ಆ್ಯಪ್ನಗರ

ಕಾರವಾರ: ಕೊರಿಯರ್‌ ಬಾಕ್ಸ್‌ನಲ್ಲೂ ಮದ್ಯ..!

ಗೋವಾ ಮದ್ಯದ ಬಾಟಲಿಗಳನ್ನು ಕೊರಿಯರ್‌ ಬಾಕ್ಸ್‌ಗಳಲ್ಲಿ ತುಂಬಿ ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿಯೊಂದನ್ನು ಇಲ್ಲಿನ ಮಜಾಳಿ ಚೆಕ್‌ ಪೋಸ್ಟ್‌ನಲ್ಲಿ ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

Vijaya Karnataka 15 May 2020, 8:24 pm
ಕಾರವಾರ : ಗೋವಾ ಮದ್ಯದ ಬಾಟಲಿಗಳನ್ನು ಕೊರಿಯರ್‌ ಬಾಕ್ಸ್‌ಗಳಲ್ಲಿತುಂಬಿ ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿಯೊಂದನ್ನು ಇಲ್ಲಿನ ಮಜಾಳಿ ಚೆಕ್‌ ಪೋಸ್ಟ್‌ನಲ್ಲಿ ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. 10 ಲಕ್ಷ ರೂ. ಮೌಲ್ಯದ ಲಾರಿ ಮತ್ತು 1.08 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯ ವಶಕ್ಕೆ ಪಡೆಯಲಾಗಿದ್ದು ಲಾರಿ ಚಾಲಕ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ.
Vijaya Karnataka Web ಮದ್ಯ
ಮದ್ಯ


ತಮಿಳುನಾಡಿನ ಕಾರ್ತಿ ಮತ್ತು ಮತ್ತು ಕುಮಾರ್‌ ಬಂಧಿತರು. ಆರೋಪಿಗಳು ಬೆಂಗಳೂರಿನ ನೋಂದಣಿ ಹೊಂದಿದ ಲಾರಿಯಲ್ಲಿ ಖಾಸಗಿ ಕೊರಿಯರ್‌ ಸಂಸ್ಥೆಯ ಬಾಕ್ಸ್‌ಗಳಲ್ಲಿ ಮದ್ಯದ ಬಾಟಲಿಗಳನ್ನು ತುಂಬಿ ಸಾಗಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಚೆಕ್‌ ಪೋಸ್ಟ್‌ನಲ್ಲಿ ಅಬಕಾರಿ ಅಧಿಕಾರಿಗಳು ತಪಾಸಣೆ ನಡೆಸಿದಾಗ ಅಕ್ರಮ ಮದ್ಯ ಸಾಗಾಟ ಪತ್ತೆಯಾಗಿದೆ ಎಂದು ಅಬಕಾರಿ ಉಪ ಆಯುಕ್ತ ವೈ. ಆರ್‌. ಮೋಹನ್‌ ತಿಳಿಸಿದ್ದಾರೆ.

ಈ ಮೊದಲು ಮಾಜಾಳಿ ಚೆಕ್‌ ಪೋಸ್ಟ್‌ನಲ್ಲಿ ಜೀವನಾವಷ್ಯಕ ವಸ್ತುಗಳನ್ನು ಸಾಗಿಸುತ್ತಿದ್ದ ಲಾರಿಯಲ್ಲಿ, ಜೋಯಿಡಾ ತಾಲೂಕಿನ ಅನಮೋಡ್‌ ಚೆಕ್‌ ಪೋಸ್ಟ್‌ನಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ಸಾಗಿಸುತ್ತಿದ್ದ ಲಾರಿಯಲ್ಲೂ ಅಕ್ರಮ ಮದ್ಯ ಪತ್ತೆಯಾಗಿತ್ತು. ಅವಷ್ಯಕ ಮತ್ತು ತುರ್ತು ಸೇವೆಗಳ ವಾಹನಗಳನ್ನೂ ಸಹ ಅಕ್ರಮ ಮದ್ಯ ಸಾಗಾಟಕ್ಕೆ ಬಳಸುತ್ತಿರುವುದು ಆತಂಕಕ್ಕೆ ಎಡೆಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ