ಆ್ಯಪ್ನಗರ

ಮೋದಿ ವಿರುದ್ಧ ಪೋಸ್ಟ್‌: ವಾಟ್ಸಾಪ್‌ ಗ್ರೂಪ್ ಅಡ್ಮಿನ್‌ ಸೆರೆ

ಪ್ರಧಾನಿ ಮೋದಿ ಅವರ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಮಾಡಿರುವುದಕ್ಕಾಗಿ ಮುರ್ಡೇಶ್ವರದಲ್ಲಿ ವಾಟ್ಸಾಪ್‌ ಅಡ್ಮಿನ್‌ವೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ವಿಕ ಸುದ್ದಿಲೋಕ 2 May 2017, 2:48 pm
ಭಟ್ಕಳ: ಪ್ರಧಾನಿ ಮೋದಿ ಅವರ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಮಾಡಿರುವುದಕ್ಕಾಗಿ ಮುರ್ಡೇಶ್ವರದಲ್ಲಿ ವಾಟ್ಸಾಪ್‌ ಅಡ್ಮಿನ್‌ವೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
Vijaya Karnataka Web admin of whatsapp group held for offensive post against pm modi
ಮೋದಿ ವಿರುದ್ಧ ಪೋಸ್ಟ್‌: ವಾಟ್ಸಾಪ್‌ ಗ್ರೂಪ್ ಅಡ್ಮಿನ್‌ ಸೆರೆ


ಸಾಮಾಜಿಕ ಮಾಧ್ಯಮಗಳಲ್ಲಿ ಆಗುವ ಪೋಸ್ಟ್‌ಗಳಿಗೆ ಅಡ್ಮಿನ್‌ ಜವಾಬ್ದಾರಿ ಎಂಬ ಕಾನೂನು ಜಾರಿಗೊಂಡ ಬಳಿಕ ಕರ್ನಾಟಕದಲ್ಲಿ ದಾಖಲಾಗಿರುವ ಮೊದಲ ಪ್ರಕರಣ ಇದಾಗಿದೆ.

'ದಿ ಬಾಲ್ಸೆ ಬಾಯ್ಸ್‌' ಎಂಬ ವಾಟ್ಸಾಪ್‌ ಗ್ರೂಪ್‌ನ ಅಡ್ಮಿನ್‌ , ಬೈಲೂರು ನಿವಾಸಿ ಕೃಷ್ಣ ಸಣ್ಣತಮ್ಮ ನಾಯ್ಕ್‌ ಬಂಧಿತ ಆರೋಪಿ. ಆರೋಪಿ ಆಟೊ ಚಾಲಕ.

ಪ್ರಧಾನಿ ಮೋದಿ ಅವರನ್ನು ಕೆಟ್ಟದಾಗಿ ಮತ್ತು ಅಶ್ಲೀಲವಾಗಿ ಬಿಂಬಿಸುವ ಪೋಟೊವನ್ನು ವಾಟ್ಸಾಪ್‌ ಗ್ರೂಪ್‌ನಲ್ಲಿ ಪ್ರಸಾರ ಮಾಡಿದ್ದರು. ಮತ್ತೊಬ್ಬ ಆರೋಪಿ ಗಣೇಶ್‌ ನಾಯ್ಕ್‌ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದು, ಆರೋಪಿ ಬಾಲಕೃಷ್ಣ ನಾಯ್ಕ್‌ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ