ಆ್ಯಪ್ನಗರ

ಜೀವ ವೈವಿಧ್ಯದ ಮಾಹಿತಿ ಪಡೆದ ಚಿಣ್ಣರು

ಕಾರವಾರ: ಅರಣ್ಯ ಇಲಾಖೆಯಿಂದ ತಾಲೂಕಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಚಿಣ್ಣರ ವನದರ್ಶನ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಅರಣ್ಯದ ಮರ ಮಟ್ಟುಗಳು, ಸಸ್ಯ ಮತ್ತು ಜೀವ ವೈವಿಧ್ಯತೆ ಬಗ್ಗೆ ವೈಜ್ಞಾನಿಕ ಮಾಹಿತಿ ನೀಡುವಲ್ಲಿ ಯಶಸ್ವಿಯಾಯಿತು.

Vijaya Karnataka 19 Dec 2022, 12:54 pm
ಕಾರವಾರ: ಅರಣ್ಯ ಇಲಾಖೆಯಿಂದ ತಾಲೂಕಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಚಿಣ್ಣರ ವನದರ್ಶನ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಅರಣ್ಯದ ಮರ ಮಟ್ಟುಗಳು, ಸಸ್ಯ ಮತ್ತು ಜೀವ ವೈವಿಧ್ಯತೆ ಬಗ್ಗೆ ವೈಜ್ಞಾನಿಕ ಮಾಹಿತಿ ನೀಡುವಲ್ಲಿ ಯಶಸ್ವಿಯಾಯಿತು.
Vijaya Karnataka Web KWR-29 GURUDATT 2B


ತಾಲೂಕಿನ ಅಸ್ನೋಟಿಯ ಶಿವಾಜಿ ವಿದ್ಯಾಮಂದಿರ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಚಿಣ್ಣರ ವನದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆರಂಭದಲ್ಲಿ ವಿದ್ಯಾರ್ಥಿಗಳು ಹಣಕೋಣ ಗ್ರಾಮದ ಕಾಳಿ ನದಿ ತೀರದ ಕಾಂಡ್ಲಾ ವನಗಳ ವೀಕ್ಷಣೆ ಮಾಡಿ ಮಾಹಿತಿ ಪಡೆದರು.

ಬಳಿಕ ಹಣಕೋಣ ಸಸ್ಯಪಾಲನಾಲಯದಲ್ಲಿ ಬೆಳೆಸಿದ ವಿವಿಧ ಜಾತಿಯ ಸಸಿಗಳ ಬಗ್ಗೆ ಬೀಜೋಪಚಾರ, ಗೊಬ್ಬರ ಮಿಶ್ರಣ, ರಿಬ್ಯಾಗಿಂಗ್‌, ಬೀಜದುಂಡೆ ಕುರಿತು ಆರ್‌ಎಫ್‌ಒ ಜಿ.ವಿ. ನಾಯ್ಕ ಅವರು ವಿವರವಾದ ಮಾಹಿತಿ ನೀಡಿದರು.

ಕದ್ರಾ ಮರಮಟ್ಟು ಸಂಗ್ರಹಾಲಯಕ್ಕೆ ಭೇಟಿ ನೀಡಿದ ವಿದ್ಯಾರ್ಥಿಗಳಿಗೆ ವಿವಿಧ ಬಗೆಯ ನಾಟಾ, ಜಲಾವು ಅರಣ್ಯ ಅಪರಾಧದಲ್ಲಿ ಜಪ್ತಿ ಮಾಡಿಕೊಂಡ ಅರಣ್ಯ ಉತ್ಪನ್ನ ರಹದಾರಿ ಪರವಾನಗಿ ಮರಮಟ್ಟುಗಳ ವಿಂಗಡಣೆ ವಿಧಾನ, ಹರಾಜು ಪ್ರಕ್ರಿಯೆ ಕುರಿತು ಉಪ ವಲಯ ಅರಣ್ಯಾಧಿಕಾರಿ ಮುತ್ತಣ್ಣ ಅವರು ಮಾಹಿತಿ ನೀಡಿದರು.

ಪ್ರಕೃತಿಯ ಮಡಿಲಲ್ಲಿ ಚಿತ್ರ ರಚನೆ: ಅಣಶಿ ಪ್ರಕೃತಿ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷ ಣೆ ಕುರಿತು ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಅರಣ್ಯ ರಕ್ಷಕ ಉರಗ ತಜ್ಞ ರಮೇಶ ಬಡಿಗೇರ ಅವರು ವಿವಿಧ ಬಗೆಯ ಸರೀಸೃಪಗಳು, ಪ್ರಮುಖ ನಾಲ್ಕು ವಿಷಕಾರಿ ಹಾವು, ವಿಷರಹಿತ ಹಾವುಗಳ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.

ಬಳಿಕ ವಿದ್ಯಾರ್ಥಿಗಳಿಗೆ ಪ್ರಕೃತಿ ಶಿಬಿರದಿಂದ ಚಾರಣ ಹಮ್ಮಿಕೊಳ್ಳಲಾಗಿತ್ತು. ಸಂಪನ್ಮೂಲ ವ್ಯಕ್ತಿ ವೀರೇಂದ್ರ ಪವಾರ ಅವರು ಜೀವ ವೈವಿಧ್ಯ, ಪರಿಸರದಲ್ಲಿ ವನ್ಯಜೀವಿ ಹಾಗೂ ಪಕ್ಷಿಗಳ ಪ್ರಾಮುಖ್ಯತೆಯ ಕುರಿತು ಉಪನ್ಯಾಸ ನೀಡಿದರು.

ಹೆಸರಿಗೆ ಮಾತ್ರ ಕಾರ್ಯಕ್ರಮ ಬೇಡ: ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ದಿವೇಕರ ಕಾಲೇಜಿನ ಪ್ರಚಾರ್ಯ ಬಿ.ಎಚ್‌. ನಾಯಕ, ವನಮಹೋತ್ಸವ ಸಸಿ ನೆಡುವ ಕಾರ್ಯಕ್ರಮ ಹೆಸರಿಗೆ ಮಾತ್ರ ಆಗಬಾರದು. ವಿದ್ಯಾರ್ಥಿಗಳು ಶಾಲಾ ಮೈದಾನ, ಮನೆಯ ಆವರಣದಲ್ಲಿ ನೆಟ್ಟ ಸಸಿಯು ಹೆಮ್ಮರವಾಗಿ ಬೆಳೆದಲ್ಲಿ ಅರ್ಥಪೂರ್ಣ ಕಾರ್ಯಕ್ರಮವಾಗುತ್ತದೆ ಎಂದರು.

ಪ್ರಾಸ್ತಾವಿಕ ಮಾತನಾಡಿದ ಗೋಪಶಿಟ್ಟಾ ವಲಯ ಅರಣ್ಯಾಧಿಕಾರಿ ಜಿ.ವಿ.ನಾಯ್ಕ, ವಿದ್ಯಾರ್ಥಿ ಜೀವನದಿಂದಲೇ ಅರಣ್ಯ ಹಾಗೂ ವನ್ಯಜೀವಿಗಳ ಮಹತ್ವದ ಅರಿವು ಮೂಡಬೇಕು. ಪ್ಲಾಸ್ಟಿಕ್‌ ಮುಕ್ತ ಪರಿಸರ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಸಂಕಲ್ಪ ತೊಡಬೇಕು ಎಂದರು.

ಅಧ್ಯಕ್ಷ ತೆ ವಹಿಸಿದ್ದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಜಿ. ನಾವಿ ಮಾತನಾಡಿ, ಇಂದು ಕುಡಿಯುವ ಜೀವಜಲವನ್ನು ಹಣ ನೀಡಿ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯಾರ್ಥಿ ಜೀವನದಿಂದಲೇ ಪರಿಸರ ಸಂರಕ್ಷ ಣೆ ಕಾಳಜಿ ಮಾಡದಿದ್ದರೆ ಉಸಿರಾಡಿಸುವ ಆಮ್ಲಜನಕವನ್ನು ಹಣ ನೀಡಿ ಪಡೆಯುವ ದಿನ ದೂರವಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ