ಆ್ಯಪ್ನಗರ

ಶ್ರೀನಿಕೇತನ ವಿದ್ಯಾರ್ಥಿಗಳ ಸಾಧನೆ

ಶಿರಸಿ : ಕದಂಬ ಸಹೋದಯ ಸ್ಕೂಲ್‌ ಕಾಂಪ್ಲೆಕ್ಸ ಕಾರವಾರದ ಅಮೃತ ವಿದ್ಯಾಲಯದಲ್ಲಿ ಏರ್ಪಡಿಸಿದ್ದ ಕಥೆ ಹೇಳುವ ಸ್ಪರ್ಧೆಯಲ್ಲಿ ತಾಲೂಕಿನ ಇಸಳೂರಿನ ಶ್ರೀನಿಕೇತನ ಶಾಲೆಯ ವಿದ್ಯಾರ್ಥಿಗಳು ಸಾಧನೆ ತೋರಿದ್ದಾರೆ.

Vijaya Karnataka 27 Jul 2019, 5:00 am
ಶಿರಸಿ : ಕದಂಬ ಸಹೋದಯ ಸ್ಕೂಲ್‌ ಕಾಂಪ್ಲೆಕ್ಸ ಕಾರವಾರದ ಅಮೃತ ವಿದ್ಯಾಲಯದಲ್ಲಿ ಏರ್ಪಡಿಸಿದ್ದ ಕಥೆ ಹೇಳುವ ಸ್ಪರ್ಧೆಯಲ್ಲಿ ತಾಲೂಕಿನ ಇಸಳೂರಿನ ಶ್ರೀನಿಕೇತನ ಶಾಲೆಯ ವಿದ್ಯಾರ್ಥಿಗಳು ಸಾಧನೆ ತೋರಿದ್ದಾರೆ.
Vijaya Karnataka Web achievement of sriniketan students
ಶ್ರೀನಿಕೇತನ ವಿದ್ಯಾರ್ಥಿಗಳ ಸಾಧನೆ


ಹಿರಿಯರ ವಿಭಾಗ ಕನ್ನಡ ಕಥೆ ಹೇಳುವುದರಲ್ಲಿ ಹತ್ತನೇ ತರಗತಿಯ ರಕ್ಷಿತಾ ಹೆಗಡೆ ಪ್ರಥಮ ಮತ್ತು ಕಿರಿಯರ ವಿಭಾಗ ಹಿಂದಿಯಲ್ಲಿ ಏಳನೇ ತರಗತಿಯ ಅರ್ಚಿತಾ ಎಚ್‌. ಎಸ್‌. ದ್ವಿತೀಯ ಸ್ಥಾನ ಪಡೆದಿದ್ದಾರೆ. ಹಾಗೇ ಅಂಕೋಲಾದ ಹಿಮಾಲಯ ಪಬ್ಲಿಕ್‌ ಸ್ಕೂಲ್‌ನಲ್ಲಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಹಿರಿಯರ ವಿಭಾಗ ಕನ್ನಡದಲ್ಲಿ ಹತ್ತನೇ ತರಗತಿಯ ತೇಜಸ್ವಿ ವಿ.ಹೆಗಡೆ ದ್ವಿತೀಯ, ಇಂಗ್ಲಿಷನಲ್ಲಿ ಹತ್ತನೇ ತರಗತಿಯ ಸಂಜಿತ್‌ ಪಂಡಿತ್‌ ದ್ವಿತೀಯ, ಕಿರಿಯರ ವಿಭಾಗ ಇಂಗ್ಲಿಷನಲ್ಲಿ ಆರನೇ ತರಗತಿಯ ನವ್ಯಶ್ರೇಯಾ ಪ್ರಥಮ ಮತ್ತು ಕನ್ನಡದಲ್ಲಿ ಏಳನೇ ತರಗತಿಯ ಪ್ರಣತಿ ಹೆಗಡೆ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ