ಆ್ಯಪ್ನಗರ

ವಿದ್ಯಾರ್ಥಿಗಳ ಕಷ್ಟ ಕೇಳೋರಾರ‍ಯರು?

ಕಾರವಾರ : ಜಿಲ್ಲೆಯಲ್ಲಿ ಕಾಲೇಜುಗಳು ಪ್ರಾರಂಭಗೊಂಡು ಒಂದು ತಿಂಗಳು ಕಳೆಯುತ್ತ ಬಂದರೂ ಹಿಂದುಳಿದ ವರ್ಗಗಳ ಇಲಾಖೆಯ ಮೆಟ್ರಿಕ್‌ ನಂತರದ ವಿದ್ಯಾರ್ಥಿಗಳ ಹಾಸ್ಟೆಲ್‌ಗಳಲ್ಲಿ ಹೊಸ ವಿದ್ಯಾರ್ಥಿಗಳಿಗೆ ಪ್ರವೇಶ ಸಿಗದೇ ಪರದಾಡುವಂತಾಗಿದೆ.

Vijaya Karnataka 21 Jun 2019, 5:00 am
ಕಾರವಾರ : ಜಿಲ್ಲೆಯಲ್ಲಿ ಕಾಲೇಜುಗಳು ಪ್ರಾರಂಭಗೊಂಡು ಒಂದು ತಿಂಗಳು ಕಳೆಯುತ್ತ ಬಂದರೂ ಹಿಂದುಳಿದ ವರ್ಗಗಳ ಇಲಾಖೆಯ ಮೆಟ್ರಿಕ್‌ ನಂತರದ ವಿದ್ಯಾರ್ಥಿಗಳ ಹಾಸ್ಟೆಲ್‌ಗಳಲ್ಲಿ ಹೊಸ ವಿದ್ಯಾರ್ಥಿಗಳಿಗೆ ಪ್ರವೇಶ ಸಿಗದೇ ಪರದಾಡುವಂತಾಗಿದೆ.
Vijaya Karnataka Web are students difficult listeners
ವಿದ್ಯಾರ್ಥಿಗಳ ಕಷ್ಟ ಕೇಳೋರಾರ‍ಯರು?


ಹೌದು.. ಸರಕಾರದ ಈ ಶಿಕ್ಷ ಣ ವಿರೋಧಿ ನೀತಿಯಿಂದ ಬೇಸತ್ತ ಕೆಲ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮೊಟಕುಗೊಳಿಸಿ ತಮ್ಮ ಮನೆಯತ್ತ ಮುಖ ಮಾಡಿದರೆ, ಇನ್ನೂ ಕೆಲವರು ಬಾಡಿಗೆ ಮನೆಯಲ್ಲಿ ಕಾಲ ಕಳೆಯುವಂತಾಗಿದೆ.

ಕಾಲೇಜು ಪ್ರಾರಂಭವಾಗಿ ಒಂದು ತಿಂಗಳಾಗುತ್ತ ಬಂದಿದೆ. ಆದರೆ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಹಾಗೂ ಅಲ್ಪ ಸಂಖ್ಯಾತರ ವಸತಿ ನಿಲಯಗಳು ಇನ್ನೂ ಬಾಗಿಲು ತೆರೆದಿದಲ್ಲ. ಪ್ರಥಮ ಪಿ.ಯು.ಸಿ. ಗೆ ಪ್ರವೇಶ ಪಡೆದ ನೂರಾರು ಹಾಸ್ಟೆಲ್‌ ಆಕಾಂಕ್ಷಿ ವಿದ್ಯಾರ್ಥಿಗಳಿಗೆ ಇದು ತೀವ್ರ ಆಘಾತ ನೀಡಿದೆ. ಒಪೊ್ಪತ್ತಿನ ಊಟಕ್ಕೂ ತತ್ವಾರ ಪಡುವ ಕುಟುಂಬದಿಂದ ಬಂದ ವಿದ್ಯಾರ್ಥಿಗಳಿದ್ದಾರೆ. ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಪಾಲಕರು ಹಾಸ್ಟೆಲ್‌ ಪ್ರವೇಶಕ್ಕಾಗಿ ಕಾಯುತ್ತಿದ್ದಾರೆ. ಆದರೆ ಸರಕಾರಕ್ಕೆ ಈ ವಿದ್ಯಾರ್ಥಿಗಳ ಹಾಗೂ ಪಾಲಕರ ರೋದನ ಕೇಳಿಸುತ್ತಿಲ್ಲ.

ಹಾಸ್ಟೆಲ್‌ ಪ್ರಾರಂಭವಾಗುವ ಯಾವುದೇ ಲಕ್ಷ ಣಗಳು ಕಾಣಿಸುತ್ತಿಲ್ಲ. ಇದರಿಂದ ಒಬ್ಬೊಬ್ಬರೇ ವಿದ್ಯಾರ್ಥಿಗಳು ಕಾಲೇಜು ಬಿಟ್ಟು ಮನೆಯ ದಾರಿ ತುಳಿದಿದ್ದಾರೆ. ಇವರಲ್ಲಿ ಜಿಲ್ಲೆಯ ಅತಿ ಕುಗ್ರಾಮ ಪ್ರದೇಶವಾದ ಜೋಯಿಡಾ, ಗುಳ್ಳಾಪುರ, ಹಳವಳ್ಳಿ, ಮಲಗದ್ದೆ, ಹೀಗೆ ಹತ್ತಾರು ಗ್ರಾಮದಿಂದ, ಗುಡ್ಡಗಾಡು ಪ್ರದೇಶಗಳಿಂದ ದಿನಾಲು ಬಸ್‌ ಟಿಕೆಟ್‌ಗೆ ಹಣ ನೀಡಿ ಕಾಲೇಜಿಗೆ ಬರುತ್ತಿದ್ದಾರೆ. ಈ ವಿದ್ಯಾರ್ಥಿಗಳು ದಿನಕ್ಕೆ ಕನಿಷ್ಠ ಎಂದರೂ 80 ರೂ. ಪ್ರಯಾಣಕ್ಕೆ ವ್ಯಯಿಸಬೇಕಾಗಿದ್ದು ಆರ್ಥಿಕವಾಗಿ ಹೊರೆಯಾಗುತ್ತಿದೆ. ಬಡ ವಿದ್ಯಾರ್ಥಿಗಳ ಪಾಲಕರು ಕೂಲಿ ಮಾಡುತ್ತಿರುವದರಿಂದ ಇವರಿಗೆ ದಿನಾಲು ಬಸ್‌ ಹಣ ನೀಡಲು ಸಾಧ್ಯವಾಗುತಿಲ್ಲ.

ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಶಿಕ್ಷ ಣ ಪಡೆಯಲು ಅನುಕೂಲವಾಗುವಂತೆ ಸರಕಾರ ವಸತಿ ನಿಲಯಗಳನ್ನು ಸ್ಥಾಪಿಸಿದೆ. ಆದರೆ ಹಾಸ್ಟೆಲ್‌ ಪ್ರವೇಶ ಮಾತ್ರ ಪ್ರತಿ ವರ್ಷ ಆಗಷ್ಟ 1 ರಿಂದ ಪ್ರಾರಂಭಿಸುತ್ತಲಿದೆ. ಸರಕಾರದ ಇಂತಹ ಅವೈಜ್ಞಾನಿಕ ನೀತಿಯಿಂದಾಗಿ ಮಕ್ಕಳು ಶಿಕ್ಷ ಣದಿಂದ ದೂರ ಉಳಿಯುವಂತಾಗಿದೆ.

ಎಷ್ಟು ಹಾಸ್ಟೆಲ್‌ ? : ಜಿಲ್ಲೆಯಲ್ಲಿ ಸುಮಾರು 33 ಮೆಟ್ರಿಕ್‌ ನಂತರ ಹಾಸ್ಟೇಲ್‌ಗಳಿವೆ. ಇದರಲ್ಲಿ ಬಾಲಕರ 12 ಹಾಗೂ ಬಾಲಕಿಯರ 13 ಹಾಸ್ಟೆಲ್‌ಗಳಿವೆ. 1320ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಹಾಸ್ಟೆಲ್‌ಗಳನ್ನು ಅವಲಂಭಿಸಿ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದಾರೆ. ಆದರೆ ಇನ್ನೂ ತನಕ ತರಗತಿಗೆ ಕುಳಿತಿಲ್ಲ. ಜುಲೈ ಕೊನೆಗೆ ಶೇ. 20 ರಷ್ಟು ವಿದ್ಯಾಭ್ಯಾಸ ಮುಗಿದು ಹೋಗಿರುತ್ತದೆ. ಹಾಗೆ ಇವರ ಹಾಜರಿಗಳಲ್ಲೂ ಕೂಡಾ ಖೋತಾ ಕಾಣಿಸಲಿದೆ. ಹೀಗಾಗಿ ಹಾಸ್ಟೆಲ್‌ ಆಕಾಂಕ್ಷಿ ವಿದ್ಯಾರ್ಥಿಗಳು ಹಿಂದುಳಿದ ವರ್ಗಗಳ ಹಾಗೂ ಅಲ್ಪ ಸಂಖ್ಯಾತರ ಇಲಾಖೆಯ ಧೋರಣೆಯಿಂದ ಕಂಗೆಟ್ಟಿದ್ದಾರೆ. ಶಿಕ್ಷ ಣದ ಪ್ರೋತ್ಸಾಹಕ್ಕೆ ಎಲ್ಲ ರೀತಿಯಲ್ಲೂ ನೆರವು ನೀಡುತ್ತಿರುವದಾಗಿ ಹೇಳುವ ಸರಕಾರಕ್ಕೆ ಈ ವಿದ್ಯಾರ್ಥಿಗಳ ಕಷ್ಟ ಅರ್ಥವಾಗೋದಿಲ್ಲವೇ ಎನ್ನುತ್ತಾರೆ ವಿದ್ಯಾರ್ಥಿಗಳ ಪಾಲಕರು.


ವಿದ್ಯಾರ್ಥಿಗಳ ಚಿಂತೆ : ಆನ್‌ಲೈನ್‌ ಮೂಲಕ ವಸತಿ ನಿಲಯಕ್ಕೆ ಅರ್ಜಿ ಸಲ್ಲಿಸಲು ಜುಲೈ 12ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸಲು ಇಷ್ಟು ವಿಳಂಬವಾದರೆ, ವಸತಿ ನಿಲಯ ಪ್ರಾರಂಭ ಯಾವಾಗ ಆಗುತ್ತದೆಯೋ ಎಂಬ ಚಿಂತೆಯಲ್ಲಿ ವಿದ್ಯಾರ್ಥಿಗಳಿದ್ದಾರೆ.

ಶೇ. 25 ಹಾಜರಿ ಖೋತಾ : ಶೇ. 75 ಹಾಜರಾತಿ ಇದ್ದರೆ ಮಾತ್ರ ಪರೀಕ್ಷೆ ಎದುರಿಸಲು ಅವಕಾಶ ನೀಡಲಾಗುತ್ತದೆ. ಆದರೆ ಹಾಸ್ಟೆಲ್‌ ಪ್ರಾರಂಭವಾಗುವದು ಅಗಸ್ಟ್‌ 1 ರಿಂದ. ಹೀಗಾಗಿ ಶೇ. 25 ಹಾಜರಿ ಖೋತಾ ಆಗಲಿದೆ. ಇದರಿಂದ ಶಿಕ್ಷಣದ ಮೇಲೆ ಪರಿಣಾಮ ಬೀರುವ ಆತಂಕ ವಿದ್ಯಾರ್ಥಿಗಳಿಗೆ ಎದುರಾಗಿದೆ.

ಜಿಲ್ಲೆಯಲ್ಲಿರುವ ಹಾಸ್ಟೆಲ್‌ಗಳು

ಅಂಕೋಲಾ : 2

ಭಟ್ಕಳ : 1

ಹಳಿಯಾಳ : 6

ಹೊನ್ನಾವರ : 1

ಕಾರವಾರ : 8

ಕುಮಟಾ : 3

ಮುಂಡಗೋಡ : 3

ಸಿದ್ದಾಪುರ ; 3

ಶಿರಸಿ : 3

ಸುಪಾ : 2

ಯಲ್ಲಾಪುರ : 1

ದಾಂಡೇಲಿ : 0


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ