ಆ್ಯಪ್ನಗರ

ಬಿಜೆಪಿ ಜಿಲ್ಲಾ ಪ್ರಧಾನ ಸಂಚಾಲಕ ನಾಗರಾಜ ನಾಯಕ

ಕುಮಟಾ : ತನ್ನ 70 ವರ್ಷಗಳ ಆಡಳಿತದಲ್ಲಿ ಕಾಂಗ್ರೆಸ್‌ ಮಹಿಳೆಯರಿಗಾಗಿ ನೀಡಿದ ಯೋಜನೆಗಳ ಎರಡರಷ್ಟು ಸವಲತ್ತುಗಳನ್ನು ಮೋದಿ ಸರಕಾರ ಕೇವಲ 5 ವರ್ಷದಲ್ಲಿ ನೀಡಿದೆ. ಅಲ್ಲದೇ ಜೆಡಿಎಸ್‌ ಪಕ್ಷ ತನ್ನ ಚಿಹ್ನೆಯಲ್ಲಿ ತೋರಿದಂತೆ ಮಹಿಳೆಯರ ತಲೆಯ ಮೇಲೆ ಹೊರೆ ಹೊರಿಸಿದೆ. ಹೀಗಾಗಿ ಆ ಪಕ್ಷ ಕ್ಕೆ ಮಹಿಳೆಯರ ಕಾಳಜಿ ಎಳ್ಳಷ್ಟೂ ಇಲ್ಲ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಸಂಚಾಲಕ ನಾಗರಾಜ ನಾಯಕ ಆರೋಪಿಸಿದರು.

Vijaya Karnataka 15 Apr 2019, 5:00 am
ಕುಮಟಾ : ತನ್ನ 70 ವರ್ಷಗಳ ಆಡಳಿತದಲ್ಲಿ ಕಾಂಗ್ರೆಸ್‌ ಮಹಿಳೆಯರಿಗಾಗಿ ನೀಡಿದ ಯೋಜನೆಗಳ ಎರಡರಷ್ಟು ಸವಲತ್ತುಗಳನ್ನು ಮೋದಿ ಸರಕಾರ ಕೇವಲ 5 ವರ್ಷದಲ್ಲಿ ನೀಡಿದೆ. ಅಲ್ಲದೇ ಜೆಡಿಎಸ್‌ ಪಕ್ಷ ತನ್ನ ಚಿಹ್ನೆಯಲ್ಲಿ ತೋರಿದಂತೆ ಮಹಿಳೆಯರ ತಲೆಯ ಮೇಲೆ ಹೊರೆ ಹೊರಿಸಿದೆ. ಹೀಗಾಗಿ ಆ ಪಕ್ಷ ಕ್ಕೆ ಮಹಿಳೆಯರ ಕಾಳಜಿ ಎಳ್ಳಷ್ಟೂ ಇಲ್ಲ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಸಂಚಾಲಕ ನಾಗರಾಜ ನಾಯಕ ಆರೋಪಿಸಿದರು.
Vijaya Karnataka Web bjp district chief convener nagaraj nayak
ಬಿಜೆಪಿ ಜಿಲ್ಲಾ ಪ್ರಧಾನ ಸಂಚಾಲಕ ನಾಗರಾಜ ನಾಯಕ


ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರ ಸ್ವಾವಲಂಬಿ ಜೀವನದ ಜತೆಗೆ ರಕ್ಷ ಣೆಯ ಹಿತದೃಷ್ಟಿಯಿಂದ ಮೋದಿಯವರು ಹಲವಾರು ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಉತ್ತರ ಕನ್ನಡಕ್ಕೆ ಸಂಬಂಧಿಸಿದಂತೆ 1.45 ಸಾವಿರ ಉಜ್ವಲ ಗ್ಯಾಸ್‌ ಹಾಗೂ 1.89 ಸಾವಿರ ನೂತನ ಶೌಚಾಲಯಗಳನ್ನು ನೀಡಿದ್ದಾರೆ. ಪ್ರಧಾನಿ ಮೋದಿ ಚುನಾವಣೆಗೂ ಮುನ್ನ ನೀಡಿರುವ ಆಶ್ವಾಸನೆಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಆಡಳಿತದಲ್ಲಿ ರಕ್ಷ ಣಾ ಸಚಿವರು ವಿದೇಶಾಂಗ ಸಚಿವರು ಮಹಿಳೆಯರೇ ಆಗಿದ್ದಾರೆ. ಅಲ್ಲದೇ ಮಹಿಳೆಯರನ್ನು ತಾಯಿಯೆಂದು ಭಾವಿಸುವ ಪ್ರಧಾನಿಯವರು ಅವರಿಗಾಗಿ ಮಾತೃ ವಂದನಾ, ಇಂದ್ರಧನುಷ್‌ ಯೋಜನೆ, ಸುಕನ್ಯಾ ಸಮೃದ್ಧಿ, ಪೋಷಣ್‌ ಯೋಜನಾ, ಮುದ್ರಾ ಯೋಜನಾ, ಸ್ಟಾರ್ಟ್‌ ಆಫ್‌ ಇಂಡಿಯಾ-ಸ್ಟ್ಯಾಂಡ್‌ ಅಫ್‌ ಇಂಡಿಯಾ ಸೇರಿದಂತೆ ಹಲವಾರು ಯೋಜನೆಗಳನ್ನು ಮಹಿಳೆಯರಿಗಾಗಿ ನೀಡಿದ್ದಾರೆ. ಕಾಂಗ್ರೆಸ್‌ ಸರಕಾರ ಇರುವಾಗ ದೇಶದಲ್ಲಿ ಶೇ.38ರಷ್ಟು ಶೌಚಾಲಯಗಳಿದ್ದವು. ಆದರೆ ಮೋದಿಯವರು ಪ್ರಧಾನಿಯಾದ ಬಳಿಕ ದೇಶಾದ್ಯಂತ ಶೇ.91ರಷ್ಟು ಅಂದರೆ 9.74 ಕೋಟಿ ಶೌಚಾಲಯಗಳು ನಿರ್ಮಾಣಗೊಂಡಿವೆ. ಸ್ಟಾರ್ಟ್‌ ಆಫ್‌ ಇಂಡಿಯಾ-ಸ್ಟ್ಯಾಂಡ್‌ ಅಫ್‌ ಇಂಡಿಯಾದಡಿ ಮಹಿಳೆಯರು 10 ಲಕ್ಷ ದಿಂದ 1 ಕೋಟಿ ರೂ.ಗಳ ವರೆಗೆ ಸಾಲಸೌಲಭ್ಯ ಪಡೆಯಬಹುದಾಗಿದೆ.

ಆಶಾ ಕಾರ್ಯಕರ್ತೆಯರಿಗೆ 5100 ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ 9000 ರೂ.ವರೆಗೆ ಸಂಬಳವನ್ನು ಅಧಿಕಗೊಳಿಸಲಾಗಿದೆ. 6 ತಿಂಗಳು ಹೆರಿಗೆ ರಜೆಯನ್ನು ಹೆಚ್ಚಿಸಲಾಗಿದೆ. ಇದರಂತೆ ಮೋದಿ ನೇತೃತ್ವದ ಕೇಂದ್ರ ಸರಕಾರ ಮಹಿಳೆಯರ ಅನುಕೂಲಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸಿದೆ ಎಂದರು.

ಜಿಲ್ಲಾ ಸಹಸಂಚಾಲಕ ವೆಂಕಟ್ರಮಣ ಹೆಗಡೆ, ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಸಂಚಾಲಕ ಎಂ.ಜಿ.ಭಟ್‌, ಬಿಜೆಪಿ ಘಟಕಾಧ್ಯಕ್ಷ ಕುಮಾರ ಮಾರ್ಖಂಡೆ, ಪ್ರಮುಖರಾದ ಅಶೋಕ ಪ್ರಭು, ಜಗದೀಶ ಬಲ್ಲಾಳ, ಪಲ್ಲವಿ ಮಡಿವಾಳ ಮೊದಲಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ