ಆ್ಯಪ್ನಗರ

ಮಾದಕ ವಸ್ತುಗಳಿಂದ ದೂರವಿರಿ

ಕುಮಟಾ :ಮಾದಕ ದೃವ್ಯಗಳಿಗೆ ಬಲಿಯಾದರೆ ಜೀವನ ಸುಧಾರಿಸಿಕೊಳ್ಳುವುದು ಕಷ್ಟ. ಹೀಗಾಗಿ ವ್ಯಸನಗಳಿಂದ ದೂರ ಉಳಿದು ನಿಮ್ಮನ್ನು ನೀವು ರಕ್ಷಿಸಿಕೊಳ್ಳಬೇಕು ಎಂದು ಪಿಎಸ್‌ಐ ಸಂಪತ್‌ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

Vijaya Karnataka 28 Jun 2018, 5:00 am
Vijaya Karnataka Web avoid drugs
ಮಾದಕ ವಸ್ತುಗಳಿಂದ ದೂರವಿರಿ
ಕುಮಟಾ :ಮಾದಕ ದೃವ್ಯಗಳಿಗೆ ಬಲಿಯಾದರೆ ಜೀವನ ಸುಧಾರಿಸಿಕೊಳ್ಳುವುದು ಕಷ್ಟ. ಹೀಗಾಗಿ ವ್ಯಸನಗಳಿಂದ ದೂರ ಉಳಿದು ನಿಮ್ಮನ್ನು ನೀವು ರಕ್ಷಿಸಿಕೊಳ್ಳಬೇಕು ಎಂದು ಪಿಎಸ್‌ಐ ಸಂಪತ್‌ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಡಾ.ಎ.ವಿ. ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಪೊಲೀಸ್‌ ಇಲಾಖೆ, ಕಾಲೇಜ ಯೂನಿಯನ್‌, ಎನ್‌ಸಿಸಿ ಹಾಗೂ ಎನ್‌ಎಸ್‌ಎಸ್‌ ಘಟಕ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯಲ್ಲಿ ಅವರು ಮಾತನಾಡಿದರು. ನಮ್ಮ ಸುತ್ತಮುತ್ತ ತಪ್ಪು ದಾರಿಗೆಳೆಯುವ ಸಂಗತಿಗಳಿರುತ್ತವೆ. ಅದರ ಬಗ್ಗೆ ಗಮನ ಹರಿಸಕೂಡದು. ಉತ್ತಮ ಗುಣಗಳು ಹಾಗೂ ವ್ಯಸನ ರಹಿತ ಜೀವನ ಕಟ್ಟಿಕೊಂಡು ಸಾರ್ಥಕ ಬದುಕು ನಡೆಸಬೇಕು. ಯೋಗದ ಮೂಲಕ ಆರೋಗ್ಯ ಕಟ್ಟಿಕೊಳ್ಳಬೇಕು. ಆ ಮೂಲಕ ಸಮಾಜದಲ್ಲಿ ಅಗತ್ಯವುಳ್ಳವರಿಗಾಗಿ ಸೇವೆ ನೀಡಬೇಕು ಎಂದರು.

ಪ್ರೋಬೇಷನರಿ ಪಿಎಸ್‌ಐ ಚಿತ್ರೇಶ ಮಾತನಾಡಿ, ಮಾದಕ ವಸ್ತುಗಳ ಸಹವಾಸದಿಂದ ದೂರ ಇರಬೇಕು ಎಂದರು. ಪ್ರೊಬೇಷನರಿ ಪಿಎಸ್‌ಐ ಶ್ರೀನಿವಾಸ ರೆಡ್ಡಿ ಮಾತನಾಡಿ, ಮಾದಕ ದ್ರವ್ಯಗಳು ಮನುಷ್ಯನ ದೇಹದ ಮೇಲೆ ಹಾಗೂ ಮಾನಸಿಕವಾಗಿ ದುರ್ಬಲಗೊಳಿಸುತ್ತವೆ. ಕ್ರಮೇಣ ಅದು ಮನುಷ್ಯನ ಅಸ್ತಿತ್ವವನ್ನೇ ಮುಗಿಸಿಬಿಡುತ್ತದೆ ಎಂದರು. ಪ್ರಾ. ಗಿರೀಶ ಕುಚಿನಾಡ ಅಧ್ಯಕ್ಷ ತೆ ವಹಿಸಿ, ಮೊಬೈಲ್‌ ಹಾಗೂ ಔಷಧಿಗಳ ಮಿತ ಬಳಕೆಯಾಗಬೇಕು ಎಂದರು. ಡಾ.ಯು.ಜಿ. ಶಾಸ್ತ್ರಿ ಸ್ವಾಗತಿಸಿದರು. ಡಾ.ಜಿ.ಎಲ್‌. ಹೆಗಡೆ ವಂದಿಸಿದರು. ಪ್ರೊ.ಎಂ.ಜಿ. ನಾಯ್ಕ, ಡಾ.ರೇವತಿ ರಾವ್‌ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ