಣದ ಶಾಖೆಯಲ್ಲಿಗ್ರಾಹಕರ ಸಭೆ ನಡೆಯಿತು. ಈ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಉಮೇಶ ಭಾಗ್ವತ್‌, ತಾಲೂಕಿನ ಕಳಚೆಯಲ್ಲಿಕೇಂದ್ರ ಕಚೇರಿ ಹೊಂದಿರುವ ಸಹ್ಯಾದ್ರಿ ಸೇವಾ ಸಹಕಾರಿ ಸಂಘವು ಪ್ರಸ್ತುತ 55ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ.
Vijaya Karnataka Web 47 lakhs for sahyadri sahayi profit
ಸಹ್ಯಾದ್ರಿ ಸಹಕಾರಿಗೆ 47ಲಕ್ಷ ರೂ. ಲಾಭ


ಸಂಘವು ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಹೊಂದುತ್ತಾ ಸಾಗುತ್ತಿದ್ದು, ಸಾಕಷ್ಟು ಸಂಪನ್ಮೂಲವನ್ನು ಹೊಂದಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಸಂಘಕ್ಕೆ ಈ ಆರ್ಥಿಕ ವರ್ಷದಲ್ಲಿ47,68,190 ರೂ. ನಿವ್ವಳ ಲಾಭವಾಗಿದ್ದು, ಸಂಘದ ಆರ್ಥಿಕ ಬೆಳವಣಿಗೆ ಪ್ರಗತಿದಾಯಕವಾಗಿದೆ ಎಂದರು. ಸಂಘವು ಕಳಚೆ, ಹೆಬ್ಬಾರಕುಂಬ್ರಿ ಹಾಗೂ ಯಲ್ಲಾಪುರದಲ್ಲಿಶಾಖೆಗಳನ್ನು ಹೊಂದಿದೆ. ಮುಂದಿನ ದಿನಗಳಲ್ಲಿಪಟ್ಟಣದಲ್ಲಿಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಆಲೋಚಿಸಲಾಗಿದೆ. ಗ್ರಾಹಕರಿಗೆ, ರೈತರಿಗೆ ಅನುಕೂಲವಾಗುವ ವಿವಿಧ ವ್ಯವಹಾರಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಸಂಘದಲ್ಲಿಪ್ರಾರಂಭಿಸಲಾದ ಇ-ಸ್ಟಾಂಪ್‌ ಪೇಪರ ಮಾರಾಟ ವಿಭಾಗವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಇ-ಸ್ಟಾಂಪ್‌ ಮಾರಾಟವನ್ನು ಅಡೆ, ತಡೆ ಇಲ್ಲದೇ ಉತ್ತಮವಾಗಿ ಹಾಗೂ ಹೆಚ್ಚು ಮಾರಾಟ ಮಾಡಿದ ನಮ್ಮ ಸಂಘಕ್ಕೆ ರಾಜ್ಯ ಸಹಕಾರಿ ಮಹಾ ಮಂಡಳ ನೀಡುವ ಪ್ರಶಸ್ತಿಯು ದೊರಕಿದೆ. ಸಂಘದ ಈ ಬೆಳವಣಿಗೆಗೆ ಗ್ರಾಹಕರು, ಸದಸ್ಯರು, ಸಿಬ್ಬಂದಿಗಳು ಹಾಗೂ ನಿರ್ದೇಶಕ ಮಂಡಳಿಯವರ ಸಹಕಾರ ಕಾರಣ ಎಂದರು.

ಈ ಸಂದರ್ಭದಲ್ಲಿಯು.ಕೆ.ಬ್ಯಾಂಕ್‌ನ ಅಧ್ಯಕ್ಷ ಪ್ರಮೋದ ಹೆಗಡೆ, ಸಹ್ಯಾದ್ರಿ ಸೊಸೈಟಿಯ ಉಪಾಧ್ಯಕ್ಷ ಜಿ.ಸಿ.ಭಟ್ಟ, ನಿರ್ದೇಶಕರಾದ ರಾಮಚಂದ್ರ ಭಟ್ಟ, ರಾಮಕೃಷ್ಣ ಹೆಗಡೆ, ಜನಾರ್ದನ ಹೆಬ್ಬಾರ್‌, ಸೀತಾ ಹೆಗಡೆ, ಮುಖ್ಯಕಾರ್ಯನಿರ್ವಾಹಕ ಡಿ.ಎಂ. ಹೆಗಡೆ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ