ಆ್ಯಪ್ನಗರ

ತಂಬಾಕು ಉತ್ಪನ್ನ ಅಂಗಡಿಗಳ ಮೇಲೆ ದಾಳಿ

ಕಾರವಾರ : ನಗರದಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ 40ಕ್ಕೂ ಹೆಚ್ಚು ಅಂಗಡಿಗಳ ಮೇಲೆ ಶುಕ್ರವಾರ ದಿಢೀರ್‌ ದಾಳಿ ನಡೆಸಿದ ಉಪ ತಹಸೀಲ್ದಾರ 76 ಪ್ರಕರಣಗಳನ್ನು ದಾಖಲಿಸಿ 13,400 ರೂ. ದಂಡ ವಿಧಿಸಿದರು.

Vijaya Karnataka 21 Jul 2019, 5:00 am
ಕಾರವಾರ : ನಗರದಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ 40ಕ್ಕೂ ಹೆಚ್ಚು ಅಂಗಡಿಗಳ ಮೇಲೆ ಶುಕ್ರವಾರ ದಿಢೀರ್‌ ದಾಳಿ ನಡೆಸಿದ ಉಪ ತಹಸೀಲ್ದಾರ 76 ಪ್ರಕರಣಗಳನ್ನು ದಾಖಲಿಸಿ 13,400 ರೂ. ದಂಡ ವಿಧಿಸಿದರು.
Vijaya Karnataka Web attacks on tobacco product stores
ತಂಬಾಕು ಉತ್ಪನ್ನ ಅಂಗಡಿಗಳ ಮೇಲೆ ದಾಳಿ


ತಂಬಾಕು ಕಾಯ್ದೆ 2003ರ ಅಡಿಯಲ್ಲಿ ಉಪ ತಹಸೀಲ್ದಾರ ಶ್ರೀದೇವಿ ಭಟ್‌ ನೇತೃತ್ವದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ತಾಲೂಕು ತಂಬಾಕು ತನಿಖಾ ದಳದವರು ದಾಳಿ ನಡೆಸಿದರು. ಸರಿಯಾಗಿ ಸೂಚನಾ ಫಲಕಗಳನ್ನು ಅಳವಡಿಸದ, ನಿಯಮಗಳನ್ನು ಉಲ್ಲಂಘಿಸಿದ ಅಂಗಡಿಕಾರರ ವಿರುದ್ಧ ಸೆಕ್ಷ ನ್‌ 4ರ ಅಡಿಯಲ್ಲಿ ಒಟ್ಟು 52 ಪ್ರಕರಣ ದಾಖಲಿಸಿ 8600 ರೂ. ಮತ್ತು ಸೆಕ್ಷ ನ್‌ 6ಎ ಅಡಿಯಲ್ಲಿ 24 ಪ್ರಕರಣ ದಾಖಲಿಸಿ 4800 ರೂ. ದಂಡ ವಿಧಿಸಿದರು. ಈ ಸಂದರ್ಭದಲ್ಲಿ ತಂಬಾಕು ಮಾರಾಟದ ಕುರಿತಾದ ಕಾನೂನು ಉಲ್ಲಂಘಿಸಿದರೆ ವಿಧಿಸಲ್ಪಡುವ ದಂಡದ ಬಗ್ಗೆ ಸೂಚನಾ ಫಲಕಗಳನ್ನು ವಿತರಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ