ಆ್ಯಪ್ನಗರ

ಅಭಿವೃದ್ಧಿ ಭಾಷ್ಯ ಬರೆದ ಅಂಕೋಲಾ ಉತ್ಸವ

ಅಂಕೋಲಾ : ಅಭಿವೃದ್ಧಿ ವಿಚಾರದಲ್ಲಿರಾಜಕೀಯ ಸಲ್ಲದು. ಅಂಕೋಲಾದ ಒಳ್ಳೆಯ ಮನಸ್ಸುಗಳಿಂದ ಸಾಂಸ್ಕೃತಿಕ ನವೋಲ್ಲಾಸದ ಜೊತೆಗೆ ಅಭಿವೃದ್ಧಿಯ ಚಿಂತನೆಗೆ ವೇದಿಕೆಯಾಗಿ ನಿಂತ ಅಂಕೋಲಾ ಉತ್ಸವವು ಹೊಸದೊಂದು ಭಾಷ್ಯ ಬರೆದಿದೆ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು.

Vijaya Karnataka 13 Jan 2020, 5:00 am
ಅಂಕೋಲಾ : ಅಭಿವೃದ್ಧಿ ವಿಚಾರದಲ್ಲಿರಾಜಕೀಯ ಸಲ್ಲದು. ಅಂಕೋಲಾದ ಒಳ್ಳೆಯ ಮನಸ್ಸುಗಳಿಂದ ಸಾಂಸ್ಕೃತಿಕ ನವೋಲ್ಲಾಸದ ಜೊತೆಗೆ ಅಭಿವೃದ್ಧಿಯ ಚಿಂತನೆಗೆ ವೇದಿಕೆಯಾಗಿ ನಿಂತ ಅಂಕೋಲಾ ಉತ್ಸವವು ಹೊಸದೊಂದು ಭಾಷ್ಯ ಬರೆದಿದೆ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು.
Vijaya Karnataka Web ankola festival written by the development commentary
ಅಭಿವೃದ್ಧಿ ಭಾಷ್ಯ ಬರೆದ ಅಂಕೋಲಾ ಉತ್ಸವ


ಅವರು ಶನಿವಾರ ಜೈಹಿಂದ ಮೈದಾನದಲ್ಲಿಸಂಗಾತಿ ರಂಗಭೂಮಿ ಆಶ್ರಯದಲ್ಲಿನಡೆದ 4ನೇ ವರ್ಷದ 7 ದಿನಗಳ ಅಂಕೋಲಾ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ತಾ.ಪಂ. ಅಧ್ಯಕ್ಷೆ ಸುಜಾತಾ ಗಾಂವಕರ ಅಧ್ಯಕ್ಷತೆ ವಹಿಸಿ ಮಾತನಾಡಿ, ಉತ್ಸವಗಳು ನಮ್ಮ ಹಿಂದಿನ ಜನಾಂಗದ ಬದುಕಿನ ಚಿತ್ರಣಗಳನ್ನು ಮತ್ತು ಇಲ್ಲಿಯ ಹೋರಾಟದ ಮಹನೀಯರ ಬದುಕನ್ನು ನಾಡಿಗೆ ತಿಳಿಸುವಂತಾಗಬೇಕು. ಅಭಿವೃದ್ಧಿ ವಿಚಾರದಲ್ಲಿಪಕ್ಷಾತೀತವಾಗಿ ಒಂದಾಗಿ ತಾಲೂಕಿನ ಅಭಿವೃದ್ಧಿಗೆ ಕೈಜೋಡಿಸಬೇಕು. ಮುಂದಿನ ದಿನಗಳಲ್ಲಿಉತ್ಸವಗಳು ಎಲ್ಲರನ್ನು ಸೇರಿಸುವ ಕೊಂಡಿ ಆಗಲಿ ಎಂದರು.

ವೇದಿಕೆಯ ಪ್ರಾಯೋಜಕರಾದ ಉದ್ದಿಮೆದಾರ ಇಮ್ತಿಯಾಜ್‌ ಶೇಖ, ನಿವೃತ್ತ ಪ್ರಾಚಾರ್ಯ ರವೀಂದ್ರ ಕೇಣಿ, ಕುಮಟಾದ ಡಯಟ್‌ನ ಉಪನ್ಯಾಸಕ ನಾಗರಾಜ್‌ ನಾಯಕ, ಕಲಾಕಾರರಾದ ವಿಷ್ಣು ಗೌಡ, ಅಶೋಕ. ಗೌಡ. ಅಂಬಾರಕೊಡ್ಲ, ಶಾಸಕರ ಆಪ್ತ ಕಾರ್ಯದರ್ಶಿಗಳಾದ ಗುರುಪ್ರಸಾದ ನಾಯ್ಕ, ಆಶಾ ನಾಯ್ಕ ಅವರನ್ನು ಸನ್ಮಾನಿಸಲಾಯಿತು.

ಕೆ.ಪಿ.ಸಿ.ಸಿ. ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ, ಜಿ.ಪಂ. ಸದಸ್ಯರಾದ ಜಗದೀಶ್‌ ನಾಯಕ, ಹಿರಿಯ ನ್ಯಾಯವಾದಿ ಸುಭಾಷ ನಾರ್ವೇಕರ, ಉದ್ಯಮಿ ಸಾಯಿ ಕೆ.ಗಾಂವಕರ, ಪ.ಪಂ. ಮಾಜಿ ಅಧ್ಯಕ್ಷ ಅರುಣ್‌ ನಾಡಕರ್ಣಿ, ನಾಟಿ ವೈದ್ಯ ಹನುಮಂತ ಗೌಡ, ಪತ್ರಕರ್ತರ ಸಂಘದ ಅಧ್ಯಕ್ಷ ರಾಘು ಕಾಕರಮಠ, ಅರ್ಬನ್‌ ಬ್ಯಾಂಕಿನ ನಿರ್ದೇಶಕ ಗೋವಿಂದ್ರಾಯ ನಾಯಕ ಮಾತನಾಡಿದರು.

ಸಾಮಾಜಿಕ ಕಾರ್ಯಕರ್ತರಾದ ವಿಜಯಕುಮಾರ ನಾಯ್ಕ, ವಿನಾಯಕ ನಾಯ್ಕ ವೇದಿಕೆಯಲ್ಲಿದ್ದರು. ವಿಠ್ಠಲದಾಸ ಕಾಮತ ಆಶಯ ನುಡಿ ಆಡಿದರು. ಸಂಘಟಕ ಕೆ.ರಮೇಶ್‌ ಪ್ರಾಸ್ತಾವಿಕ ಮಾತನಾಡಿದರು. ಭಾಸ್ಕರ ನಾರ್ವೇಕರ ಸ್ವಾಗತಿಸಿದರು. ರಾಜೇಶ ನಾಯಕ ನಿರೂಪಿಸಿದರು. ಜಗದೀಶ ನಾಯಕ ವಂದಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ