ಆ್ಯಪ್ನಗರ

ಬೈತಖೋಲ್‌ ನಿರಾಶ್ರಿತರ ಯಾಂತ್ರೀಕೃತ ದೋಣಿ ಮೀನುಗಾರರ

ಕಾರವಾರ : ಇಲ್ಲಿನ ಬೈತಖೋಲ್‌ ವಾಣಿಜ್ಯ ಬಂದರು ವಿಸ್ತರಣೆಗೆ ನೀಡಿರುವ ಪರಿಸರ ಅನುಮತಿಯನ್ನು ರದ್ದುಪಡಿಸಬೇಕು ಎಂದು ಬೈತಖೋಲ್‌ ನಿರಾಶ್ರಿತರ ಯಾಂತ್ರೀಕೃತ ದೋಣಿ ಮೀನುಗಾರರ ಸಹಕಾರಿ ಸಂಘದ ವತಿಯಿಂದ ಜಿಲ್ಲಾಧಿಕಾರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

Vijaya Karnataka 17 Jul 2019, 5:00 am
ಕಾರವಾರ : ಇಲ್ಲಿನ ಬೈತಖೋಲ್‌ ವಾಣಿಜ್ಯ ಬಂದರು ವಿಸ್ತರಣೆಗೆ ನೀಡಿರುವ ಪರಿಸರ ಅನುಮತಿಯನ್ನು ರದ್ದುಪಡಿಸಬೇಕು ಎಂದು ಬೈತಖೋಲ್‌ ನಿರಾಶ್ರಿತರ ಯಾಂತ್ರೀಕೃತ ದೋಣಿ ಮೀನುಗಾರರ ಸಹಕಾರಿ ಸಂಘದ ವತಿಯಿಂದ ಜಿಲ್ಲಾಧಿಕಾರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
Vijaya Karnataka Web baitakhhol refugee mechanized boat fishermen
ಬೈತಖೋಲ್‌ ನಿರಾಶ್ರಿತರ ಯಾಂತ್ರೀಕೃತ ದೋಣಿ ಮೀನುಗಾರರ


ವಾಣಿಜ್ಯ ಬಂದರಿನ ಎರಡನೇ ಹಂತದ ವಿಸ್ತರಣೆಗೆ ಸ್ಥಳೀಯ ಮೀನುಗಾರರಲ್ಲದೇ ಇತರ ಸಾರ್ವಜನಿಕರು ಸಹ ಮೊದಲಿಂದಲೂ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ ,

2018ರಲ್ಲಿ ಪರಿಸರ ಅಹವಾಲು ಸಭೆ ನಡೆಸಿದಾಗ ನಮ್ಮ ಅಹವಾಲುಗಳನ್ನು ಲಿಖಿತವಾಗಿ ಸಲ್ಲಿಸಲಾಗಿದೆ. ಆದರೂ ಪ್ರಸಕ್ತ ವರ್ಷ ಜನೇವರಿಯಲ್ಲಿ ಯೋಜನೆಗೆ ಪರಿಸರ ಅನುಮತಿ ನೀಡಲಾಗಿದೆ.

ಬೈತಖೋಲದ ಅನೇಕ ಮೀನುಗಾರ ಕುಟುಂಬ ಈಗಾಗಲೇ ನಿರಾಶ್ರಿತರಾಗಿದ್ದೇವೆ. ಈಗ ಈ ಯೋಜನೆಯಿಂದ 114 ಮನೆಗಳನ್ನು ತೆರವು ಮಾಡಬೇಕಿದ್ದು ಮತ್ತಷ್ಟು ಜನ ನಿರಾಶ್ರಿತಾಗಬೇಕಾಗುತ್ತದೆ. ಯೋಜನೆಯಿಂದ ಇದುವರೆಗೆ ಸ್ಥಳೀಯರಿಗೆ ದೋಣಿ ನಿಲುಗಡೆ, ಮೀನು ಒಣಗಿಸಲು ಇದ್ದ ಜಾಗಗಳು ಬಂದರಿನ ವಶವಾಗಲಿದೆ. ಅಲ್ಲದೇ ಮೀನುಗಾರಿಕೆಗೆ ಇದ್ದ ಸೀಮಿತ ಜಾಗವೂ ಬಂದರಿನ ಪಾಲಾಗಲಿದ್ದು ಸ್ಥಳೀಯ ಮೀನುಗಾರರು ಸಂಕಷ್ಟ ಅನುಭವಿಸಬೇಕಾಗುತ್ತದೆ.

ಇನ್ನು ಯೋಜನೆಯ ಪ್ರದೇಶವು ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಕೇವಲ 5 ಕಿ. ಮೀ. ಅಂತರದಲ್ಲಿದೆ. ಈ ಮೊದಲು ಕೇರಳದಲ್ಲಿ ಇದೇ ಮಾದರಿಯಯೋಜನೆ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸಮೀಪದಲ್ಲಿದ್ದ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ.

ಬಂದರು ವಿಸ್ತರಣೆಯಿಂದ ಕಾರವಾರದ ಕಡಲ ತೀರ ಬಹುತೇಕ ಭಾಗ ವಶಾವಾಗಲಿದ್ದು ಮೀನುಗಾರರಲ್ಲದೇ ಇತರ ಸಾರ್ವಜನಿಕರಿಗೂ ಸಮಸ್ಯೆಯಾಗಲಿದೆ.

ಇನ್ನು ಪರಿಸರ ಅನುಮತಿ ನೀಡುವಲ್ಲಿ ಅಹವಾಲು ಸಭೆಯಲ್ಲಿ ನೀಡಿದ ಲಿಖಿತ ದೂರುಗಳ ಬಗ್ಗೆ ಉಲ್ಲೇಖ ಮಾಡಿಲ್ಲ, ವಶಪಡಿಸಿಕೊಳ್ಳಬೇಕಾದ ಭೂಮಿಯ ಬಗ್ಗೆ ಸರಿಯಾದ ವಿವರಗಳನ್ನು ನೀಡಿಲ್ಲ. ಯೋಜನಾ ಪ್ರದೇಶದಲ್ಲಿ ಕೆಲ ಪ್ರಕರಣಗಳು ವಿಚಾರಣೆಯಲ್ಲಿದ್ದರೂ, ಅವುಗಳನ್ನು ನಮೂದಿಸಿದೆ ಯಾವುದೇ ದಾವೆ ಇಲ್ಲ ಎಂದು ತಿಳಿಸಲಾಗಿದೆ.

ಈ ರೀತಿ ಕಾನೂನು ಉಲ್ಲಂಘನೆ ಮಾಡಿ, ಪರಿಸರ ಅನುಮತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಪರಿಸರ ಅನುಮತಿಯನ್ನು ರದ್ದುಪಡಿಸಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ. ಅವರು ಮನವಿ ಸ್ವೀಕರಿಸಿದರು. ಸಹಕಾರಿ ಸಂಘದ ಶ್ರೀಧರ ಮಹಾಬಲೇಶರ್ವರ ಹರಿಕಂತ್ರ, ಪ್ರಕಾಶ ಹರಿಕಂತ್ರ, ಸುಪ್ರೀತ ಎಸ್‌. ಉಳ್ವೇಕರ ಕುಮಾರ ದುರ್ಗೇಕರ್‌ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ