ಆ್ಯಪ್ನಗರ

ಬಿಸಗೋಡ- ಆನಗೋಡವರೆಗೆ ಸ್ವಚ್ಛತಾ ಓಟ

ಯಲ್ಲಾಪುರ : ಸುದರ್ಶನ ಸೇವಾ ಪ್ರತಿಷ್ಠಾನ ಸಂಘಟಿಸಿದ್ದ ಬಿಸಗೋಡದಿಂದ ಆನಗೋಡದವರೆಗೆ ನಡೆದ ಸ್ವಚ್ಛತಾ ಓಟ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

Vijaya Karnataka 2 Nov 2019, 5:00 am
ಯಲ್ಲಾಪುರ : ಸುದರ್ಶನ ಸೇವಾ ಪ್ರತಿಷ್ಠಾನ ಸಂಘಟಿಸಿದ್ದ ಬಿಸಗೋಡದಿಂದ ಆನಗೋಡದವರೆಗೆ ನಡೆದ ಸ್ವಚ್ಛತಾ ಓಟ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
Vijaya Karnataka Web bisagoda cleaning race to anagoda
ಬಿಸಗೋಡ- ಆನಗೋಡವರೆಗೆ ಸ್ವಚ್ಛತಾ ಓಟ


ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಗ್ರಾ.ಪಂ. ಉಪಾಧ್ಯಕ್ಷ ರಾಮಚಂದ್ರ ಚಿಕ್ಯಾನಮನೆ ದೇಶದ ಏಕತೆಗೆ ಮತ್ತು ಸ್ವಚ್ಛ ಭಾರತ ಕಲ್ಪನೆ ಸಾಕಾರಗೊಳ್ಳಲು ಇಂತಹ ಕಾರ್ಯಕ್ರಮಗಳು ಆಂದೋಲನವಾಗಬೇಕು ಎಂದರು. ಸುದರ್ಶನ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಗಣಪತಿ ಮಾನಿಗದ್ದೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.

ಬಿಸಗೋಡ ಹೈಸ್ಕೂಲ್‌ ಶಿಕ್ಷಕ ಸದಾನಂದ ದಬಗಾರ ಮಾತನಾಡಿ, ಸ್ವಚ್ಛತೆ ನಮ್ಮ ಸ್ವಭಾವ ಆಗಬೇಕು. ಇದೊಂದು ಮಾದರಿ ಕೆಲಸ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು. ಆನಗೋಡ ಮತು ್ತ ಬಿಸಗೋಡ ಭಾಗದ ನಾಗರಿಕರು, ಬಿಸ್ಗೋಡ ಹೈಸ್ಕೂಲ್‌ ಮತ್ತು ಕನ್ನಡ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಾಮೂಹಿಕವಾಗಿ ಸೇರಿ ಸ್ವಚ್ಛತಾ ಕಾರ್ಯಕ್ರಮ ನಡೆಸಿದ್ದು ವಿಶೇಷವಾಗಿತ್ತು. ಈ ಸ್ವಚ್ಛತಾ ಕಾರ್ಯದಲ್ಲಿಬಿಸಗೋಡದಿಂದ ಆನಗೋಡದವರೆಗೆ ಏಕತೆಗಾಗಿ ಓಟ-ಸ್ವಚ್ಛತೆಯ ನೋಟ ದ್ದೇಶದೊಂದಿಗೆ ಸುಮಾರು 4.5 ಕಿ.ಮೀ. ದೂರ ಕ್ರಮಿಸಿ ಅಂದಾಜು 3 ಕ್ವಿಂಟಾಲ್‌ನಷ್ಟು ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹಿಸಿದ್ದು, ನಗರಸಭೆಯ ಕಸದ ತೊಟ್ಟಿಗೆ ವಿಲೇವಾರಿ ಮಾಡಲಾಗಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ