ಆ್ಯಪ್ನಗರ

ಹಸಿವನ್ನು ತಣಿಸಿದ ಹೆಲಿಕ್ಯಾಪ್ಟರ್‌

ರಾಘು ಕಾಕರಮಠ ಅಂಕೋಲಾ: ಕಳೆದ ಆರು ದಿನಗಳಿಂದ ಜಲದಿಗ್ಬಂಧನಕ್ಕೊಳಗಾಗಿ ಅನ್ನ - ನೀರಿನಿಂದ ಬಳಲಿ ಬೆಂಡಾಗಿದ್ದ ಸಂತ್ರಸ್ಥರಿಗೆ ಗ್ರಾಮದಲ್ಲಿ ಹ್ಯಾಲಿಕ್ಯಾಪ್ಟರ್‌ ಮಾಡಿದ ಸದ್ದು ಕೊಂಚ ಮಟ್ಟಿಗೆ ನಿರಾಳತೆಯನ್ನು ತಂದಿತು. ನೌಕಾನೆಲೆಯ ರಕ್ಷ ಣಾ ಅಧಿಕಾರಿಗಳು ಹ್ಯಾಲಿಕಾಪ್ಟರ್‌ ಮೂಲಕ ಆಹಾರ ಎಸೆಯುತ್ತಿದ್ದಂತೆ ಸಂತ್ರಸ್ತರು ಓಡೋಡಿ ಹೋಗಿ ಎಸೆದ ಆಹಾರದ ಪೊಟ್ಟಣಗಳನ್ನು ತೆಗೆದುಕೊಂಡು ತಮ್ಮ ಹಸಿವನ್ನು ತಣಿಸಿಕೊಳ್ಳುತ್ತಿದ್ದ ಘಳಿಗೆ ಮನಕಲುಕುವಂತೆ ಮಾಡಿತು.

Vijaya Karnataka 11 Aug 2019, 5:00 am
ರಾಘು ಕಾಕರಮಠ ಅಂಕೋಲಾ: ಕಳೆದ ಆರು ದಿನಗಳಿಂದ ಜಲದಿಗ್ಬಂಧನಕ್ಕೊಳಗಾಗಿ ಅನ್ನ - ನೀರಿನಿಂದ ಬಳಲಿ ಬೆಂಡಾಗಿದ್ದ ಸಂತ್ರಸ್ಥರಿಗೆ ಗ್ರಾಮದಲ್ಲಿ ಹ್ಯಾಲಿಕ್ಯಾಪ್ಟರ್‌ ಮಾಡಿದ ಸದ್ದು ಕೊಂಚ ಮಟ್ಟಿಗೆ ನಿರಾಳತೆಯನ್ನು ತಂದಿತು. ನೌಕಾನೆಲೆಯ ರಕ್ಷ ಣಾ ಅಧಿಕಾರಿಗಳು ಹ್ಯಾಲಿಕಾಪ್ಟರ್‌ ಮೂಲಕ ಆಹಾರ ಎಸೆಯುತ್ತಿದ್ದಂತೆ ಸಂತ್ರಸ್ತರು ಓಡೋಡಿ ಹೋಗಿ ಎಸೆದ ಆಹಾರದ ಪೊಟ್ಟಣಗಳನ್ನು ತೆಗೆದುಕೊಂಡು ತಮ್ಮ ಹಸಿವನ್ನು ತಣಿಸಿಕೊಳ್ಳುತ್ತಿದ್ದ ಘಳಿಗೆ ಮನಕಲುಕುವಂತೆ ಮಾಡಿತು.
Vijaya Karnataka Web KWR-10ANK3A


ಗಂಗಾವಳಿ ನದಿ ಪ್ರವಾಹದಿಂದ ಸಂಪರ್ಕ ಕಳೆದುಕೊಂಡು, ಕಳೆದ ಆರು ದಿನಗಳಿಂದ ಜಲದಿಗ್ಬಂಧನಕ್ಕೊಳಗಾಗಿ ಅನ್ನ - ನೀರಿನಿಂದ ಬಳಲಿ, ಅನಾರೋಗ್ಯಕ್ಕೆ ತುತ್ತಾದ 6 ಗ್ರಾಮಗಳಿಗೆ ನೌಕಾನೆಲೆಯ ಹೆಲಿಕ್ಯಾಪ್ಟರ (ಎಎಲ್‌ಎಚ್‌) ಮೂಲಕ ಆಹಾರದ ಸಾಮಗ್ರಿ ಮತ್ತು ಪಡಿತರಗಳನ್ನು ವಿತರಿಸಲಾಯಿತು.

ತಾಲೂಕಿನ ಬಿದ್ರಳ್ಳಿ, ಡೊಂಗ್ರಿ, ಹೆಗ್ರಣಿ, ಕಲ್ಲೇಶ್ವರ, ಹೆಗ್ಗಾರ ಮತ್ತು ರಾಮನಗುಳಿ ಪ್ರದೇಶದಲ್ಲಿ ಇದ್ದ ಸಂತ್ರಸ್ಥರಿಗೆ ಹವಾಮಾನ ವೈಪರೀತ್ಯದ ನಡುವೆಯು ನೌಕಾನೆಲೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ 225 ಕೆಜಿ ಆಹಾರದ ಸಾಮಗ್ರಿ ಮತ್ತು ಔಷಧಿ ವಿತರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆಕಾಶದತ್ತ ನೋಡುತ್ತಿದ್ದ ಸಂತ್ರಸ್ತರು: ಆರು ದಿನಗಳಿಂದ ನಾಗರಿಕ ಸಂಪರ್ಕವನ್ನು ಕಳೆದುಕೊಂಡಿದ್ದ 618ಕ್ಕೂ ಹೆಚ್ಚು ಸಂತ್ರಸ್ತರನ್ನು ದೋಣಿಗಳನ್ನು ಬಳಸಿ ರಕ್ಷ ಣೆ ಮಾಡಲು ಸಾಧ್ಯವಾಗದ ಪ್ರದೇಶದಲ್ಲಿ ಜಲದಿಗ್ಬಂಧಕ್ಕೆ ಒಳಗಾಗಿದ್ದರು. ಆಹಾರವು ಇಲ್ಲದೇ, ಕುಡಿಯಲು ಶುದ್ಧ ನೀರು ಇಲ್ಲದೇ ಭಯದ ವಾತಾವರಣದ ನಡುವೆಯೇ ಹಸಿವಿನಿಂದ ಸಂತ್ರಸ್ತರು ಕಂಗೆಟ್ಟಿ ಹೋಗಿದ್ದರು.

ಶುಕ್ರವಾರ ಹೆಲಿಕ್ಯಾಪ್ಟರ್‌ ಆಗಮಿಸುತ್ತದೆ ಎಂದು ತಿಳಿದ ನಾಗರಿಕರು ಆಕಾಶದತ್ತ ನೋಡುತ್ತಿದ್ದರು. ಆದರೆ ಹವಾಮಾನದ ವೈಪರೀತ್ಯದ ಪರಿಣಾಮ ಶುಕ್ರವಾರ ಹ್ಯಾಲಿಕಾಪ್ಟ್‌ರ್‌ ಆಕಾಶದಲ್ಲಿ ಹಾರಲು ಸಾಧ್ಯವಾಗಿರಲಿಲ್ಲ. ಶನಿವಾರವೂ ಹವಾಮಾನ ವೈಪರೀತ್ಯ ಮುಂದುವರೆದರು ಸಹ, ನೌಕಾನೆಲೆಯ ರಕ್ಷ ಣಾ ಸಿಬ್ಬಂದಿ ಸಂತ್ರಸ್ತರಿಗೆ ಆಹಾರ ಸಾಮಗ್ರಿಗಳನ್ನು ಪೂರೈಸುವ ಮೂಲಕ ಅವರು ಕೊಂಚ ಮಟ್ಟಿಗೆ ಸುಧಾರಿಸಿಕೊಳ್ಳುವಂತೆ ಮಾಡಿದೆ.

ಜೇನು ಕಡಿತ : ಸುಂಕಸಾಳದ ಶಾಲೆಯ ಬಳಿ ಜೇನು ಗೂಡುಕಟ್ಟಿಕೊಂಡಿತ್ತು. ಹ್ಯಾಲಿಕ್ಯಾಪ್ಟರ್‌ ಇಳಿಯುತ್ತಿದ್ದಂತೆ, ಗಾಳಿಯ ರಭಸಕ್ಕೆ ಜೇನಿನ ಹುಳ ಎದ್ದು, ಜನರ ಮೇಲೆ ದಾಳಿ ಮಾಡಿದ ಘಟನೆಯು ನಡೆಯಿತು. ಅನೇಕರು ನೀರಿಗೆ ಹಾರಿ ಜೇನಿನ ಕಡಿತದಿಮದ ತಪ್ಪಿಸಿಕೊಂಡರು. ವರದಿಗೆ ಹೋದ ಪತ್ರಕರ್ತರು ಸಹ ಜೇನಿನ ಕಾಟ ಎದುರಿಸುವಂತಾಯಿತು.

ಮತ್ತೆ ಉಪವಾಸ ಬಿದ್ದ ಲಾರಿ ಚಾಲಕರು: ಯಲ್ಲಾಪುರದಿಂದ - ಅಂಕೋಲಾದ ಹೆದ್ದಾರಿಯಲ್ಲಿ ಸಂತ್ರಸ್ಥರಾಗಿರುವ ಲಾರಿ ಚಾಲಕ ಮತ್ತು ಕ್ಲೀನರ್‌ ಅವರಿಗೆ ಆಹಾರ ನೀಡಲು ಕಳೆದ 3 ದಿನಗಳಿಂದ ಜಿಲ್ಲಾಡಳಿತ ಕ್ರಮ ಕೈಗೊಂಡಿತ್ತು. ಹೆದ್ದಾರಿಯಲ್ಲಿ ನಿಂತ ನೀರು ಶನಿವಾರ ಬೆಳಿಗ್ಗೆ ಕಡಿಮೆಯಾದ ಪರಿಣಾಮ ಹೆದ್ದಾರಿ ಸಂಚಾರ ಸುಗಮವಾಗಿತ್ತು. ಆದರೆ ಯಲ್ಲಾಪುರದ ಅರಬೈಲ ಘಟ್ಟದ ಬಳಿ ಮಣ್ಣು ಕುಸಿತಗೊಂಡ ಪರಿಣಾಮ ಮತ್ತೆ ಸಂಚಾರ ಕಡಿತಗೊಳ್ಳುವಂತಾಯಿತು. ಲಾರಿ ಚಾಲಕರಿಗೆ ತೆರೆಯಲಾಗಿದ್ದ 2 ಕಾಳಜಿ ಕೇಂದ್ರಗಳಿಗೆ ಆಹಾರ ಪೂರೈಸಬೇಕಾಗಿದ್ದ ಶಿಕ್ಷ ಣ ಇಲಾಖೆ ಆಹಾರವನ್ನು ನೀಡದೆ ಇರುವ ಪರಿಣಾಮ ಮತ್ತೆ ಚಾಲಕರು ಮತ್ತು ಕ್ಲೀನರ್‌ರು ಉಪವಾಸ ಬೀಳುವಂತಾಯಿತು. ದಾನಿಗಳು ನೀಡಿದ ನೀರು, ಬಿಸ್ಕಿಟ್‌ ಸೇವಿಸಿ ಚಾಲಕರು ಹೊಟ್ಟೆ ತುಂಬಿಸಿಕೊಳ್ಳುವಂತಾಯಿತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ