ಆ್ಯಪ್ನಗರ

ಅಂಜುಮನ್‌ ಎಜ್ಯುಕೇಶನ್‌ ಸೊಸೈಟಿಗೆ ಆಯ್ಕೆ

ಹಳಿಯಾಳ : ಪಟ್ಟಣದಲ್ಲಿರುವ ಅಂಜುಮನ್‌-ಎ-ಇಸ್ಲಾಂ ದಿ ಇಕ್ಬಾಲ್‌ ಎಜ್ಯುಕೇಶನ್‌ ಸೊಸೈಟಿ ನೂತನ ಅಧ್ಯಕ್ಷ ರಾಗಿ ಉದ್ಯಮಿ ಅಲಿಂ ರಫೀಕ್‌ಅಹ್ಮದ ಬಸರಿಕಟ್ಟಿ, ಉಪಾಧ್ಯಕ್ಷ ರಾಗಿ ಇಮ್ತಿಯಾಜ್‌ಮಹ್ಮದ ಶೇಖ, ಕಾರ್ಯದರ್ಶಿಯಾಗಿ ಮಹ್ಮದಗೌಸ ಮುಲ್ಲಾ ಮತ್ತು ಖಜಾಂಚಿಯಾಗಿ ರಯೀಸ್‌ಅಹ್ಮದ ಕೊಠೂರ ಆಯ್ಕೆಯಾಗಿದ್ದಾರೆ.

Vijaya Karnataka 16 Dec 2018, 5:00 am
ಹಳಿಯಾಳ : ಪಟ್ಟಣದಲ್ಲಿರುವ ಅಂಜುಮನ್‌-ಎ-ಇಸ್ಲಾಂ ದಿ ಇಕ್ಬಾಲ್‌ ಎಜ್ಯುಕೇಶನ್‌ ಸೊಸೈಟಿ ನೂತನ ಅಧ್ಯಕ್ಷ ರಾಗಿ ಉದ್ಯಮಿ ಅಲಿಂ ರಫೀಕ್‌ಅಹ್ಮದ ಬಸರಿಕಟ್ಟಿ, ಉಪಾಧ್ಯಕ್ಷ ರಾಗಿ ಇಮ್ತಿಯಾಜ್‌ಮಹ್ಮದ ಶೇಖ, ಕಾರ್ಯದರ್ಶಿಯಾಗಿ ಮಹ್ಮದಗೌಸ ಮುಲ್ಲಾ ಮತ್ತು ಖಜಾಂಚಿಯಾಗಿ ರಯೀಸ್‌ಅಹ್ಮದ ಕೊಠೂರ ಆಯ್ಕೆಯಾಗಿದ್ದಾರೆ.
Vijaya Karnataka Web KWR-16 HLY 2 ANJUMAN


ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಉದ್ಯಮಿ ಅಲಿಂ ಬಸರಿಕಟ್ಟಿ ಅವರ ನೇತೃತ್ವದ ತಂಡವು 15 ಸ್ಥಾನಗಳ ಪೈಕಿ 10 ಸ್ಥಾನಗಳಲ್ಲಿ ವಿಜಯ ಸಾಧಿಸಿ ಅಂಜುಮನ್‌ ಸಂಸ್ಥೆಯನ್ನು ಕೈ ವಶಕ್ಕೆ ಪಡೆದುಕೊಂಡಿತ್ತು. ಶನಿವಾರ ತಹಸೀಲ್ದಾರ ವಿದ್ಯಾಧರ ಗುಳಗುಳಿ ಅವರ ಅಧ್ಯಕ್ಷ ತೆಯಲ್ಲಿ ಮಸೀದಿ ಅಂಗಡಿ ಸಂಕೀರ್ಣದಲ್ಲಿರುವ ಅಂಜುಮನ್‌ ಕಚೇರಿಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ರ ಸ್ಥಾನಗಳಿಗೆ ನಾಮಪತ್ರಗಳನ್ನು ಪಡೆಯಲಾಯಿತು. ಅಧ್ಯಕ್ಷ ಸ್ಥಾನಕ್ಕೆ ಅಲಿಂ ಬಸರಿಕಟ್ಟಿ ಮತ್ತು ಲಿಯಾಖತ್‌ಅಲಿ ದಲಾಲ್‌ ತಂಡದ ಸುಭಾನಿ ಹುಬ್ಬಳ್ಳಿ ಮತ್ತು ಉಪಾಧ್ಯಕ್ಷ ರ ಸ್ಥಾನಕ್ಕೆ ಇಮ್ತಿಯಾಜ್‌ ಶೇಖ ಮತ್ತು ರಾಜು ಮುಲ್ಲಾ ನಾಮಪತ್ರ ಸಲ್ಲಿಸಿದರು. ಅಲಿಂ ಅವರು 15 ಮತಗಳ ಪೈಕಿ 10 ಮತಗಳನ್ನು ಪಡೆದು ಬಹುಮತದಿಂದ ಅಧ್ಯಕ್ಷ ರಾಗಿ ಆಯ್ಕೆಯಾದರು. ಪ್ರತಿಸ್ಪರ್ಧಿ ಕೇವಲ 5 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಅದೇ ರೀತಿಯಾಗಿ ಉಪಾಧ್ಯಕ್ಷ ರಾಗಿ ಇಮ್ತಿಯಾಜ್‌ 10 ಮತಗಳಿಂದ ಆಯ್ಕೆಯಾದರೆ, ರಾಜು ಮುಲ್ಲಾ ಕೇವಲ 5 ಮತಗಳನ್ನು ಪಡೆದರು.

ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಅಲಿಂ ಬಸರಿಕಟ್ಟಿ ಮಾತನಾಡಿ, ಮುಸ್ಲಿಂ ಸಮುದಾಯ ಆರ್ಥಿಕವಾಗಿ, ರಾಜಕೀಯವಾಗಿ, ಶೈಕ್ಷ ಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿದೆ. ಸಮಾಜದ ಉನ್ನತಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಅದನ್ನು ಮುಖ್ಯವಾಹಿನಿಗೆ ತರಬೇಕಾಗಿದೆ. ಮುಂದಿನ ದಿನಗಳಲ್ಲಿ ಸಮಾಜದ ಹಿರಿಯರ ಮಾರ್ಗದರ್ಶನ ಮತ್ತು ಆಯ್ಕೆಗೊಂಡ ಎಲ್ಲಾ ನಿರ್ದೇಶಕರ ಸಹಕಾರದಿಂದ ಸಮಾಜದ ಉನ್ನತಿಗಾಗಿ ಶ್ರಮಿಸುವುದಾಗಿ ತಿಳಿಸಿದರು.

ಕಾರ್ಯದರ್ಶಿಯಾಗಿ ಮಹ್ಮದಗೌಸ ಮುಲ್ಲಾ ಮತ್ತು ಖಜಾಂಚಿಯಾಗಿ ರಯೀಜ್‌ ಕೋಟೂರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ವಕ್ಫ್ ಬೋರ್ಡ್‌ ಅಧ್ಯಕ್ಷ ಖಯ್ಯಾಂ ಮುಗದ, ಜಿಲ್ಲಾ ವಕ್ಫ್ ಅಧಿಕಾರಿ ತಾಜುದ್ದೀನ್‌ ಶೇಖ ಮತ್ತು ಇನ್ನಿತರ ನಿರ್ದೇಶಕರು ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ