ಆ್ಯಪ್ನಗರ

ಅಂಗನವಾಡಿ ಶೌಚಗೃಹಗಳಲ್ಲಿ ಸ್ವಚ್ಛತೆ ಇಲ್ಲ

ಸಿದ್ದಾಪುರ : ಪಟ್ಟಣದ ತಾ.ಪಂ. ಸಭಾಭವನದಲ್ಲಿ ಗುರುವಾರ ತಾ.ಪಂ. ಅಧ್ಯಕ್ಷ ಸುಧೀರ್‌ ಗೌಡರ್‌ ಅಧ್ಯಕ್ಷ ತೆಯಲ್ಲಿ ಮಾಸಿಕ ಕೆಡಿಪಿ ಸಭೆ ನಡೆಯಿತು.

Vijaya Karnataka 9 Mar 2019, 5:00 am
ಸಿದ್ದಾಪುರ : ಪಟ್ಟಣದ ತಾ.ಪಂ. ಸಭಾಭವನದಲ್ಲಿ ಗುರುವಾರ ತಾ.ಪಂ. ಅಧ್ಯಕ್ಷ ಸುಧೀರ್‌ ಗೌಡರ್‌ ಅಧ್ಯಕ್ಷ ತೆಯಲ್ಲಿ ಮಾಸಿಕ ಕೆಡಿಪಿ ಸಭೆ ನಡೆಯಿತು.
Vijaya Karnataka Web anganwadi journals are not clean
ಅಂಗನವಾಡಿ ಶೌಚಗೃಹಗಳಲ್ಲಿ ಸ್ವಚ್ಛತೆ ಇಲ್ಲ


ಸುಧೀರ್‌ ಗೌಡರ್‌ ಮಾತನಾಡಿ, ತಾಲೂಕಿನ ಹಲವು ಅಂಗನವಾಡಿಗಳಲ್ಲಿ ನೀರಿನ ಟ್ಯಾಂಕ್‌, ಶೌಚಗೃಹ ಸ್ವಚ್ಛತೆಯ ಬಗ್ಗೆ ಆಕ್ಷೇಪಗಳು ಕೇಳಿಬರುತ್ತಿದ್ದು ಈ ಬಗ್ಗೆ ಸಿಡಿಪಿಒ ಅಧಿಕಾರಿಗಳು ಎಲ್ಲ ಅಂಗನವಾಡಿಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಇಲ್ಲದಿದ್ದರೆ ಏನೇ ತೊಂದರೆಯಾದರೂ ನೀವೇ ಜವಾಬ್ದಾರರಾಗುತ್ತೀರಿ ಎಚ್ಚರಿಕೆ ನೀಡಿದರು.

ತಾಲೂಕು ಆಸ್ಪತ್ರೆಯಲ್ಲಿ ಆಯುಷ್ಮಾನ್‌ ಭಾರತ ಯೋಜನೆಯ ಕಾರ್ಡ್‌ ಮಾಡಿಸಲು ಹೋದರೆ ಅಲ್ಲಿಯ ಸಿಬ್ಬಂದಿಗಳು ಜನರ ಹತ್ತಿರ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ. ಇದರ ಬಗ್ಗೆ ನನ್ನ ಹತ್ತಿರ ಸಾಕ್ಷಿಗಳಿದೆ. ವ್ಯವಸ್ಥೆ ಸರಿಪಡಿಸದಿದ್ದರೆ ಮುಂದೆ ನಾವೇ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ತಾ.ಪಂ. ಸದಸ್ಯ ನಾಸೀರ್‌ ಖಾನ್‌ ತಾಲೂಕು ಆಡಳಿತ ವೈದ್ಯಾಧಿಕಾರಿಗೆ ಸೂಚನೆ ನೀಡಿದರು.

ಪ್ರಭಾರಿ ಆಡಳಿತ ವೈದ್ಯಾಧಿಕಾರಿ ಡಾ.ಪ್ರಕಾಶ ಪುರಾಣಿಕ, ಇದು ನಮ್ಮ ಗಮನಕ್ಕೆ ಬಂದಿಲ್ಲ. ಸಾಕ್ಷಿಗಳಿದ್ದರೆ ನೀಡಿ. ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದಾಗ ಸಮಯ ಬಂದಾಗ ಮತ್ತಷ್ಟು ದಾಖಲೆಗಳೊಂದಿಗೆ ಬರುತ್ತೇನೆ ಎಂದು ನಾಸೀರ್‌ ಖಾನ್‌ ಹೇಳಿದರು.

ತಾಲೂಕು ವೈದ್ಯಾಧಿಕಾರಿ ಡಾ.ಲಕ್ಷ್ಮೀಕಾಂತ ನಾಯ್ಕ ಮಾತನಾಡಿ ತಾಲೂಕಿನ ಹೇರೂರು ವಿಭಾಗ ಬಿಟ್ಟು ಉಳಿದೆಲ್ಲ ಕಡೆಗಳಲ್ಲಿ ಮಂಗನ ಕಾಯಿಲೆ ಇದೆ. ಈ ಕುರಿತು ಜನತೆ ಜಾಗೃತಿ ವಹಿಸಬೇಕು. ತಾರಗೋಡ, ಅರಶೀನಗೋಡ, ಬಾಳಗೋಡ ಹಾಗೂ ಸೂರಗಾಲ್‌ನಲ್ಲಿ ಮಂಗನ ಕಾಯಿಲೆ ಹೆಚ್ಚಿದೆ. ಈ ಭಾಗದಲ್ಲಿ ಜನತೆ ಹೆಚ್ಚು ಜಾಗೃತಿ ವಹಿಸಬೇಕಾಗಿದೆ. ತಾಲೂಕಿನಲ್ಲಿ 3 ಜನರಿಗೆ ಇಲಿ ಜ್ವರವೂ ಕಾಣಿಸಿಕೊಂಡಿದೆ ಎಂದು ಹೇಳಿದರು.

ತಹಸೀಲ್ದಾರ ಗೀತಾ ಸಿ.ಜಿ.ಮಾತನಾಡಿ, ಪಿಎಂ ಕಿಸಾನ್‌ ಯೋಜನೆ ಕುರಿತು ಪ್ರಚಾರ ಕಡಿಮೆ ಆಗಿದೆ. ಇಂದಿನವರೆಗೆ ಶೇ.50ರಷ್ಟು ರೈತರು ಮಾತ್ರ ಅರ್ಜಿ ತುಂಬಿದ್ದಾರೆ. ತಾಲೂಕಿನಲ್ಲಿ 1994 ಸಣ್ಣ ರೈತರಿದ್ದಾರೆ. ಅವರು ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು. ತಹಸೀಲ್ದಾರ ಕಚೇರಿಯಲ್ಲಿ ಆರ್‌ಟಿಸಿ ಕೊಡಲು ನಾಲ್ಕು ಕೌಂಟರ್‌ ತೆರೆಯಲಾಗಿದೆ ಎಂದು ಹೇಳಿದರು.

ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಮಾತನಾಡಿ, ನಾಲ್ಕು ಕೌಂಟರ್‌ ತೆರೆದಿದ್ದರೂ ಏನೂ ಪ್ರಯೋಜನವಾಗುತ್ತಿಲ್ಲ. ಸರ್ವರ್‌ ತೊಂದರೆಯಿಂದ ಜನರು ವಾಪಸ್‌ ಹೋಗುವ ಸ್ಥಿತಿ ಉಂಟಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ತಾ.ಪಂ. ಸದಸ್ಯರಾದ ವಿವೇಕ್‌ ಭಟ್ಟ, ರಘುಪತಿ ಹೆಗಡೆ, ಭಾಗ್ಯಶ್ರೀ ನಾಯ್ಕ, ಪದ್ಮಾವತಿ ಮಡಿವಾಳ ಹಾಗೂ ತಾಪಂ ಮುಖ್ಯಾಧಿಕಾರಿ ದಿನೇಶ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ