ಆ್ಯಪ್ನಗರ

ಸಾರಿಗೆ ನಿಯಮ ಸರಳಗೊಳಿಸಲು ಮನವಿ

ದಾಂಡೇಲಿ: ಹೊಸ ಸಾರಿಗೆ ನಿಯಮದಿಂದ ಕೈಗಾರಿಕಾ ನಗರ ದಾಂಡೇಲಿಯ ಕಾರ್ಮಿಕರಿಗೆ ಸಂಕಟ ತಂದಿಟ್ಟಿದ್ದು, ಈ ನಿಯಮದಲ್ಲಿಒಂದಿಷ್ಟು ಸರಳಿಕರಣಗೊಳಿಸಿ ಅನುಕೂಲ ಮಾಡಿಕೊಡುವಂತೆ ನಗರದ ಸಾಮಾಜಿಕ ಕಾರ್ಯಕರ್ತರು ಹಾಗೂ ನಾಗರಿಕರು ಸಿ.ಪಿ.ಐ ಅನೀಸ್‌ ಮುಜಾವರ ಮೂಲಕ, ಜಿಲ್ಲಾಪೊಲೀಸ್‌ ವರಿಷ್ಠಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

Vijaya Karnataka 17 Sep 2019, 5:00 am
ದಾಂಡೇಲಿ: ಹೊಸ ಸಾರಿಗೆ ನಿಯಮದಿಂದ ಕೈಗಾರಿಕಾ ನಗರ ದಾಂಡೇಲಿಯ ಕಾರ್ಮಿಕರಿಗೆ ಸಂಕಟ ತಂದಿಟ್ಟಿದ್ದು, ಈ ನಿಯಮದಲ್ಲಿಒಂದಿಷ್ಟು ಸರಳಿಕರಣಗೊಳಿಸಿ ಅನುಕೂಲ ಮಾಡಿಕೊಡುವಂತೆ ನಗರದ ಸಾಮಾಜಿಕ ಕಾರ್ಯಕರ್ತರು ಹಾಗೂ ನಾಗರಿಕರು ಸಿ.ಪಿ.ಐ ಅನೀಸ್‌ ಮುಜಾವರ ಮೂಲಕ, ಜಿಲ್ಲಾಪೊಲೀಸ್‌ ವರಿಷ್ಠಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
Vijaya Karnataka Web appeal to simplify transport rule
ಸಾರಿಗೆ ನಿಯಮ ಸರಳಗೊಳಿಸಲು ಮನವಿ


ಪರಿಷ್ಕೃತ ಸಾರಿಗೆ ನಿಯಮಕ್ಕೆ ತಮ್ಮ ವಿರೋಧವಿಲ್ಲಎಂದು ಸ್ಪಷ್ಟಪಡಿಸಿರುವ ಕಾರ್ಮಿಕರು ಕೆಲ ನಿಯಮಗಳನ್ನು ದಾಂಡೇಲಿಯಲ್ಲಿಸಡಿಲುಗೊಳಿಸುವಂತೆ ಒತ್ತಾಯಿಸಿದ್ದಾರೆ. ನಗರದಲ್ಲಿಶೇ. 80 ರಷ್ಟು ಕಾರ್ಮಿಕರಿದ್ದಾರೆ. ಕಾಗದ ಕಂಪನಿಯ ಕಾರ್ಮಿಕರು ಹಾಗೂ ಗುತ್ತಿಗೆದಾರರಿಗೆ ಕಂಪನಿ ಈಗಾಗಲೇ ಕಂಪನಿಯೊಳಗೆ ಹೆಲ್ಮೆಟ್‌ ಕಡ್ಡಾಯಗೊಳಿಸಿದೆ. ಹೆಲ್ಮೆಟ್‌ ಹಾಕದೇ ಕರ್ತವ್ಯಕ್ಕೆ ಕಾರ್ಮಿಕರು ಬರುವ ಹಾಗಿಲ್ಲ. ಹಾಗಾಗಿ ಕಾರ್ಮಿಕರು ನಿತ್ಯ ಮನೆಯಿಂದ ಹೋಗಿ ಬರುವಾಗ ಕಂಪನಿ ನೀಡಿರುವ ಹೆಲ್ಮೆಟನ್ನು ಹಾಕಿಕೊಂಡೇ ಹೋಗಬೇಕಾಗುತ್ತದೆ.

ಆದರೆ ಈಗ ಸಾರಿಗೆ ನಿಯಮದಿಂದ ಹೊರಗೆ ಬೇರೆ ಹೆಲ್ಮೆಟ್‌ ಧರಿಸಬೇಕಾಗುತ್ತದೆ. ಕಾರ್ಮಿಕರು ಕಂಪನಿಯ ಹೆಲ್ಮೆಟ್‌ ಹಾಕಿ ಸವಾರಿ ಮಾಡಿದರೆ ಪೊಲೀಸರು ಒಪ್ಪುವುದಿಲ್ಲ. ಕಂಪನಿಯೊಳಗಡೆ ಬೇರೆ ಹೆಲ್ಮೆಟ್‌ ನಡೆಯುವುದಿಲ್ಲ. ಇದರಿಂದ ಕಾರ್ಮಿಕರು ಉಭಯಸಂಕಟಕ್ಕೊಳಗಾಗಿದ್ದಾರೆ. ಇದರಿಂದ ಕಾರ್ಮಿಕರು ಹಾಗೂ ಕಂಪನಿಯ ಗುತ್ತಿಗೆದಾರರು ಎರರಡೆರಡು ( ಹೊರಗೆ ವಾಹನ ಸವಾರಿ ಮಾಡುವಾಗ ಒಂದು, ಕಂಪನಿಯೊಳಗಡೆ ಇರುವಾಗ ಮತ್ತೊಂದು) ಹೆಲ್ಮೆಟ್‌ನ್ನು ನಿತ್ಯ ತಮ್ಮ ಜೊತೆ ಒಯ್ಯಬೇಕಾಗುತ್ತದೆ. ಇದು ಬಹಳ ಕಷ್ಟವಾಗುತ್ತಿದೆ.

ಹಾಗಾಗಿ ನಗರದಲ್ಲಿಕಂಪನಿಯ ಕಾರ್ಮಿಕರು ಕರ್ತವ್ಯಕ್ಕೆ ಮನೆಯಿಂದ ಹೋಗಿ ಬರುವಾಗ ಕಾರ್ಖಾನೆ ಪೂರೈಸಿರುವ ಹೆಲ್ಮೆಟನ್ನು ಧರಿಸಲು ಅವಕಾಶ ನೀಡುವಂತೆ ನಗರಸಭಾ ಸದಸ್ಯರೂ ಹಾಗೂ ಕಂಪನಿ ಗುತ್ತಿಗೆದಾರರಾದ ಮೋಹನ ಹಲವಾಯಿ, ನಗರಸಭೆ ಮಾಜಿ ಸದಸ್ಯ ಹಾಗೂ ಕಂಪನಿಯ ಗುತ್ತಿಗೆದಾರ ಅನಿಲ ದಂಡಗಲ, ನಗರಸಭೆ ಮಾಜಿ ಸದಸ್ಯ ಕೀರ್ತಿ ಗಾಂವಕರ, ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಧಿಕಾರಿ ರಾಜೇಶ ತಿವಾರಿ, ಪ್ರಮುಖರಾದ ಶ್ರೀಕಾಂತ ಬಿಜಪುರ, ರಾಮಕೃಷ್ಣ ಗಾಂವಕರ, ಓಂ ಪ್ರಕಾಶ ಗೌರ, ರಾಘವೇಂದ್ರ ಪೈ, ರೂಪೇಶ ಪವಾರ್‌, ಸ್ಟಿಪನ್‌ ಡಯಾಸ್‌, ತುಕಾರಾಮ ಬಿಂಗೆ, ಮಹಾದೇವ ಸಾಂಗ್ಲೀಕರ, ಸದಾನಂದ ಪಾಟೀಲ, ಭರತ ಪಾಟೀಲ, ಸಲಿಂ ಸಯ್ಯದ್‌ ಮುಂತಾದವರು ಲಿಖಿತ ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ