ಆ್ಯಪ್ನಗರ

ಬಾಲವಿಲ್ಲದ ಕರು ಜನನ

ಬಾಲವಿಲ್ಲದ ಕರು ಜನನ ವಿಕ ಸುದ್ದಿಲೋಕ ಕುಮಟಾ ತಾಲೂಕಿನ ಆಂದ್ಲೆಯ ನಿವೃತ್ತ ಶಾಲಾ ಮುಖ್ಯಾಧ್ಯಾಪಕ ವಿಠ್ಠಲ ಸಾತು ನಾಯಕ ಅವರ ಆಕಳ ಬಾಲವಿಲ್ಲದ ವಿಚಿತ್ರ ಕರುವಿಗೆ ಜನ್ಮ ನೀಡಿದೆ...

Vijaya Karnataka 21 Dec 2019, 5:00 am
ಕುಮಟಾ : ತಾಲೂಕಿನ ಆಂದ್ಲೆಯ ನಿವೃತ್ತ ಶಾಲಾ ಮುಖ್ಯಾಧ್ಯಾಪಕ ವಿಠ್ಠಲ ಸಾತು ನಾಯಕ ಅವರ ಆಕಳ ಬಾಲವಿಲ್ಲದ ವಿಚಿತ್ರ ಕರುವಿಗೆ ಜನ್ಮ ನೀಡಿದೆ.
Vijaya Karnataka Web born without a calf
ಬಾಲವಿಲ್ಲದ ಕರು ಜನನ


ಕರುವಿನ ಮುಂದಿನ ಎರಡು ಕಾಲುಗಳು ಚಿಕ್ಕದಾಗಿದ್ದು ಹಿಂದಿನ ಕಾಲುಗಳು ತುಸು ದೊಡ್ಡದಾಗಿವೆ. ಈ ಕರುವಿಗೆ ಸರಿಯಾಗಿ ತನ್ನ ಕಾಲಿನ ಮೇಲೆ ನಿಲ್ಲಲಾಗುತ್ತಿಲ್ಲ. ವಿಠ್ಠಲ ನಾಯಕ ಅವರು ಪಶು ಪ್ರೇಮಿಯಾಗಿದ್ದು ಜಾನುವಾರುಗಳ ಕುರಿತು ಅಪಾರ ಕಳಕಳಿ ಉಳ್ಳವರು. ಶಿಕ್ಷಕ ಸೇವೆಯಲ್ಲಿರುವಾಗಲೇ ಆಕಳನ್ನು ಸಾಕಿ ಸಲಹುವ ಇವರು ನಸುಕಿನಲ್ಲಿ4 ಗಂಟೆಗೆ ಹಾಲು ಕರೆಯುವ ಪ್ರವೃತ್ತಿ ರೂಢಿಸಿಕೊಂಡಿದ್ದಾರೆ. ಕರುವಿಗೆ ಬಾಲವಿಲ್ಲದ ಕುರಿತು ಶಿಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ.

ಕ್ಯಾಲ್ಸಿಯಂ ಕೊರತೆ, ಅನುವಂಶಿಯತೆಯಿಂದಾದ ಅಂಗವೈಕಲ್ಯ ಇರುತ್ತದೆ. ಬಾಲ ಇರಲೇಬೇಕೆಂದೇನೂ ಇಲ್ಲ. ಬಾಲ ಇಲ್ಲದಿದ್ದರೂ ಪ್ರಾಣಿಗಳು ಬದುಕು ಸಾಗಿಸುತ್ತವೆ. ಕರುವಿಗೆ ಆಕಳ ಹಾಲು ಹೆಚ್ಚು ಕುಡಿಸಿ ಕ್ಯಾಲ್ಸಿಯಂ ಲಿಕ್ವಿಡ್‌ ನೀಡಿದರೆ ಕರುವಿನ ಎರಡೂ ಕಾಲುಗಳು ಸರಿಹೋಗುತ್ತವೆ. ಬಾಲವಿಲ್ಲದಿರುವುದು ಅಂಗವೈಕಲ್ಯವೇ ಹೊರತು ಕರುವಿಗೆ ಯಾವುದೇ ತೊಂದರೆ ಇಲ್ಲಎನ್ನುತ್ತಾರೆ ಪಶು ವೈದ್ಯ ಡಾ.ಕೃಷ್ಣಮೂರ್ತಿ ಹೆಗಡೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ