ಆ್ಯಪ್ನಗರ

ದೀನ್‌ದಯಾಳ್‌ ಸ್ಪರ್ಶ ಯೋಜನೆಗೆ ಅರ್ಜಿ ಆಹ್ವಾನ

ಶಿರಸಿ :ಭಾರತೀಯ ಅಂಚೆ ಇಲಾಖೆ ದೀನ್‌ ದಯಾಳ್‌ ಸ್ಪರ್ಶ ಯೋಜನೆಯಡಿಯಲ್ಲಿ ವಿದ್ಯಾರ್ಥಿ ವೇತನಕ್ಕಾಗಿ 6 ರಿಂದ 9 ನೇ ತರಗತಿಯಲ್ಲಿ ಓದುತ್ತಿರುವ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

Vijaya Karnataka 27 Jun 2018, 5:00 am
ಶಿರಸಿ :ಭಾರತೀಯ ಅಂಚೆ ಇಲಾಖೆ ದೀನ್‌ ದಯಾಳ್‌ ಸ್ಪರ್ಶ ಯೋಜನೆಯಡಿಯಲ್ಲಿ ವಿದ್ಯಾರ್ಥಿ ವೇತನಕ್ಕಾಗಿ 6 ರಿಂದ 9 ನೇ ತರಗತಿಯಲ್ಲಿ ಓದುತ್ತಿರುವ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
Vijaya Karnataka Web application invitation for dindayal touch plan
ದೀನ್‌ದಯಾಳ್‌ ಸ್ಪರ್ಶ ಯೋಜನೆಗೆ ಅರ್ಜಿ ಆಹ್ವಾನ


ಅರ್ಜಿ ಸಲ್ಲಿಸಲು ಜು.20 ಕೊನೆ ದಿನಾಂಕವಾಗಿದೆ. ವಿದ್ಯಾರ್ಥಿಗಳಲ್ಲಿ ಅಂಚೆ ಚೀಟಿಗಳ ಸಂಗ್ರಹ ಹವ್ಯಾಸದ ಕುರಿತು ಆಸಕ್ತಿ ಮೂಡಿಸುವ ದೃಷ್ಟಿಯಿಂದ ಈ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ಆಯ್ಕೆಯಾದವರಿಗೆ ವರ್ಷಕ್ಕೆ 6,000 ರೂ. ನೀಡಲಾಗುತ್ತದೆ.

ಈ ವಿದ್ಯಾರ್ಥಿವೇತನಕ್ಕೆ ಅರ್ಹತೆ ಪಡೆಯಲು ಕ್ವಿಜ್‌ ರಸಪ್ರಶ್ನೆ ಹಾಗೂ ಅಂಚೆ ಚೀಟಿ ಸಂಗ್ರಹದ ಪ್ರೊಜೆಕ್ಟ್ ಕೆಲಸ ಮಾಡಬೇಕಾಗುತ್ತದೆ. ಅರ್ಜಿ ಸಲ್ಲಿಸುವ ಮುನ್ನ ಅಂಚೆ ಚೀಟಿ ಸಂಗ್ರಹ ಅಕೌಂಟ್‌ನ್ನು ಹತ್ತಿರದ ಅಂಚೆ ಕಚೇರಿಯಲ್ಲಿ ತೆರೆದು ಅಕೌಂಟ್‌ ನಂಬರ್‌ ಅರ್ಜಿಯಲ್ಲಿ ನಮೂದಿಸಬೇಕಾಗುತ್ತದೆ. ಅರ್ಜಿ ಜತೆಗೆ ಇತ್ತೀಚಿನ ಎರಡು ಭಾವಚಿತ್ರ, ಹಿಂದಿನ ತರಗತಿಯಲ್ಲಿ ಶೇ.60ಕ್ಕಿಂತ ಹೆಚ್ಚು ಅಂಕ ಪಡೆದಿರುವ ಪ್ರತಿ ಲಗತ್ತಿಸಬೇಕು. ಅಂಚೆ ಚೀಟಿ ಸಂಗ್ರಹದ ಅಕೌಂಟ್‌ ತೆರೆಯಲು 250 ರೂ. ಶುಲ್ಕವಿದ್ದು ಇದ್ದು ಅರ್ಜಿ ನಮೂನೆ ಅಂಚೆ ಅಧೀಕ್ಷ ಕರ ಕಚೇರಿ, ಶಿರಸಿ ಇಲ್ಲವೇ ಹತ್ತಿರದ ಅಂಚೆ ಕಚೇರಿಯನ್ನು ಸಂಪರ್ಕಿಸಿ ಪಡೆಯಬಹುದಾಗಿದೆ. ಮಾಹಿತಿಗಾಗಿ 08384 - 236231, 235026, ಮೊ: 9449872148.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ