ಆ್ಯಪ್ನಗರ

ಮಹಾತ್ಮರ ಚಿಂತನೆಗಳನ್ನು ಅಳವಡಿಸಿಕೊಳ್ಳಿ

ಯಲ್ಲಾಪುರ : ತಾಲೂಕಾಡಳಿತದ ಆಶ್ರಯದಲ್ಲಿ ಪಟ್ಟಣದ ತಾಲೂಕು ಪಂಚಾಯಿತಿ ಆವರಣದ ಗಾಂಧಿ ಕುಟೀರದಲ್ಲಿ ಮಂಗಳವಾರ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ, ಅಂಬಿಗರ ಚೌಡಯ್ಯ ಜಯಂತಿ ಹಾಗೂ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮ ನಡೆಯಿತು.

Vijaya Karnataka 13 Feb 2019, 5:00 am
ಯಲ್ಲಾಪುರ : ತಾಲೂಕಾಡಳಿತದ ಆಶ್ರಯದಲ್ಲಿ ಪಟ್ಟಣದ ತಾಲೂಕು ಪಂಚಾಯಿತಿ ಆವರಣದ ಗಾಂಧಿ ಕುಟೀರದಲ್ಲಿ ಮಂಗಳವಾರ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ, ಅಂಬಿಗರ ಚೌಡಯ್ಯ ಜಯಂತಿ ಹಾಗೂ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮ ನಡೆಯಿತು.
Vijaya Karnataka Web KWR-12 YLP 5


ಉಪನ್ಯಾಸಕ ಡಾ.ದತ್ತಾತ್ರೇಯ ಗಾಂವ್ಕಾರ್‌ ಅವರು ವಿಶೇಷ ಉಪನ್ಯಾಸ ನೀಡಿ, ಮಹಾತ್ಮರ ಚಿಂತನೆಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಹಾತ್ಮರು ಉಪದೇಶಿಸಿದ ಸನ್ನಡತೆಗಳನ್ನು ಅನುಸರಿಸುವ ಸಾಮುದಾಯಿಕ ಜಾಗೃತಿ ಮೂಡಿಸಿಕೊಳ್ಳಬೇಕು. ಯಾವುದೇ ಜಯಂತಿಗಳು ಒಂದೇ ಸಮಾಜದ ಆಚರಣೆ ಆಗಬಾರದು. ಅಥವಾ ಇದೊಂದು ಪ್ರತಿಷ್ಠೆಯ ಆಚರಣೆಯೂ ಆಗಬಾರದು. ಈ ಮಹಾತ್ಮರ ಸಂಕಲ್ಪಗಳು ನಮ್ಮ ಜೀವನದಲ್ಲಿ ಹೊಸ ಆಶಯವನ್ನು ಪಡಿಮೂಡಿಸಬೇಕು. ಜ್ಞಾನಿಗಳಿಗೆ ಯಾವುದೇ ಜಾತಿಯ ಕಟ್ಟುಪಾಡುಗಳಿಲ್ಲ. ಮನುಜ ಕುಲದ ಎಲ್ಲರ ಒಳಿತೇ ಅವರ ಚಿಂತನೆಗಳ ಸಾರವಾಗಿದೆ. ಅವರೆಲ್ಲರೂ ಲೋಕಪಾವನ ದೃಷ್ಟಿಯಿಂದಲೇ ಬದುಕನ್ನು ಬಾಳಿದ್ದಾರೆ. ಅವರ ಸಂದೇಶಗಳನ್ನು ಸರಿಯಾಗಿ ಅಥೈರ್‍ಸಿಕೊಳ್ಳುವುದು ನಮ್ಮ ಸದುದ್ದೇಶವಾಗಬೇಕಿದೆ. ಮಹಾನ್‌ ತ್ಯಾಗಿಗಳಾದ ಈ ಮಹಾತ್ಮರು ಅರಿವು, ಇರುವುಗಳ ಬಗ್ಗೆ ಸ್ಪಷ್ಟವಾದ ಜಿಜ್ಞಾಸೆಗಳನ್ನು ಹೊಂದಿದ್ದರು. ಇಂತಹ ಮಹಾತ್ಮರ ಸಂದೇಶಗಳ ಪಾಲನೆಯೊಂದಿಗೆ ಕೀಳರಿಮೆ ಬಿಟ್ಟು ಜೀವನ ಸಾರ್ಥಕ ಮಾಡಿಕೊಳ್ಳಬೇಕು. ಇಂತಹ ಮಹಾತ್ಮರ ಭಾವಚಿತ್ರವನ್ನು ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿಟ್ಟು ಪೂಜಿಸುವಂತಾಗಬೇಕು. ಹಾಗಾದರೆ ಮಾತ್ರ ಮಹಾತ್ಮರ ಜಯಂತಿಗಳಿಗೆ ಅರ್ಥ ಬರುತ್ತದೆ ಎಂದರು.

ತಹಸೀಲ್ದಾರ ಡಿ.ಜಿ.ಹೆಗಡೆ ಅಧ್ಯಕ್ಷ ತೆ ವಹಿಸಿ ಮಾತನಾಡಿದರು. ತಾ.ಪಂ. ಅಧ್ಯಕ್ಷೆ ಭವ್ಯಾ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ದೈಹಿಕ ಶಿಕ್ಷ ಣ ಪರಿವೀಕ್ಷ ಕ ರವೀಂದ್ರ ಕಾಪ್ಸೆ ನಿರ್ವಹಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ