ಆ್ಯಪ್ನಗರ

‘ಬಾಳು’ ಸಾಹಿತ್ಯ ಸಂವಾದ

ಅಂಕೋಲಾ : ನಾಡಿನ ಹೆಸರಾಂತ ವಿಮರ್ಶಕ ಜಿ.ಎಚ್‌. ನಾಯಕರ ಆತ್ಮಕಥನ 'ಬಾಳು' ಇದರ ಸಾಹಿತ್ಯ ಸಂವಾದ ಕಾರ್ಯಕ್ರಮ ಸಾಹಿತಿ ವಿಷ್ಣು ನಾಯ್ಕರ ಅಧ್ಯಕ್ಷ ತೆಯಲ್ಲಿ ನಡೆಯಿತು.

Vijaya Karnataka 16 Feb 2019, 5:00 am
ಅಂಕೋಲಾ : ನಾಡಿನ ಹೆಸರಾಂತ ವಿಮರ್ಶಕ ಜಿ.ಎಚ್‌. ನಾಯಕರ ಆತ್ಮಕಥನ 'ಬಾಳು' ಇದರ ಸಾಹಿತ್ಯ ಸಂವಾದ ಕಾರ್ಯಕ್ರಮ ಸಾಹಿತಿ ವಿಷ್ಣು ನಾಯ್ಕರ ಅಧ್ಯಕ್ಷ ತೆಯಲ್ಲಿ ನಡೆಯಿತು.
Vijaya Karnataka Web balu literary dialogue
‘ಬಾಳು’ ಸಾಹಿತ್ಯ ಸಂವಾದ


ಜಿ.ಎಚ್‌.ನಾಯಕ ಮಾತನಾಡಿ, ಕರಬಂಧಿ ನಾಡು ಸೂರ್ವೆಯ ಸ್ವಾತಂತ್ರ್ಯ ಹೋರಾಟದ ಸನ್ನಿವೇಶ, ಊರ ಹಿರಿಯರು ಜೈಲು ಸೇರಿದ ಕ್ಷ ಣವನ್ನು ನೆನೆಯುತ್ತಾ ತನ್ನ ಕುಟುಂಬದವರನ್ನು ಹಾಗೂ ಸ.ಪ. ಗಾಂವಕರ ತನ್ನನ್ನು ಮೈಸೂರಿಗೆ ಕಳುಹಿಸಿ ಹಾಸ್ಟೆಲಿನಲ್ಲಿ ಇರುವ ವ್ಯವಸ್ಥೆ ಮಾಡಿದ್ದನ್ನು ಸ್ಮರಿಸಿದರು. ಜತೆಗೆ ಮೈಸೂರಿನಲ್ಲಿ ಗೋಪಾಲಕೃಷ್ಣ ಅಡಿಗರು, ಯು.ಆರ್‌.ಅನಂತಮೂರ್ತಿ ಹಾಗೂ ತೇಜಸ್ವಿಯವರ ಒಡನಾಟ ನನ್ನನ್ನು ಗಟ್ಟಿಗೊಳಿಸಿದೆ ಎಂದರು.

'ಸಮತಾ ವೇದಿಕೆ'ಯ ಸಂಚಾಲಕಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಮೀರಾ ಜಿ. ನಾಯಕ ಉಪಸ್ಥಿತರಿದ್ದರು. ಪ್ರೊ.ಸಿದ್ಧಲಿಂಗಸ್ವಾಮಿ ವಸ್ತ್ರದ, ಜೇ.ಪ್ರೇಮಾನಂದ, ಡಾ.ಆರ್‌.ಜಿ.ಗುಂದಿ, ಡಾ.ಎನ್‌.ಆರ್‌.ನಾಯಕ, ಉಲ್ಲಾಸ ಹುದ್ದಾರ, ಮಹಾಂತೇಶ ರೇವಡಿ ಸಂವಾದಕರಾಗಿ ಪಾಲ್ಗೊಂಡಿದ್ದರು. ವಸಂತ ನಾಯಕ ಸ್ವಾಗತಿಸಿದರು. ಜಿ.ಆರ್‌. ನಾಯಕ ವಂದಿಗೆ ಪ್ರಾರ್ಥಿಸಿದರು. ರಾಜೇಶ ಮಾಸ್ತರ ಸೂರ್ವೆ ವಂದಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ