ಆ್ಯಪ್ನಗರ

ಕಾನೂನು ಅರಿತು ನಡೆಯಿರಿ

ಭಟ್ಕಳ: ವಿದ್ಯಾರ್ಥಿ ಜೀವನದಲ್ಲಿ ಕಾನೂನು ಅರಿವು ಮೂಡಿಸುವಂತಹ ಕೆಲಸಗಳು ಕಾರ‍್ಯಗತವಾಗಬೇಕು. ಕಾನೂನು ಅರಿತು ನಡೆದರೆ ವಿದ್ಯಾರ್ಥಿಗಳ ಭವಿಷ್ಯ ಉಜ್ವಲ ವಾಗುತ್ತದೆ. ಬಾಲ ಕಾರ್ಮಿಕರು, ಬಾಲ್ಯವಿವಾಹ, ಪೋಕ್ಸೊ ಕಾಯಿದೆ, ಮಕ್ಕಳ ಹಕ್ಕು, ಲೈಂಗಿಕ ಕಿರುಕುಳ, ಬಾಲಾಪರಾದ, ಮಹಿಳಾ ಹಕ್ಕು, ಮಾನವ ಹಕ್ಕುಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿವಳಿಕೆ ಇರಬೇಕು ಎಂದು ಭಟ್ಕಳದ ಪ್ರಧಾನ ಸಿವಿಲ್‌ ನ್ಯಾಯಾಧೀಶ ಕೃಷ್ಣರಾಜ.ಕೆ. ಹೇಳಿದರು.

Vijaya Karnataka 4 Aug 2019, 5:00 am
ಭಟ್ಕಳ: ವಿದ್ಯಾರ್ಥಿ ಜೀವನದಲ್ಲಿ ಕಾನೂನು ಅರಿವು ಮೂಡಿಸುವಂತಹ ಕೆಲಸಗಳು ಕಾರ‍್ಯಗತವಾಗಬೇಕು. ಕಾನೂನು ಅರಿತು ನಡೆದರೆ ವಿದ್ಯಾರ್ಥಿಗಳ ಭವಿಷ್ಯ ಉಜ್ವಲ ವಾಗುತ್ತದೆ. ಬಾಲ ಕಾರ್ಮಿಕರು, ಬಾಲ್ಯವಿವಾಹ, ಪೋಕ್ಸೊ ಕಾಯಿದೆ, ಮಕ್ಕಳ ಹಕ್ಕು, ಲೈಂಗಿಕ ಕಿರುಕುಳ, ಬಾಲಾಪರಾದ, ಮಹಿಳಾ ಹಕ್ಕು, ಮಾನವ ಹಕ್ಕುಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿವಳಿಕೆ ಇರಬೇಕು ಎಂದು ಭಟ್ಕಳದ ಪ್ರಧಾನ ಸಿವಿಲ್‌ ನ್ಯಾಯಾಧೀಶ ಕೃಷ್ಣರಾಜ.ಕೆ. ಹೇಳಿದರು.
Vijaya Karnataka Web be aware of the law
ಕಾನೂನು ಅರಿತು ನಡೆಯಿರಿ

ಮುರ್ಡೇಶ್ವರದ ಆರ್‌.ಎನ್‌.ಎಸ್‌ ವಿದ್ಯಾನಿಕೇತನ ಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಭಟ್ಕಳ, ಅಧಿಯೋಜನೆ ಇಲಾಖೆ, ಶಿಕ್ಷ ಣ ಇಲಾಖೆ ಇವುಗಳ ಆಶ್ರಯದಲ್ಲಿ ನಡೆದ ಲೋಕ ಅದಾಲತ್‌ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷ ತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಆರ್‌. ಆರ್‌ ಶ್ರೇಷ್ಠಿ ಮಾತನಾಡಿ, ಆಧುನಿಕತೆಗೆ ಹೊಂದಿಕೊಂಡಂತೆ ಕಾನೂನಿನಲ್ಲಿ ಕೂಡ ಬದಲಾವಣೆ ಆಗುತ್ತಿರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕಾನೂನು ತಿಳಿದುಕೊಂಡು ಅದರ ಅನುಸಾರವಾಗಿ ಜೀವನ ನಡೆಸಬೇಕು. ಕಾನೂನಿನಿಂದ ಯಾರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಹಾಗೂ ದೇಶದ ಸಂವಿಧಾನದ ಬಗ್ಗೆ ಅಧ್ಯಯನ ನಡೆಸುವುದರ ಮೂಲಕ ಜೀವನದಲ್ಲಿ ಸತ್ಪ್ರಜೆಯಾಗಿ ಬಾಳಬೇಕು ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಹಿರಿಯ ವಕೀಲ ಎಸ್‌. ಕೆ ನಾಯ್ಕ ಅವರು ವಿವಿಧ ಕಾನೂನು, ಕಾಯಿದೆಗಳ ಬಗ್ಗೆ ಮಾಹಿತಿ ನೀಡಿದರು.

ಸಹಾಯಕ ಸರ್ಕಾರಿ ಅಭಿಯೋಜಕ ಇಂದಿರಾ ನಾಯ್ಕ, ಆರ್‌.ಎನ್‌.ಎಸ್‌ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಮಾಧವ್‌ ಪಿ, ವಿದ್ಯಾನಿಕೇತನ ಪ್ರಾಂಶುಪಾಲರಾದ ಡಾ. ಸುರೇಶ್‌ ಶೆಟ್ಟಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ