ಆ್ಯಪ್ನಗರ

ಡೀಸೆಲ್‌ ಪಾಸ್‌ ಪಡೆಯಲು ಅರ್ಜಿ

ಕಾರವಾರ : ಮೀನುಗಾರಿಕಾ ದೋಣಿಗಳಿಗೆ 2019-20ನೇ ಸಾಲಿನ ಪರವಾನಗಿ ಮತ್ತು ಡೀಸೆಲ್‌ ಪಾಸ್‌ ಪುಸ್ತಕ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

Vijaya Karnataka 13 Jul 2019, 5:00 am
ಕಾರವಾರ : ಮೀನುಗಾರಿಕಾ ದೋಣಿಗಳಿಗೆ 2019-20ನೇ ಸಾಲಿನ ಪರವಾನಗಿ ಮತ್ತು ಡೀಸೆಲ್‌ ಪಾಸ್‌ ಪುಸ್ತಕ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
Vijaya Karnataka Web application for diesel pass
ಡೀಸೆಲ್‌ ಪಾಸ್‌ ಪಡೆಯಲು ಅರ್ಜಿ


ಅರ್ಹ ಮೀನುಗಾರಿಕಾ ದೋಣಿ ಮಾಲೀಕರು ದೋಣಿ ಹಾಗೂ ಅದರಲ್ಲಿ ಅಳವಡಿಸಿರುವ ಸಾಮಗ್ರಿಗಳನ್ನು ಪರಿಶೀಲಿಸಲು ಮೀನುಗಾರಿಕಾ ಇಲಾಖೆ ಅಧಿಕಾರಿಗಳ ಬಳಿ ಹಾಜರುಪಡಿಸಬೇಕು. ಭೌತಿಕ ಪರಿಶೀಲನೆಗೆ ಹಾಜರುಪಡಿಸದ ದೋಣಿಗಳ ನೋಂದಣಿಯನ್ನು ರದ್ದುಪಡಿಸಲು ಕ್ರಮವಹಿಸಲಾಗುವುದು. ಡೀಸೆಲ್‌ ಪಾಸ್‌ ಪುಸ್ತಕ ಪಡೆಯಲು ಸಲ್ಲಿಸುವ ಅರ್ಜಿಯೊಂದಿಗೆ ನಿಗದಿತ ಎಲ್ಲಾ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸತಕ್ಕದ್ದು. ಎಲ್ಲ ದೋಣಿಗಳಲ್ಲಿ ನಿಗದಿತ ಪ್ರಮಾಣದಲ್ಲಿ ಜೀವರಕ್ಷ ಕ ಲೈಫ್‌ಜಾಕೆಟ್‌, ಲೈಫ್‌ ಬಾಯ್‌ ಇರಬೇಕು. ದೋಣಿಗಳಿಗೆ ಕಲರ್‌ ಕೋಡಿಂಗ್‌ ಮಾಡಿರಬೇಕು.

ನಿಗದಿತ ಅರ್ಜಿ ನಮೂನೆಯನ್ನು ಇಲಾಖೆ ಕಚೇರಿಯಿಂದ ಪಡೆದು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮೀನುಗಾರಿಕೆ ಉಪ ನಿರ್ದೇಶಕರ ಕಚೇರಿ ಕಾರವಾರ ಅಥವಾ ಕುಮಟಾದ ಮೀನುಗಾರಿಕಾ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ