ಆ್ಯಪ್ನಗರ

ಕುಮಟಾ: ಶಾಲೆ ಬಳಿ ಬಾಂಬ್‌ ಪತ್ತೆ, ಸಮಗ್ರ ತನಿಖೆಗೆ ವಿಶೇಷ ತಂಡ ರಚನೆ

ಗುರುವಾರ ಮುಂಜಾನೆಯಿಂದ ಬಾಂಬ್‌ ಪತ್ತೆಯಾದ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಹೆಜ್ಜೆ ಹೆಜ್ಜೆಯನ್ನು ಪರಿಶೀಲಿಸುತ್ತಿದ್ದಾರೆ. ಅಲ್ಲಿ ಬಿದ್ದಿರುವ ತ್ಯಾಜ್ಯ ವಸ್ತುಗಳಲ್ಲಿ ಕೆಲವು ಸಂಶಯಾಸ್ಪದ ವಸ್ತುಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ.

Vijaya Karnataka 28 Oct 2021, 11:33 pm
ಕುಮಟಾ: ಪಟ್ಟಣದ ವಿದ್ಯಾಧಿರಾಜ ಪಾಲಿಟೆಕ್ನಿಕ್‌ ಕಾಲೇಜಿನ ಹಿಂಭಾಗದಲ್ಲಿ ಬಾಂಬ್‌ ಪತ್ತೆಯಾದ ಅರಣ್ಯ ಪ್ರದೇಶದಲ್ಲಿ ಕಿರುಜಾಡಿಯಲ್ಲಿ ಪೊಲೀಸರು ಅಗತ್ಯ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದರು.
Vijaya Karnataka Web ಪೊಲೀಸ್‌
ಪೊಲೀಸ್‌


ಬಾಂಬ್‌ ಡಮ್ಮಿಯಾದರೂ ಈ ಪ್ರಕರಣವನ್ನು ಲಘುವಾಗಿ ಪರಿಗಣಿಸಲಾಗದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ತಿಳಿಸಿದ್ದಾರೆ. ಹೀಗಾಗಿ ಉತ್ತರ ಕನ್ನಡ ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಬದ್ರಿನಾಥ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸಲು ವಿಶೇಷ ತಂಡವನ್ನು ರಚಿಸಿದ್ದಾರೆ.

ಕೆಂಪಡಕೆ ದರ ಕುಸಿತ; ಮತ್ತಷ್ಟು ದರ ಏರಿಕೆಯಲ್ಲಿ ಅಡಕೆ ಮಾರದ ಬೆಳೆಗಾರರಿಗೆ ತೀವ್ರ ನಿರಾಸೆ!

ಈ ತಂಡ ಗುರುವಾರ ಮುಂಜಾನೆಯಿಂದ ಬಾಂಬ್‌ ಪತ್ತೆಯಾದ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಹೆಜ್ಜೆ ಹೆಜ್ಜೆಯನ್ನು ಪರಿಶೀಲಿಸುತ್ತಿದ್ದಾರೆ. ಅಲ್ಲಿ ಬಿದ್ದಿರುವ ತ್ಯಾಜ್ಯ ವಸ್ತುಗಳಲ್ಲಿ ಕೆಲವು ಸಂಶಯಾಸ್ಪದ ವಸ್ತುಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಹಿಂದೆ ನಡೆಸಿರುವ ಕುಚೋದ್ಯಗಳ ಕುರಿತು ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ.

ಕಾರವಾರ, ಮಂಗಳೂರಿನಿಂದ ಬಾಂಬ್‌ ಪತ್ತೆದಳ ಹಾಗೂ ನಿಷ್ಕ್ರಿಯ ದಳ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ನಾಗರಿಕರ ನೆಮ್ಮದಿ ಕೆಡಿಸುವ ಇಂತಹ ದುಷ್ಕೃತ್ಯಗಳ ಹಿಂದಿನ ಕೈಗಳನ್ನು ಪೊಲೀಸರು ಪತ್ತೆ ಹಚ್ಚಲು ಕ್ರಿಯಾಶೀಲರಾಗಿದ್ದಾರೆ. ಈ ಪ್ರಕರಣ ಪತ್ತೆಯಾಗುತ್ತಿದ್ದಂತೆ ಜಿಲ್ಲೆಯಾದ್ಯಂತ ಪೊಲೀಸ್‌ ಇಲಾಖೆ ಅಲರ್ಟ್‌ ಆಗಿದೆ.

ಉತ್ತರ ಕನ್ನಡ: ಹುಲಿ ಟ್ರ್ಯಾಪ್‌, ಸಂರಕ್ಷಣೆಗೆ ತೊಡಕು

ಜಿಲ್ಲೆಯ ಆಯಕಟ್ಟಿನ ಡ್ಯಾಂ, ಸ್ಥಾವರ, ರೈಲ್ವೆ ನಿಲ್ದಾಣಗಳ ಪ್ರದೇಶದಲ್ಲಿ ತೀವ್ರ ಕಟ್ಟೆಚ್ಚರ ವಹಿಸಿದೆ. ಕಾಲೇಜು ಹಿಂಭಾಗದಲ್ಲಿ ಲಭ್ಯವಾಗಿರುವ ಕೆಲವು ವಸ್ತುಗಳಿಂದ ಮಾದಕ ವಸ್ತುಗಳ ಸೇವನೆಯ ವಾಸನೆ ಸಹ ಬೀರುತ್ತಿರುವ ಬಗ್ಗೆ ಮಾತು ಕೇಳಿ ಬಂದಿದೆ. ಹೀಗೆ ಬಾಂಬ್‌ ಪತ್ತೆಯ ಹಾಗೂ ಇತರ ಚರ್ಚೆ ಗುರುವಾರ ಜನರಲ್ಲಿ ಹರಿದಾಡಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ