ಆ್ಯಪ್ನಗರ

ಅವನಿ ಗಾನಾಮೃತ, ಯಕ್ಷಾಭಿನಯ ಇಂದು

ಶಿರಸಿ : ಹೆಸರಾಂತ ಕಲಾವಿದರಿಂದ ಅವನಿ ಗಾನಾಮೃತ ಹಾಗೂ ಯಕ್ಷಾಭಿನಯ ಕಾರ್ಯಕ್ರಮ ನಗರದ ತೋಟಗಾರರ ಕಲ್ಯಾಣ ಮಂಟಪದಲ್ಲಿಜ.12ರ ಸಂಜೆ 4ಕ್ಕೆ ನಡೆಯಲಿದೆ. ಜೀವಜಲ ಕಾರ್ಯಪಡೆಯ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್‌ ಸಂಘಟಿಸಿದ್ದಾರೆ.

Vijaya Karnataka 12 Jan 2020, 5:00 am
ಶಿರಸಿ : ಹೆಸರಾಂತ ಕಲಾವಿದರಿಂದ ಅವನಿ ಗಾನಾಮೃತ ಹಾಗೂ ಯಕ್ಷಾಭಿನಯ ಕಾರ್ಯಕ್ರಮ ನಗರದ ತೋಟಗಾರರ ಕಲ್ಯಾಣ ಮಂಟಪದಲ್ಲಿಜ.12ರ ಸಂಜೆ 4ಕ್ಕೆ ನಡೆಯಲಿದೆ. ಜೀವಜಲ ಕಾರ್ಯಪಡೆಯ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್‌ ಸಂಘಟಿಸಿದ್ದಾರೆ.
Vijaya Karnataka Web uttara kannada
ಅವನಿ ಗಾನಾಮೃತ, ಯಕ್ಷಾಭಿನಯ ಇಂದು


ಸಂಜೆ 4ಕ್ಕೆ ಪ್ರಾರಂಭದಲ್ಲಿಸ್ಥಳೀಯ ಯುವಗಾಯಕಿ ಅನುಷಾ ಹೆಗಡೆ ಗಾನಸುಧೆ ಸಾದರ ಪಡಿಸುವರು. ತಬಲಾದಲ್ಲಿಶಂಕರ ಹೆಗಡೆ ಹಾಗೂ ಹಾರ್ಮೋನಿಯಂನಲ್ಲಿಅಜಯ ಹೆಗಡೆ ಸಾಥ್‌ ನೀಡಲಿದ್ದಾರೆ.

ನಂತರ ನಡೆಯುವ ಅವನಿ ಗಾನಾಮೃತದಲ್ಲಿರಾಷ್ಟ್ರ ಖ್ಯಾತಿಯ ಮಹಾರಾಷ್ಟ್ರದ ಪ್ರಥಮೇಶ ಲಘಾಟಿ ಮತ್ತು ಮುಗ್ಧಾ ವೈಶಂಪಾಯನ ಮತ್ತವರ ತಂಡ ಗಾನಾಮೃತ ಪ್ರಸ್ತುತ ಪಡಿಸಲಿದೆ. ತಬಲಾ, ಪಕ್ವಾಜ್‌, ರಿದಮ್‌ ಪ್ಯಾಡ್‌, ಕೀ ಬೋರ್ಡ್‌ ಸೇರಿದಂತೆ ಒಟ್ಟು ಎಂಟು ಜನ ಕಲಾವಿದರಿಂದ ಗಾನಾಮೃತ ನಡೆಯಲಿದೆ. ಇದೇ ಸಂದರ್ಭದಲ್ಲಿಆಯಾ ಹಾಡಿನ ಸಂದರ್ಭದ ನಿರೂಪಣೆಯನ್ನು ಚಿತ್ರ ನಟ ವಿN್ನೕಶ ಜೋಶಿ ನಡೆಸಿಕೊಡುವರು.

ನಂತರ ನಡೆಯುವ ಯಕ್ಷಾಭಿನಯ ಕಾರ್ಯಕ್ರಮದಲ್ಲಿಸಾಲಿಗ್ರಾಮ ಮೇಳದ ಪ್ರಧಾನ ಭಾಗವತ ಹಿಲ್ಲೂರು ರಾಮಕೃಷ್ಣ ಹೆಗಡೆ ಮತ್ತವರ ತಂಡ ವೈವಿಧ್ಯಮಯ ಯಕ್ಷಾಭಿನಯ ನಡೆಸಿಕೊಡುವರು. ಜೋಡಿ ಅಭಿನಯದಲ್ಲಿಚಂದ್ರಹಾಸ ಗೌಡ ಮತ್ತು ರಾಜೇಶ ಭಂಡಾರಿ ಪಾಲ್ಗೊಳ್ಳಲಿದ್ದು, ಮದ್ದಲೆಯಲ್ಲಿಪರಮೇಶ್ವರ ಭಂಡಾರಿ ಮತ್ತು ಚಂಡೆ ವಾದನದಲ್ಲಿಶಿವಾನಂದ ಕೋಟಾ ಪಾಲ್ಗೊಳ್ಳುವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ