ಆ್ಯಪ್ನಗರ

ತಂಬಾಕು ಕಂಪನಿ ಮಾಲಿಕರಿಗೆ ಪ್ರಾಧಿಕಾರದ ಅನುಮತಿ ಕಡ್ಡಾಯ

ಕಾರವಾರ : ಯಾವುದೇ ತಂಬಾಕು ಕಂಪನಿಯ ಮಾಲೀಕರು ಅಥವಾ ಪ್ರತಿನಿಧಿಗಳು ಸರಕಾರಿ ಅಧಿಕಾರಿಗಳನ್ನು ಭೇಟಿ ಮಾಡುವ ಮೊದಲು ತಂಬಾಕು ನಿಯಂತ್ರಿತ ಶಿಷ್ಟಾಚಾರ ಪ್ರಾಧಿಕಾರದ ಅಧಿಕಾರಿಯ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿ ಜಿಲ್ಲಾಧಿಕಾರಿ ಡಾ.ಹರೀಶ್‌ ಕುಮಾರ್‌ ಕೆ. ಆದೇಶಿಸಿದ್ದಾರೆ.

Vijaya Karnataka 6 Jul 2019, 5:00 am
ಕಾರವಾರ : ಯಾವುದೇ ತಂಬಾಕು ಕಂಪನಿಯ ಮಾಲೀಕರು ಅಥವಾ ಪ್ರತಿನಿಧಿಗಳು ಸರಕಾರಿ ಅಧಿಕಾರಿಗಳನ್ನು ಭೇಟಿ ಮಾಡುವ ಮೊದಲು ತಂಬಾಕು ನಿಯಂತ್ರಿತ ಶಿಷ್ಟಾಚಾರ ಪ್ರಾಧಿಕಾರದ ಅಧಿಕಾರಿಯ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿ ಜಿಲ್ಲಾಧಿಕಾರಿ ಡಾ.ಹರೀಶ್‌ ಕುಮಾರ್‌ ಕೆ. ಆದೇಶಿಸಿದ್ದಾರೆ.
Vijaya Karnataka Web authorization of tobacco company owners is mandatory
ತಂಬಾಕು ಕಂಪನಿ ಮಾಲಿಕರಿಗೆ ಪ್ರಾಧಿಕಾರದ ಅನುಮತಿ ಕಡ್ಡಾಯ


ತಂಬಾಕು ನಿಯಂತ್ರಣ ಕಾರ್ಯಕ್ರಮ ಅನುಷ್ಠಾನಗೊಳಿಸುವ ಸಂಬಂಧ ತಂಬಾಕು ಉತ್ಪನ್ನ ಕಂಪನಿಗಳ ಹಸ್ತಕ್ಷೇಪ ಕಡಿಮೆ ಮಾಡುವ ಉದ್ದೇಶದಿಂದ ವಿಶ್ವಸಂಸ್ಥೆ ಆರೋಗ್ಯ ವಿಭಾ ಫ್ರೇಂವರ್ಕ್‌ ಕನ್ವೆನ್ಷನ್‌ ಆಫ್‌ ಟೊಬ್ಯಾಕೋ ಕಂಟ್ರೋಲ್‌ ನಿಯಮಾವಳಿಯನ್ನು ಅನುಷ್ಠಾನ ಗೊಳಿಸುವ ಸಂಬಂಧ ಈ ಆದೇಶವನ್ನು ಅವರು ಹೊರಡಿಸಿದ್ದಾರೆ.

ಈ ನಿಯಮಾವಳಿ ಪ್ರಕಾರ ಯಾವುದೇ ಸರಕಾರಿ ಅಧಿಕಾರಿ ಅಥವಾ ನೌಕರ ತಂಬಾಕು ಕಂಪನಿ ಅಥವಾ ಪ್ರತಿನಿಧಿಗಳೊಂದಿಗೆ ವ್ಯವಹರಿಸುವುದಾಗಲಿ, ಒಪ್ಪಂದಗಳನ್ನು ಮಾಡಿಕೊಳ್ಳುವುದಾಗಲಿ ಅಥವಾ ತಂಬಾಕು ಕಂಪನಿಗಳು ಸರಕಾರಿ ಅಧಿಕಾರಿಗಳೊಂದಿಗೆ ವ್ಯವಹರಿಸುವುದು ನಿಯಮಾವಳಿ ಉಲ್ಲಂಘಿಸಿದಂತಾಗುತ್ತದೆ.

ಒಂದು ವೇಳೆ ತಂಬಾಕು ಕಂಪನಿಗಳ ಜತೆಗೆ ಅಥವಾ ಅವರ ಪ್ರತಿನಿಧಿಗಳೊಂದಿಗೆ ವ್ಯವಹರಿಸುವಂತಿದ್ದರೆ ಅಥವಾ ತಂಬಾಕು ಕಂಪನಿಗಳು ಸರಕಾರಿ ಅಧಿಕಾರಿಗಳೊಂದಿಗೆ ವ್ಯವಹರಿಸುವಂತಿದ್ದರೆ ನಿಯಮಾವಳಿಯಂತೆ ತಂಬಾಕು ನಿಯಂತ್ರಣದ ನಿಯೋಜಿತ ಅಧಿಕಾರಿಗಳಾದ ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಆಯುಷ್‌ ಸೇವೆಗಳು ಇವರ ಪೂರ್ವಾನುಮತಿಯನ್ನು ಪಡೆಯುವುದು ಕಡ್ಡಾಯ.

ಪೂರ್ವಾನುಮತಿಯನ್ನು ಅವರ ಇ ಮೇಲ್‌ ಮೂಲಕ ಭೇಟಿಯ ಉದ್ದೇಶವನ್ನು ತಿಳಿಸಿ ಪೂರ್ವಾನುಮತಿ ಪಡೆಯಬೇಕು. ಅಲ್ಲದೆ ಪ್ರೋಟೋಕಾಲ್‌ನಲ್ಲಿ ತಿಳಿಸಿದಂತೆ ''ತಂಬಾಕು ಉತ್ಪನ್ನ ಕಂಪನಿಗಳ ಪ್ರತಿನಿಧಿಗಳು, ಅದರ ಅಂಗಸಂಸ್ಥೆಗಳು, ದಲ್ಲಾಳಿಗಳು ಈ ಇಲಾಖೆಯ ಯಾವುದೇ ಅಧಿಕಾರಿಗಳ ಜತೆಗೆ ಭೇಟಿ ಮಾಡಿ ವ್ಯವಹರಿಸುವ ಮೊದಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಆಯುಷ್‌ ಇಲಾಖೆಯ ಆಯುಕ್ತರ ಸಂದರ್ಶನ ಪಡೆಯಬೇಕು. ಅನುಮತಿ ಪಡೆಯುವ ಕುರಿತಾದ ನಿಯಮಾವಳಿ ಫಲಕಗಳನ್ನು ಎಲ್ಲ ಸರಕಾರಿ ಕಚೇರಿಗಳಲ್ಲಿ ಅಳವಡಿಸುವಂತೆ ಜಿಲ್ಲಾಧಿಕಾರಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ