ಆ್ಯಪ್ನಗರ

ಪಿಎಸ್‌ಐ ಅಮಾನತಿಗೆ ಬಿಜೆಪಿ ಜಿಲ್ಲಾಧ್ಯಕ್ಷ ರ ಆಗ್ರಹ

ಸಿದ್ದಾಪುರ : ಇತ್ತೀಚೆಗೆ ತಾಲೂಕಿನ ಅವರಗುಪ್ಪ ಗ್ರಾಮದ ಕೌಸರ್‌ಬಾನು ರಫೀಕ್‌ ಸಾಬ್‌ ಎನ್ನುವವರಿಗೆ ಸ್ಥಳೀಯ ಪೊಲೀಸ್‌ ಠಾಣೆಯ ಪಿಎಸ್‌ಐ ನಿತ್ಯಾನಂದ ಗೌಡ ಬಡ್ಡಿಗೆ ಪಡೆದ ಹಣವನ್ನು ವಾಪಸ್‌ ನೀಡುವಂತೆ ಖಾಲಿ ಚೆಕ್‌ ಮತ್ತು ಬಾಂಡ್‌ ನೀಡುವಂತೆ ಒತ್ತಾಯಿಸಿರುವುದು ಖಂಡನೀಯ. ಈ ಅಧಿಕಾರಿಯನ್ನು ಅಮಾನತುಗೊಳಿಸಿ ಘಟನೆಯ ಬಗ್ಗೆ ತನಿಖೆ ನಡೆಸಬೇಕು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಜಿ.ನಾಯ್ಕ ಹಣಜೀಬೈಲ್‌ ಆಗ್ರಹಿಸಿದರು.

Vijaya Karnataka 31 Jan 2019, 5:00 am
ಸಿದ್ದಾಪುರ : ಇತ್ತೀಚೆಗೆ ತಾಲೂಕಿನ ಅವರಗುಪ್ಪ ಗ್ರಾಮದ ಕೌಸರ್‌ಬಾನು ರಫೀಕ್‌ ಸಾಬ್‌ ಎನ್ನುವವರಿಗೆ ಸ್ಥಳೀಯ ಪೊಲೀಸ್‌ ಠಾಣೆಯ ಪಿಎಸ್‌ಐ ನಿತ್ಯಾನಂದ ಗೌಡ ಬಡ್ಡಿಗೆ ಪಡೆದ ಹಣವನ್ನು ವಾಪಸ್‌ ನೀಡುವಂತೆ ಖಾಲಿ ಚೆಕ್‌ ಮತ್ತು ಬಾಂಡ್‌ ನೀಡುವಂತೆ ಒತ್ತಾಯಿಸಿರುವುದು ಖಂಡನೀಯ. ಈ ಅಧಿಕಾರಿಯನ್ನು ಅಮಾನತುಗೊಳಿಸಿ ಘಟನೆಯ ಬಗ್ಗೆ ತನಿಖೆ ನಡೆಸಬೇಕು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಜಿ.ನಾಯ್ಕ ಹಣಜೀಬೈಲ್‌ ಆಗ್ರಹಿಸಿದರು.
Vijaya Karnataka Web bjp demands demands for psi suspension
ಪಿಎಸ್‌ಐ ಅಮಾನತಿಗೆ ಬಿಜೆಪಿ ಜಿಲ್ಲಾಧ್ಯಕ್ಷ ರ ಆಗ್ರಹ

ಅವರು ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೌಸರ್‌ಬಾನುರವರು ಪತ್ರಿಕಾಗೋಷ್ಠಿ ನಡೆಸಿ ಈ ವಿಷಯವನ್ನು ತಿಳಿಸಿದ್ದು, ಮುಖ್ಯಮಂತ್ರಿಗೆ, ಹಿರಿಯ ಪೋಲೀಸ್‌ ಅಧಿಕಾರಿಗಳಿಗೆ ಪತ್ರವನ್ನೂ ಬರೆದಿದ್ದಾರೆ. ಆದರೆ ಇಲ್ಲಿಯವರೆಗೆ ಈ ಅಧಿಕಾರಿಯ ಮೆಲೆ ಯಾವುದೇ ಕ್ರಮ ಜರುಗಿಸಿಲ್ಲ. ಯಾವುದೇ ಬ್ಯಾಂಕ್‌ ಆಗಲಿ, ಸಹಕಾರಿ ಸಂಘವಾಗಲಿ, ಬಡ್ಡಿ ವ್ಯವಹಾರ ನಡೆಸುವವರಾಗಲಿ ಬಲಾತ್ಕಾರದಿಂದ ಸಾಲ ವಸೂಲಿ ಮಾಡುವಂತಿಲ್ಲ ಎಂದು ಮುಖ್ಯಮಂತ್ರಿಗಳೇ ಸೂಚಿಸಿದ್ದಾರೆ ಆದರೆ ಇಲ್ಲಿ ಅಧಿಕಾರಿಯೆ ಬಡ್ಡಿ ವಸೂಲಿಗಾರನ ಪರವಾಗಿ ನಿಂತಿರುವುದು ವಿಪರ್ಯಾಸವಾಗಿದೆ. 25 ವರ್ಷದಿಂದ ಜಿಲ್ಲೆಯಲ್ಲಿ ಅಧಿಕಾರ ಹಿಡಿದಿಟ್ಟುಕೊಂಡಿರುವ ಆರ್‌.ವಿ.ದೇಶಪಾಂಡೆಯವರು ಎಲ್ಲ ಅಧಿಕಾರಿಗಳನ್ನೂ ಹಿಡಿತದಲ್ಲಿಟ್ಟುಕೊಂಡಿದ್ದೇನೆ ಎನ್ನುತ್ತಾರೆ. ಆದರೆ ಒಬ್ಬ ಪಿಎಸ್‌ಐ ಮಟ್ಟದ ಅಧಿಕಾರಿ ಈ ರೀತಿ ಮಾಡುತ್ತಿರುವುದು ದೇಶಪಾಂಡೆಯವರಿಗೆ ಅಧಿಕಾರಿಗಳ ಮೇಲೆ ಹಿಡಿತವಿಲ್ಲ ಎನ್ನುವುದನ್ನು ಸೂಚಿಸುತ್ತದೆ. ಅಲ್ಲದೇ ನಾಲ್ಕು ತಿಂಗಳಿಂದ ತಾಲೂಕಿನ ವಿವಿಧ ದೇವಸ್ಥಾನಗಳಲ್ಲಿ ಕಳ್ಳತನವಾಗುತ್ತಿದೆ, ಇಸ್ಪೀಟ್‌, ಜುಗಾರಿ ಮುಂತಾದ ದೋನಂಬರ್‌ ದಂಧೆ ಆರಂಭವಾಗಿದೆ. ಇವೆಲ್ಲವನ್ನು ನಿಯಂತ್ರಿಸುವುದು ಬಿಟ್ಟು ಈ ಪೊಲೀಸ್‌ ಅಧಿಕಾರಿ ಬಡ್ಡಿವಸೂಲಿಗೆ ನಿಂತಿರುವುದು ಇಲಾಖೆ ತಲೆ ತಗ್ಗಿಸುವಂತಾಗಿದೆ. ಒಂದು ವಾರದಲ್ಲಿ ಈ ಅಧಿಕಾರಿಯನ್ನು ಅಮಾನತಿನಲ್ಲಿಟ್ಟು ತನಿಖೆ ನಡೆಸದಿದ್ದರೆ ಪೊಲೀಸ್‌ ಠಾಣೆಯ ಎದುರು ಪಕ್ಷಾತೀತವಾಗಿ ಸಾರ್ವಜನಿಕ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಪಂ ಸದಸ್ಯ ನಾಗರಾಜ ನಾಯ್ಕ ಬೇಡ್ಕಣಿ ಪಪಂ ಅಧ್ಯಕ್ಷೆ ಸುಮನಾ ಕಾಮತ್‌ ಸ್ತಾಯಿ ಸಮಿತಿ ಅಧ್ಯಕ್ಷ ಮಾರುತಿ ನಾಯ್ಕ ಹೊಸೂರು, ವಿನಯ ಹೊನ್ನೆಗುಂಡಿ, ಗುರುರಾಜ ಶಾನಬಾಗ, ಎಸ್‌.ಕೆ.ಮೇಸ್ತ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ