ಆ್ಯಪ್ನಗರ

ಅದ್ಧೂರಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಗೆ

ಗೋಕರ್ಣ : ಕಳೆದ 3 ದಿನದಿಂದ ಈ ಭಾಗದ ಸಾರ್ವಜನಿಕ ಗಣೇಶ ವಿಸರ್ಜನಾ ಮೆರವಣಗೆ ಅದ್ದೂರಿಯಾಗಿ ನಡೆಯಿತು.

Vijaya Karnataka 11 Sep 2019, 5:00 am
ಗೋಕರ್ಣ : ಕಳೆದ 3 ದಿನದಿಂದ ಈ ಭಾಗದ ಸಾರ್ವಜನಿಕ ಗಣೇಶ ವಿಸರ್ಜನಾ ಮೆರವಣಗೆ ಅದ್ದೂರಿಯಾಗಿ ನಡೆಯಿತು.
Vijaya Karnataka Web 38149 GKN 2 A_24


ಇಲ್ಲಿನ ಬಿಜ್ಜೂರಿನಲ್ಲಿಭದ್ರಕಾಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಪ್ರತಿಷ್ಠಾಪಿಸಿರುವ ಗಣೇಶ ಮತ್ತು ರಥಬೀದಿಯ ಯಂಗಸ್ಟಾರ್‌ ಕ್ಲಬ್‌ನ ಅಹಲ್ಯಾಬಾಯಿ ಛತ್ರದಲ್ಲಿಪ್ರತಿಷ್ಠಾಪಿಸಿರುವ ಗಣೇಶನ ವಿಸರ್ಜನಾ ಮೆರವಣೆಗೆ ಅದ್ಧೂರಿಯಾಗಿ ನಡೆಯಿತು. ಬಿಜ್ಜೂರಿನಿಂದ ಮೇಲಿನ ಕೇರಿ ಮಾರ್ಗವಾಗಿ ಗಣೇಶ ಮೆರವಣಿಗೆ ಮುಖ್ಯ ಕಡಲ ತೀರಕ್ಕೆ ಸಾಗಿದರೆ, ಯಂಗಸ್ಟಾರ ಕ್ಲಬ್‌ ನ ಗಣೇಶನ ಮೆರವಣೆಗೆ ಕೋಟಿತೀರ್ಥಕ್ಕೆ ತೆರಳಿ ಪುನಃ ರಥಬೀದಿಗೆ ಬಂದು ಮುಖ್ಯ ಕಡಲ ತೀರಕ್ಕೆ ತೆರಳಿ ವಿರ್ಸಜಿಸಲಾಯಿತು. ಎರಡು ಮೆರವಣಿಗೆಯಲ್ಲಿಆಕರ್ಷಕ ವೇಷಗಳ ಕುಣಿತ, ಚಂಡೆನಾದ, ಚಿಕ್ಕ ಮಕ್ಕಳ ನೃತ್ಯ, ವಾದ್ಯಘೋಷ, ಮೆರಣೆಗೆಯುದ್ದಕ್ಕೂ ನಡೆದು ಜನರ ಮನಸೂರೆಗೊಂಡಿತು. ವಿಜಯ ವಿನಾಯಕ ಯುವಕ ಸಂಘದ ಸಾರ್ವಜನಿಕ ಗಣಪತಿ ಆಕರ್ಷಕ ಮೆರವಣಿಗೆ ಮೇಲಿನಕೇರಿಯಿಂದ ಮುಖ್ಯ ಕಡಲ ತೀರದವರೆಗೆ ಸಾಗಿತು. ಇದರಂತೆ ಅಶೋಕೆಯ, ಬಂಗ್ಲೆಗುಡ್ಡೆಯ ಸಾರ್ವಜನಿಕ ಗಣಪತಿಯ ವಿಸರ್ಜನಾ ಮೆರವಣಿಗೆ ನಡೆಯಿತು.

ಶ್ರೀ ಕ್ಷೇತ್ರ ಗೋಕರ್ಣ ಪ್ಯಾಸೆಂಜರ್‌ ರಿಕ್ಷಾ ಮಾಲಕರ ಹಾಗೂ ಚಾಲಕರ ಸಂಘದಿಂದ ಮೇಲಿನ ಕೇರಿಯಲ್ಲಿಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯ ವಿಸರ್ಜನಾ ಮೆರಣವಣಿಗೆ ವಿಜೃಂಭಣೆಯಿಂದ ನಡೆಯಿತು. ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸಿದೆ ಸಾವಿರಾರು ಜನರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ