ಆ್ಯಪ್ನಗರ

ಹಳಿಯಾಳದಲ್ಲಿಪಂಜಾಗಳ ಮೆರವಣಿಗೆ

ಹಳಿಯಾಳ : ಮುಸ್ಲಿಂ ಮತ್ತು ಹಿಂದೂ ಸಮುದಾಯದ ಸೌಹಾರ್ದಯುತ ಹಬ್ಬವಾದ ಮೊಹರಂ ಕೊನೆಯ ದಿನವಾದ ಮಂಗಳವಾರ ಪಂಜಾಗಳನ್ನು ಸಂಪ್ರದಾಯದಂತೆ ಪಟ್ಟಣದ ಗೌರಿ ಗುಡಿ ಹಾಗೂ ಅರ್ಬನ್‌ ವೃತ್ತದಲ್ಲಿಭೇಟಿ ಮಾಡುವ ಮೂಲಕ ಹಾಗೂ ಪರಸ್ಪರ ಕೆಂಡ ಹಾರುವ ಮೂಲಕ ಆಚರಿಸಲಾಯಿತು.

Vijaya Karnataka 11 Sep 2019, 5:00 am
ಹಳಿಯಾಳ : ಮುಸ್ಲಿಂ ಮತ್ತು ಹಿಂದೂ ಸಮುದಾಯದ ಸೌಹಾರ್ದಯುತ ಹಬ್ಬವಾದ ಮೊಹರಂ ಕೊನೆಯ ದಿನವಾದ ಮಂಗಳವಾರ ಪಂಜಾಗಳನ್ನು ಸಂಪ್ರದಾಯದಂತೆ ಪಟ್ಟಣದ ಗೌರಿ ಗುಡಿ ಹಾಗೂ ಅರ್ಬನ್‌ ವೃತ್ತದಲ್ಲಿಭೇಟಿ ಮಾಡುವ ಮೂಲಕ ಹಾಗೂ ಪರಸ್ಪರ ಕೆಂಡ ಹಾರುವ ಮೂಲಕ ಆಚರಿಸಲಾಯಿತು.
Vijaya Karnataka Web 10 HLY 2 PANJAA_24


ಹತ್ತು ದಿನಗಳಿಂದ ಪಟ್ಟಣದಲ್ಲಿಆಚರಿಸುತ್ತಿದ್ದ ಮೊಹರಂ ಹಬ್ಬಕ್ಕೆ ಮಂಗಳವಾರ ಕೊನೆಯ ದಿನ ಮುಕ್ತಾಯಗೊಳಿಸಲಾಯಿತು. ಪಟ್ಟಣದ ವಿವಿಧ ಭಾಗಗಳಲ್ಲಿಸ್ಥಾಪಿಸಿರುವ ಹಸೇನ ಹುಸೇನ್‌, ಬೀಬಿ ಫಾತೀಮಾ, ಚಾಂದ್‌, ಕಾಕರ ಪಂಜಾ ಸೇರಿದಂತೆ ಇನ್ನಿತರ ಪಂಜಾಗಳನ್ನು ಮಧ್ಯಾಹ್ನ 3 ಗಂಟೆಗೆ ಪಟ್ಟಣದ ಗೌರಿಗುಡಿ ವೃತ್ತದಲ್ಲಿಪರಸ್ಪರ ಭೇಟಿ ಮಾಡುವ ಕಾರ್ಯ ನಡೆಯಿತು.

ಈ ಸಂದರ್ಭದಲ್ಲಿಹಾಜರಿದ್ದ ನೂರಾರು ಹಿಂದೂ ಮತ್ತು ಮುಸ್ಲಿಂ ಭಕ್ತರು ಭೇಟಿಯಾಗುತ್ತಿದ್ದ ಪಂಜಾಗಳ ಮೇಲೆ ಹೂವು, ಹಣ್ಣು ಮತ್ತು ನಾಣ್ಯಗಳನ್ನು ಎಸೆದು ತಮ್ಮ ಭಕ್ತಿ ಭಾವ ಮೆರೆದರು.

ಕೊನೆಯ ದಿನದ ಭೇಟಿ ಮುನ್ನ ಆಯಾ ಪಂಜಾಗಳನ್ನು ಹೊತ್ತ ಜನರು ಮಕಾನ್‌ನಲ್ಲಿಹಾಕಿದ ಕೆಂಡ ಮೇಲೆ ನಡೆದು ತಮ್ಮ ಭಕ್ತಿ ಪ್ರದರ್ಶಿಸಿದರೆ ಇನ್ನೂ ಕೆಲವರು ಪಂಜಾಗಳಿಗೆ ವಿಶೇಷ ಪೂಜೆ ನಡೆಸಿ ತಮ್ಮ ಭಕ್ತಿ ಪರವಸೆಯನ್ನು ಮೆರೆದರು. ಅಂತಿಮವಾಗಿ ಮಂಗಳವಾರ ಕೊನೆಯ ದಿನವಾದ ಮೊಹರಂ ಶಾಂತಿಯುತವಾಗಿ ಸಂಪನ್ನಗೊಂಡಿತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ