ಆ್ಯಪ್ನಗರ

ಎಸ್‌ಡಿಎಂ ಕಾಲೇಜ್‌ ವಿದ್ಯಾರ್ಥಿಗಳ ಸಾಧನೆ

ಹೊನ್ನಾವರ : ಪಟ್ಟಣದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಮಹಾವಿದ್ಯಾಲಯದ ಬಿ.ಕಾಂ. 3ನೇ ಸೆಮಿಸ್ಟರ್‌ ವಿಶೇಷ ಚೇತನ ವಿದ್ಯಾರ್ಥಿ ಸಮರ್ಥ ಜಗದೀಶ ರಾವ್‌ ಅಮೇರಿಕಾದ ನ್ಯೂಜೆರ್ಸಿಯಲ್ಲಿ ನಡೆದ ವಿಶ್ವ ಮಟ್ಟದ ಕಿರಿಯ ವಿಶೇಷಚೇತನ ಚೆಸ್‌ ಚ್ಯಾಂಪಿಯನ್‌ಶಿಪ್‌ನ ಏಳನೇ ಸುತ್ತಿನಲ್ಲಿ 5.5 ಅಂಕ ಗಳಿಸಿ ಚ್ಯಾಂಪಿಯನ್‌ ಆಗಿದ್ದಾರೆ.

Vijaya Karnataka 22 Jul 2019, 5:00 am
ಹೊನ್ನಾವರ : ಪಟ್ಟಣದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಮಹಾವಿದ್ಯಾಲಯದ ಬಿ.ಕಾಂ. 3ನೇ ಸೆಮಿಸ್ಟರ್‌ ವಿಶೇಷ ಚೇತನ ವಿದ್ಯಾರ್ಥಿ ಸಮರ್ಥ ಜಗದೀಶ ರಾವ್‌ ಅಮೇರಿಕಾದ ನ್ಯೂಜೆರ್ಸಿಯಲ್ಲಿ ನಡೆದ ವಿಶ್ವ ಮಟ್ಟದ ಕಿರಿಯ ವಿಶೇಷಚೇತನ ಚೆಸ್‌ ಚ್ಯಾಂಪಿಯನ್‌ಶಿಪ್‌ನ ಏಳನೇ ಸುತ್ತಿನಲ್ಲಿ 5.5 ಅಂಕ ಗಳಿಸಿ ಚ್ಯಾಂಪಿಯನ್‌ ಆಗಿದ್ದಾರೆ.
Vijaya Karnataka Web achievement of sdm college students
ಎಸ್‌ಡಿಎಂ ಕಾಲೇಜ್‌ ವಿದ್ಯಾರ್ಥಿಗಳ ಸಾಧನೆ

ವಿದ್ಯಾರ್ಥಿಗಳ ಸಾಧನೆ: ಬಿ.ಎಸ್‌ಸಿ. 5ನೇ ಸೆಮ್‌ ವಿದ್ಯಾರ್ಥಿನಿ ರಾಜೇಶ್ವರಿ ನಾಯ್ಕ ಮತ್ತು ಬಿ.ಎಸ್‌ಸಿ. 3ನೇ ಸೆಮ್‌ ವಿದ್ಯಾರ್ಥಿ ಅತುಲ್‌ ಎಚ್‌. ಅರ್ವಾರೆ ಇವರು ಕೇಂದ್ರ ಸರಕಾರ ನೀಡುತ್ತಿರುವ ಇನ್ಸ್‌ಪಾಯರ್‌ ವಿದ್ಯಾರ್ಥಿವೇತನಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ.

ಅತುಲ್‌ ಎಚ್‌. ಅರ್ವಾರೆ ಈ ಸ್ಕಾಲರ್‌ಶಿಪ್‌ ಜತೆಗೆ ಬೆಂಗಳೂರಿನ ಜವಾಹರಲಾಲ್‌ ನೆಹರು ಎಡ್ವಾನ್ಸಡ್‌ ಸೆಂಟರ್‌ ಮತ್ತು ವಿಜ್ಞಾನ ಸಂಶೋಧನಾ ಕೇಂದ್ರ ನಡೆಸುವ ಪೋಸ್‌ ಪ್ರಾಜೆಕ್ಟ್ಗೆ ಆಯ್ಕೆಯಾಗಿ ಬೇಸಿಗೆ ರಜೆಯಲ್ಲಿ ರಸಾಯನ ಶಾಸ್ತ್ರ ವಿಷಯದಲ್ಲಿ ಒಂದು ತಿಂಗಳು ತರಬೇತಿ ಪಡೆದಿದ್ದಾರೆ.

ಬಿ.ಎಸ್‌ಸಿ. ಅಂತಿಮ ವರ್ಷದ ವಿದ್ಯಾರ್ಥಿನಿ ಸಹನಾ ಶೇಟ್‌ ಐಐಟಿ ಜಾಮ್‌ ರಾಷ್ಟ್ರೀಯ ಮಟ್ಟದ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ರಾರ‍ಯಂಕ್‌ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಪ್ರಾಚಾರ್ಯರು ಸಂತಸ ವ್ಯಕ್ತ ಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ