ಆ್ಯಪ್ನಗರ

ಕ್ರಿಯಾಶೀಲ ಚಟುವಟಿಕೆಗೆ ಸಂದ ಮಾನ್ಯತೆ

ಅಂಕೋಲಾ : ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿರುವ ಹಿಲ್ಲೂರಿನ ಸರಕಾರಿ ಪ್ರೌಢಶಾಲೆಗೆ 2018-19ನೇ ಸಾಲಿನ ಮಾಜಿ ಶಿಕ್ಷಣ ಸಚಿವ ದಿವಂಗತ ಎಚ್‌ ಜಿ. ಗೋವಿಂದಗೌಡ ಅವರ ಹೆಸರಿನಲ್ಲಿನೀಡುವ ರಾಜ್ಯ ಸರಕಾರದ 'ಅತ್ಯುತ್ತಮ ಸರಕಾರಿ ಪ್ರೌಢ ಶಾಲೆ' ಪ್ರಶಸ್ತಿ ಲಭಿಸಿದೆ.

Vijaya Karnataka 8 Sep 2019, 5:00 am
ಅಂಕೋಲಾ : ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿರುವ ಹಿಲ್ಲೂರಿನ ಸರಕಾರಿ ಪ್ರೌಢಶಾಲೆಗೆ 2018-19ನೇ ಸಾಲಿನ ಮಾಜಿ ಶಿಕ್ಷಣ ಸಚಿವ ದಿವಂಗತ ಎಚ್‌ ಜಿ. ಗೋವಿಂದಗೌಡ ಅವರ ಹೆಸರಿನಲ್ಲಿನೀಡುವ ರಾಜ್ಯ ಸರಕಾರದ 'ಅತ್ಯುತ್ತಮ ಸರಕಾರಿ ಪ್ರೌಢ ಶಾಲೆ' ಪ್ರಶಸ್ತಿ ಲಭಿಸಿದೆ.
Vijaya Karnataka Web accreditation for active activity
ಕ್ರಿಯಾಶೀಲ ಚಟುವಟಿಕೆಗೆ ಸಂದ ಮಾನ್ಯತೆ


ಸಾಧನೆಯ ಮೈಲಿಗಲ್ಲು : ಸುಂದರ ಪರಿಸರ, ಕ್ರಿಯಾಶೀಲ ಶಿಕ್ಷಕ ವರ್ಗ, ಸೃಜನಶೀಲ ವಿದ್ಯಾರ್ಥಿಗಳೊಂದಿಗೆ ಪಾಲಕರ ಹಾಗೂ ಗ್ರಾಮಸ್ಥರ ಪ್ರೋತ್ಸಾಹದ ಒರತೆಯಲ್ಲಿಅಂಕೋಲಾ ತಾಲೂಕು ಕೇಂದ್ರದಿಂದ 45 ಕಿ.ಮೀ. ಅಂತರದಲ್ಲಿರುವ ಸರಕಾರಿ ಪ್ರೌಢ ಶಾಲೆಯು, ಖಾಸಗಿ ಶಾಲೆಗಿಂತಲೂ ಭಿನ್ನವಾಗಿ, ಕ್ರಿಯಾಶೀಲ ಪಠ್ಯೇತರ ಮತ್ತು ಪಠ್ಯ ಚಟುವಟಿಕೆಗಳಲ್ಲಿಸಾಧನೆ ಪ್ರದರ್ಶಿಸಿ ಹೊಸದೊಂದು ಸಾಧನೆಯ ಮೈಲಿಗಲ್ಲಿನ ತಲುಪಿದೆ.

ಪ್ಲಾಸ್ಟಿಕ್‌ ಮುಕ್ತ ಶಾಲೆ : ಸ್ವಚ್ಛ ಸುಂದರ ಪ್ಲಾಸ್ಟಿಕ್‌ ಮುಕ್ತ ಪರಿಸರವನ್ನು ಹೊಂದಿರುವ ಈ ಪ್ರೌಢÜಶಾಲೆಯು ಉತ್ತಮ ಕ್ರೀಡಾಂಗಣವನ್ನು ಹೊಂದಿದೆ. ಅನೇಕ ವರ್ಷಗಳಿಂದ ಎಸ್‌ಎಸ್‌ಎಲ್‌ಸಿಯಲ್ಲಿಉತ್ತಮ ಫಲಿತಾಂಶÜ ನೀಡುತ್ತಿದೆ. ಗ್ರಾಮೀಣ ಪ್ರದೇಶÜದಲ್ಲಿದ್ದರೂ ಅತ್ಯಾಧುನಿಕ ಸೌಲಭ್ಯಗಳೊಂದಿಗೆ, ವಿಜ್ಞಾನ ಮತ್ತು ತಂತ್ರಜ್ಞಾನ ವಿದ್ಯಾಮಂಡಳಿಯವರಿಂದ ನೀಡಲ್ಪಟ್ಟ ಡಾ.ಸಿ.ವಿ.ರಾಮನ್‌ ಇ-ಕಲಿಕಾ ಕೇಂದ್ರ ವರ್ಚುವಲ್‌ ಲ್ಯಾಬ್‌ಅನ್ನು ಹೊಂದಿದೆ.

ಉತ್ತಮ ಪ್ರಯೋಗಾಲಯ, ವಾಚನಾಲಯ ಹಾಗೂ ಎಲ್ಲಮೂಲಭೂತ ಸೌಕರ್ಯಗಳನ್ನು ಪ್ರೌಢಶಾಲೆ ಹೊಂದಿದೆ. ಡಿ.ಎಸ್‌.ಎ.ಆರ್‌.ಟಿ. ಸ್ಥಾಪಿಸಲ್ಪಟ್ಟ ವಿಜ್ಞಾನ ಕೇಂದ್ರವೂ ಶಾಲೆಯಲ್ಲಿದೆ. ಉತ್ತಮ ಸ್ನಾತಕೋತ್ತರ ಪದವೀಧರ ಶಿಕ್ಷಕ ವೃಂದ ಹಾಗೂ ಮುಖ್ಯ ಶಿಕ್ಷಕರಿಂದ ಕೂಡಿದ ಈ ಶಾಲೆಯ ವಿದ್ಯಾರ್ಥಿಗಳು ಶೈಕ್ಷಣಿಕ ಹಾಗೂ ಕ್ರೀಡಾ ರಂಗದಲ್ಲಿಉತ್ತಮ ಸಾಧನೆ ಮಾಡಿದ್ದಾರೆ.

ವೈಜ್ಞಾನಿಕ ಸ್ಪರ್ಧೆಗಳಲ್ಲಿಜಿಲ್ಲೆ, ರಾಜ್ಯ, ದಕ್ಷಿಣ ಭಾರತ ಮಟ್ಟ ಹಾಗೂ ರಾಷ್ಟ್ರಮಟ್ಟದಲ್ಲಿಇಲ್ಲಿಯ ವಿದ್ಯಾರ್ಥಿಗಳು ಸಾಧನೆ ಪ್ರದರ್ಶಿಸಿದ್ದಾರೆ. ಅನೇಕ ವಿದ್ಯಾಥಿಗಳು ಜಿಲ್ಲಾಮಟ್ಟದ ಯುವ ವಿಜ್ಞಾನಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆ ತಾಲೂಕು ಮಟ್ಟದ ಉತ್ತಮ ಶಾಲಾ ಪ್ರಶಸ್ತಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹಸಿರು ಶಾಲಾ ಪ್ರಶಸ್ತಿಯು ಶಾಲೆಗೆ ಲಭಿಸಿವೆ.

2018-19ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶ್ರೀನಿವಾಸ ಗಣಪತಿ ನಾಯ್ಕ ಜಿಲ್ಲೆಗೆ ದ್ವಿತೀಯ ಬಹುಮಾನ ಪಡೆದು ಸರಕಾರ ನೀಡುವ ಲ್ಯಾಪ್‌ಟಾಪ್‌ ಪಡೆದಿದ್ದಾನೆ. ವಿಜ್ಞಾನ ಶಿಕ್ಷಕ ಸುಧೀರ ಡಿ ನಾಯಕ ಅವರಿಗೆ ರಾಜ್ಯ ಸರಕಾರದಿಂದ ರಾಜ್ಯ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಸಹಿತ ಆರು ರಾಜ್ಯ ಮಟ್ಟದ ಪ್ರಶಸ್ತಿ ಲಭಿಸಿವೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ