ಆ್ಯಪ್ನಗರ

ಕಾರವಾರ ಎಪಿಎಂಸಿ ಅಧ್ಯಕ್ಷ, ಉಪಾದ್ಯಕ್ಷರ ಆಯ್ಕೆ

ಕಾರವಾರ : ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ ಸಾಯಿನಾಥ ನಾಯ್ಕ ಹಾಗೂ ಉಪಾಧ್ಯಕ್ಷರಾಗಿ ಗಣಪತಿ ನಾಯ್ಕ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಅಭಿನಂದಿಸಿ ಮಾತನಾಡಿದ ಶಾಸಕಿ ರೂಪಾಲಿ ನಾಯ್ಕ , ರೈತರಿಗೆ ಅನುಕೂಲವಾಗುವಂತೆ ಸಮಿತಿ ಸದಸ್ಯರು ಮತ್ತು ಅಧ್ಯಕ್ಷ ಉಪಾಧ್ಯಕ್ಷರು

Vijaya Karnataka 1 Jun 2020, 5:00 am
ಕಾರವಾರ : ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ ಸಾಯಿನಾಥ ನಾಯ್ಕ ಹಾಗೂ ಉಪಾಧ್ಯಕ್ಷರಾಗಿ ಗಣಪತಿ ನಾಯ್ಕ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಅಭಿನಂದಿಸಿ ಮಾತನಾಡಿದ ಶಾಸಕಿ ರೂಪಾಲಿ ನಾಯ್ಕ , ರೈತರಿಗೆ ಅನುಕೂಲವಾಗುವಂತೆ ಸಮಿತಿ ಸದಸ್ಯರು ಮತ್ತು ಅಧ್ಯಕ್ಷ ಉಪಾಧ್ಯಕ್ಷರು ಕಾರ್ಯ ನಿರ್ವಹಿಸಬೇಕು. ರೈತರಿಂದ ಯಾವುದೇ ದೂರುಗಳು ಬರದಂತೆ ನೋಡಿಕೊಳ್ಳಬೇಕು. ಪರಸ್ಪರ ಸಹಕಾರ ಮನೋಭಾವದಿಂದ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿಉಪಸ್ಥಿತರಿದ್ದ ಎಪಿಎಂಸಿ ಸದಸ್ಯರಾದ ವಿದ್ಯಾಧರ ಗಾಂವಕರ, ನಾರಾಯಣ ಹೆಗಡೆ, ಸುಬ್ರಾಯ ಸಿದ್ದಿ, ಸೀತಾ ಗೌಡ, ಪ್ರಸಾದ ಕಾಮತ, ಕುಸ್ಟಾ ಹುಲಸ್ವಾರ, ಸುಜಾತಾ ದಳವಿ, ನಾಮ ನಿರ್ದೇಶಿತ ಸದಸ್ಯರಾದ ಮುರಾರಿ ಗಾಂವಕರ, ಉದಯ ನಾಯ್ಕ, ಮಂಗಲಾ ನಾಯ್ಕ ಹಾಗೂ ಅಂಕೋಲಾ ಬಿಜೆಪಿ ಮಂಡಲ ಅಧ್ಯಕ್ಷ ಸಂಜಯ ನಾಯ್ಕ, ಗ್ರಾಮಿಣ ಘಟಕದ ಅಧ್ಯಕ್ಷ ಸುಭಾಷ ಗುನಗಿ, ನಗರ ಘಟಕದ ಅಧ್ಯಕ್ಷ ನಾಗೇಶ ಕುರ್ಡೇಕರ, ಪಕ್ಷದ ಮುಖಂಡರಾದ ವಿನಾಯಕ ಪಡ್ತಿ, ಪ್ರದೀಪ ಗುನಗಿ ಶುಭ ಕೋರಿದರು.
Vijaya Karnataka Web apmc president vice president election
ಕಾರವಾರ ಎಪಿಎಂಸಿ ಅಧ್ಯಕ್ಷ, ಉಪಾದ್ಯಕ್ಷರ ಆಯ್ಕೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ