ಆ್ಯಪ್ನಗರ

ಭೈರಾ ಗ್ರಾಮದ ಸಂತ್ರಸ್ತರಿಗೆ ನೆರವು

ಕಾರವಾರ : ಕಾಳಿ ನದಿ ಪ್ರವಾಹದಲ್ಲಿ ಮನೆಗಳಿಗೆ ನೀರು ನುಗ್ಗಿ ಹಾನಿಗೊಳಗಾಗಿರುವ ತಾಲೂಕಿನ ಭೈರಾ ಗ್ರಾಮದ ಸಂತ್ರಸ್ತರಿಗೆ ಉದ್ಯೋಗದಲ್ಲಿರುವ ಸ್ಥಳೀಯ ಯುವಕ ಯುವತಿಯರು ಆರ್ಥಿಕ ನೆರವು ನೀಡಿದರು.

Vijaya Karnataka 22 Aug 2019, 5:00 am
ಕಾರವಾರ : ಕಾಳಿ ನದಿ ಪ್ರವಾಹದಲ್ಲಿ ಮನೆಗಳಿಗೆ ನೀರು ನುಗ್ಗಿ ಹಾನಿಗೊಳಗಾಗಿರುವ ತಾಲೂಕಿನ ಭೈರಾ ಗ್ರಾಮದ ಸಂತ್ರಸ್ತರಿಗೆ ಉದ್ಯೋಗದಲ್ಲಿರುವ ಸ್ಥಳೀಯ ಯುವಕ ಯುವತಿಯರು ಆರ್ಥಿಕ ನೆರವು ನೀಡಿದರು.
Vijaya Karnataka Web assistance for the victims of bhaira village
ಭೈರಾ ಗ್ರಾಮದ ಸಂತ್ರಸ್ತರಿಗೆ ನೆರವು


ತಾಲೂಕಿನ ಭೈರಾದಲ್ಲಿ ನೆರೆಯಿಂದಾಗಿ ಸುಮಾರು 35ಕ್ಕೂ ಅಧಿಕ ಮನೆಗಳಿಗೆ ನೀರು ಸೇರಿಕೊಂಡು ಅನೇಕರು ಕಾಳಿಜಿ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿದ್ದರು. ಮನೆಯೊಳಗೆ ನೀರು ಸೇರಿಕೊಂಡಿರುವುದರಿಂದ ಆಹಾರ ಧಾನ್ಯ, ಬಟ್ಟೆ ಬರೆ ಹಾಗೂ ಇತರ ವಿದ್ಯುತ್‌ ಉಪಕರಣಗಳು ಹಾನಿಗೊಳಗಾಗಿದ್ದವು. ಇವರಿಗೆ ವಿವಿಧ ಕ್ಷೇತ್ರದಲ್ಲಿ ಉದ್ಯೋಗದಲ್ಲಿರುವ ಭೈರಾ ಗ್ರಾಮದ ಯುವಕ ಯುವತಿಯರು ಸುಮಾರು 1,80,000 ರೂ. ಒಟ್ಟುಗೂಡಿಸಿ 35 ಜನ ಸಂತ್ರಸ್ತರಿಗೆ ಆರ್ಥಿಕ ನೆರವು ನೀಡಿದ್ದಾರೆ.

ನೀರು ಸೇರಿಕೊಂಡಿರುವ ಮನೆಗಳ ಮಾಲಿಕರಿಗೆ 2500 ರೂ. ಮನೆಯೊಳಗೆ ನೀರು ನುಗ್ಗಿ ಧಾನ್ಯ ಬಟ್ಟೆ ಬರೆ ಹಾನಿಯೊಳಗಾದವರಿಗೆ 4000 ರೂ. ಮತ್ತು ಗೋಡೆ ಕುಸಿದಿರುವ ಮನೆ ಮಾಲಿಕರಿಗೆ 8000 ರೂ. ನಗದು ನೀಡಿದರು.

ಗ್ರಾಮದ ಪುರೋಹಿತರಾದ ಪ್ರಕಾಶ ಭಟ್‌ ಇವರ ಹಸ್ತದಿಂದ ಸಂತ್ರಸ್ತರಿಗೆ ನೆರವಿನ ಹಣ ನೀಡಲಾಯಿತು. ಸ್ಥಳೀಯರಾದ ಬಾಲಾ ಗಾಂವಕರ, ದಿನೇಶ ನಾಯ್ಕ, ಗುರು ನಾಯ್ಕ, ಗೌರೇಶ ಆನಂದು ಗೋಸಾವಿ, ವಿಶಾಲ ಗಾಂವಕರ, ಕಿಶೋರ ಗೋಸಾವಿ, ಶರದ ದೇವದಾಸ, ಮಹೇಶ ಗಾಂವಕರ, ಮನೋಹರ ನಮ್ಸೆಕರ, ಅಜಿತ ವಾರಕರ ಹಾಗು ಊರಿನ ಪ್ರಮುಖರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ