ಆ್ಯಪ್ನಗರ

ಪರೋಪಕಾರದ ಜೀವನ ಅಜರಾಮರ: ಶೈಲಜಾ

ಗೋಕರ್ಣ: ಪರೋಪಕಾರಕ್ಕಾಗಿ ಯಾರು ಬದುಕುತ್ತಾರೋ ಅಂಥವರ ಹೆಸರು ಅಜರಾಮರವಾಗಿರುತ್ತದೆ. ಅಂತಹ ಬದುಕು ನಮ್ಮದಾಗಬೇಕು ಎಂದು ಅಂಕೋಲಾ ಜಿ.ಸಿ.ಕಾಲೇಜಿನ ಸಂಸ್ಕೃತ ಉಪನ್ಯಾಸಕಿ ಶೈಲಜಾ ಭಟ್ಟ ಹೇಳಿದರು.

Vijaya Karnataka 5 Jul 2019, 5:00 am
ಗೋಕರ್ಣ: ಪರೋಪಕಾರಕ್ಕಾಗಿ ಯಾರು ಬದುಕುತ್ತಾರೋ ಅಂಥವರ ಹೆಸರು ಅಜರಾಮರವಾಗಿರುತ್ತದೆ. ಅಂತಹ ಬದುಕು ನಮ್ಮದಾಗಬೇಕು ಎಂದು ಅಂಕೋಲಾ ಜಿ.ಸಿ.ಕಾಲೇಜಿನ ಸಂಸ್ಕೃತ ಉಪನ್ಯಾಸಕಿ ಶೈಲಜಾ ಭಟ್ಟ ಹೇಳಿದರು.
Vijaya Karnataka Web altruistic life ajamara stylja
ಪರೋಪಕಾರದ ಜೀವನ ಅಜರಾಮರ: ಶೈಲಜಾ


ಗೋಕರ್ಣದಲ್ಲಿ ನಡೆದ ಲಯನ್ಸ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಅವರು ಮಾತನಾಡಿದರು. ಮತ್ತೊಬ್ಬರಿಗೆ ನೆರವಾಗುತ್ತಾ ಸಮಾಜದಲ್ಲಿ ಸಾಮಾಜಿಕ ಕಾರ್ಯಚಟುವಟಿಕೆ ನಡೆಸುತ್ತಿರುವ ಇಲ್ಲಿನ ಲಯನ್ಸ ಕಾರ್ಯಕ್ರಮವನ್ನು ಅವರು ಪ್ರಶಂಸಿಸಿದರು. ಮಾಜಿ ಜಿಲ್ಲಾ ಗವರ್ನರ್‌ ಲ. ಗಣಪತಿ ನಾಯಕ ಮಾತನಾಡಿ, ಮನುಷ್ಯ ಸಮಾಜ ಸೇವೆಯಿಂದ ಶಾಂತಿ ನೆಮ್ಮದಿ ಕಾಣಬಹುದು ಎಂದರು.

ಸಂಸ್ಥಾಪಕ ಸದಸ್ಯ ಡಾ.ವಿ.ಆರ್‌.ಮಲ್ಲನ್‌ ಕ್ಲಬ್‌ ನಡೆದು ಬಂದ ಹಾದಿ ಕುರಿತು ವಿವರಿಸಿದರು. ಕಾರ್ಯದರ್ಶಿ ಅಮಿತ್‌ ಗೋಕರ್ಣ ವರದಿ ವಾಚಿಸಿದರು. ನೂತನ ಅಧ್ಯಕ್ಷ ರಾಗಿ ಲ.ಎನ್‌.ಎಸ್‌.ಲಮಾಣಿ, ಕಾರ್ಯದರ್ಶಿಯಾಗಿ ಲ.ಅನಿಲ ಶೇಟ್‌, ಖಜಾಂಚಿಯಾಗಿ ಲ.ದೀಪಕ ಅಡ್ವೇಕರ್‌, ದ್ವಿತೀಯ ಉಪಗರ್ವನರ್‌ ಎಂ.ಜಿ.ಎಫ್‌ ಶ್ರೀಕಾಂತ ಮೋರೆ ಪ್ರತಿಜ್ಞಾವಿಧಿ ಭೋದಿಸಿದರು.

ಇದೆ ಸಂದರ್ಭದಲ್ಲಿ ನೂತನ ಸದಸ್ಯರಾಗಿ ಶೈಲಜಾ ರಾಮೂರ್ತಿ ನಾಯಕ, ಸೀಮಾ ನಾಗರಾಜ ಹಿತ್ತಲಮಕ್ಕಿ, ನಾಗರಾಜ ಹನೇಹಳ್ಳಿ, ಶಿವರಾಮ ಗೋಪಿ ಸೇರ್ಪಡೆಗೊಂಡರು. ನಿರ್ಗಮಿತ ಅಧ್ಯಕ್ಷ ಲ.ಜಿ.ಕೆ.ಹೆಗಡೆ ಸ್ವಾಗತಿಸಿದರು. ನೂತನ ಕಾರ್ಯದರ್ಶಿ ಅನೀಲ್‌ ಶೇಟ್‌ ವಂದಿಸಿದರು. ರಾಮೂರ್ತಿ ನಾಯಕ ಕಾರ್ಯಕ್ರಮ ನಿರ್ವಹಿಸಿದರು. ಪ್ರಾರಂಭದಲ್ಲಿ ವಿಜಯಾ ಹೆಗಡೆ ಮತ್ತು ಜ್ಯೋತಿ ಶೇಟ್‌ ಪ್ರಾರ್ಥನಾ ಗೀತೆ ಹಾಡಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ