ಆ್ಯಪ್ನಗರ

ಫಲಾನುಭವಿಗಳ ಪರದಾಟ

ಕಾರವಾರ: ಸರಕಾರದ ವಿವಿಧ ವಸತಿಯೋಜನೆಯ ಫಲಾನುಭವಿಗಳಿಗೆ ಹಣ ಬಿಡುಗಡೆಯಾಗದೇ ನಿರ್ಮಾಣ ಹಂತದಲ್ಲಿರುವ ಮನೆಗಳು ಅರ್ಧಕ್ಕೇ ನಿಂತಿವೆ. ಸಹಾಯ ಧನದ ಭರವಸೆಯಲ್ಲಿಸಾಲ ಮಾಡಿ ಮನೆ ಕಟ್ಟಿದವರು ಸಾಲ ಮರುಪಾವತಿಗೆ ಪರದಾಡುತ್ತಿದ್ದಾರೆ.

Vijaya Karnataka 17 Sep 2019, 5:00 am
ಕಾರವಾರ: ಸರಕಾರದ ವಿವಿಧ ವಸತಿಯೋಜನೆಯ ಫಲಾನುಭವಿಗಳಿಗೆ ಹಣ ಬಿಡುಗಡೆಯಾಗದೇ ನಿರ್ಮಾಣ ಹಂತದಲ್ಲಿರುವ ಮನೆಗಳು ಅರ್ಧಕ್ಕೇ ನಿಂತಿವೆ. ಸಹಾಯ ಧನದ ಭರವಸೆಯಲ್ಲಿಸಾಲ ಮಾಡಿ ಮನೆ ಕಟ್ಟಿದವರು ಸಾಲ ಮರುಪಾವತಿಗೆ ಪರದಾಡುತ್ತಿದ್ದಾರೆ.
Vijaya Karnataka Web beneficiary paradigm
ಫಲಾನುಭವಿಗಳ ಪರದಾಟ


ವಸತಿ ಯೋಜನೆಯಲ್ಲಿಮನೆ ಕಟ್ಟಿಸಿಕೊಳ್ಳುತ್ತಿರುವ ಜಿಲ್ಲೆಯ ಫಲಾನುಭವಿಗಳಿಗೆ ಬರಬೇಕಿದ್ದ ಸುಮಾರು 14 ಕೋಟಿ ರೂ. ಬಾಕಿ ಉಳಿದಿದೆ. ಪರಣಾಮವಾಗಿ ಸರಕಾರದ ಆಶ್ರಯ ಯೋಜನೆಗಳಲ್ಲಿಆಯ್ಕೆಯಾಗಿ ತಮ್ಮ ಸ್ವಂತ ಸೂರು ಕಟ್ಟಿಸಿಕೊಳ್ಳಲು ಹೆಣಗಾಡುತ್ತಿರುವ ಫಲಾನುಭವಿಗಳು ಕಂತಿನ ಹಣಕ್ಕಾಗಿ ಕಚೇರಿಗೆ ಅಲೆಯುವಂತಾಗಿದೆ. ವಸತಿ ಯೋಜನೆಯಡಿ ನಿರ್ಮಿಸುತ್ತಿರುವ ಮನೆಗಳು ಅನುದಾನ ಬಿಡುಗಡೆಯಾಗದೇ ಕಳೆದ ಒಂದು ವರ್ಷಗಳಿಂದ ಅಪೂರ್ಣ ಸ್ಥಿತಿಯಲ್ಲಿದ್ದು, ಫಲಾನುಭವಿಗಳು, ಬಾಡಿಗೆ ಮನೆಯಲ್ಲಿಅಥವಾ ಗುಡಿಸಲಿನಲ್ಲಿ ಕಾಲ ಕಳೆಯುವಂತಾಗಿದೆ.

ಕಳೆದ 6 ತಿಂಗಳಿಂದ ರಾಜೀವ ಗಾಂಧಿ ವಸತಿ ನಿಗಮಕ್ಕೆ ಅನುದಾನ ಬಿಡುಗಡೆಯಾಗದೇ ಮನೆ ನಿರ್ಮಿಸಿಕೊಂಡಿರುವ ಫಲಾನುಭವಿಗಳು ಸಹಾಯ ಧನಕ್ಕಾಗಿ ಕಚೇರಿ ಅಲೆಯುತ್ತಿದ್ದಾರೆ. ಪರವಾನಗಿ ಪಡೆದು ಸಾಲ ಮಾಡಿ ಮನೆ ನಿರ್ಮಿಸಿಕೊಂಡಿರುವ ವಸತಿ ಯೋಜನೆಯ ಫಲಾನುಭವಿಗಳು ಪರಿತಪಿಸುವಂತಾಗಿದೆ. ವಸತಿ ಯೋಜನೆಯಲ್ಲಿಜಿಲ್ಲೆಗೆ ಬಿಡುಗಡೆಯಾಗಬೇಕಾದ 13,99,34,000 ರೂ. ಅನುದಾನ ಬಾಕಿ ಉಳಿದಿದೆ.

ಬಸವ ವಸತಿ ಯೋಜನೆಯಲ್ಲಿಮನೆ ಕಟ್ಟಿಸಿಕೊಳ್ಳುತ್ತಿರುವ ಜಿಲ್ಲೆಯ ಫಲಾನುಭವಿಗಳಿಗೆ ಸರಕಾರದಿಂದ 11,41,73 000 ರೂ. ಅನುದಾನ ಬರುವುದು ಬಾಕಿ ಇದೆ. ಡಾ. ಬಿ.ಆರ್‌ ಅಂಬೇಡ್ಕರ್‌ ವಸತಿ ಯೋಜನೆಯಡಿ 2,28,59,000 ರೂ. ದೇವರಾಜ ಅರಸು ಯೋಜನೆಯಡಿ 18,5800 ರೂ. ಹಾಗೂ ಪ್ರಧಾನ ಮಂತ್ರಿ ಆವಾಸ ಯೋಜನೆಯಡಿ 10,44,000 ರೂ. ಅನುದಾನ ಬರುವುದು ಬಾಕಿ ಇದೆ. ವಸತಿ ಯೋಜನೆಯ ಅನುದಾನಕ್ಕಾಗಿ ಸಂಬಂಧಿಸಿದ ಅಧಿಕಾರಿಗಳು ಸರಕಾರಕ್ಕೆ ಮನವಿ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ