ಆ್ಯಪ್ನಗರ

ಬೇಲೆಖಾನ ಹರಿಜನ ಕೇರಿಗೆ ರಸ್ತೆ ನಿರ್ಮಿಸಿ

ಗೋಕರ್ಣ : ಇಲ್ಲಿನ ಬೇಲೆಖಾನಿನ ಕೊನೆಯಲ್ಲಿ (ಅಶೋಕೆಯಲ್ಲಿ) ವಾಸವಿರುವ ಹರಿಜನ ಕೇರಿಗೆ ನಿತ್ಯ ಸಂಚರಿಸಲು ರಸ್ತೆ ನಿರ್ಮಿಸಿ ಕೊಡುವಂತೆ ಅಲ್ಲಿಯ ನಿವಾಸಿಗಳು ಶಾಸಕ ದಿನಕರ ಶೆಟ್ಟಿಯವರಿಗೆ ಕುಮಟಾಕ್ಕೆ ತೆರಳಿ ಮನವಿ ಸಲ್ಲಿಸಿದರು.

Vijaya Karnataka 14 Jun 2019, 10:57 pm
ಗೋಕರ್ಣ : ಇಲ್ಲಿನ ಬೇಲೆಖಾನಿನ ಕೊನೆಯಲ್ಲಿ (ಅಶೋಕೆಯಲ್ಲಿ) ವಾಸವಿರುವ ಹರಿಜನ ಕೇರಿಗೆ ನಿತ್ಯ ಸಂಚರಿಸಲು ರಸ್ತೆ ನಿರ್ಮಿಸಿ ಕೊಡುವಂತೆ ಅಲ್ಲಿಯ ನಿವಾಸಿಗಳು ಶಾಸಕ ದಿನಕರ ಶೆಟ್ಟಿಯವರಿಗೆ ಕುಮಟಾಕ್ಕೆ ತೆರಳಿ ಮನವಿ ಸಲ್ಲಿಸಿದರು.
Vijaya Karnataka Web build a road to the roof of the canopy
ಬೇಲೆಖಾನ ಹರಿಜನ ಕೇರಿಗೆ ರಸ್ತೆ ನಿರ್ಮಿಸಿ


ನೂರು ಮನೆಗಳಿರುವ ಜಾಗದಲ್ಲಿ ಮುಕ್ರಿ ಸಮಾಜದವರು ವಾಸಿಸುತ್ತಿದ್ದು, ನಿತ್ಯ ಕೂಲಿ ಮಾಡಿ ಬದುಕು ಸಾಗಿಸುತ್ತಿದ್ದೇವೆ. ಬೇಲೆಖಾನ್‌ನಿಂದ ತದಡಿಯ ವರೆಗೆ ರಸ್ತೆ ಇದೆ. ಆದರೆ ಬೇಲೆಖಾನ್‌ಗೆ ಬರಬೇಕಾದರೆ ಎರಡು ಖಾಸಗಿ ಜಾಗಗಳನ್ನು ದಾಟಿ ಅಂದಾಜು 200 ಮೀ.ಗಿಂತ ಹೆಚ್ಚು ನಡೆದು ಬರಬೇಕು. ವೈದ್ಯರು ಅನಾರೋಗ್ಯ ಪೀಡಿತರನ್ನು ಹೊತ್ತು ಸಾಗಬೇಕು. ಖಾಸಗಿ ಜಾಗದವರ ಗೇಟ್‌ ದಾಟಿ ಹೋಗಲು ಹರಸಾಹಸ ಪಡಬೇಕಾಗುತ್ತದೆ. ಶಾಲಾ ಮಕ್ಕಳಿಗೂ ಇದೇ ಸಮಸ್ಯೆ ಇದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಮನವಿ ಸ್ವೀಕರಿಸಿ ಮಾತನಾಡಿದ ಶಾಸಕರು, ಈ ಮೊದಲು ತದಡಿ ಬೇಲೆಖಾನ್‌ ರಸ್ತೆಯನ್ನು ತಮ್ಮ ಅನುದಾನದಡಿಯಲ್ಲೇ ನಿರ್ಮಿಸಿ ಕೊಟ್ಟಿದ್ದು ಅದರಂತೆ ನಿಮಗೂ ರಸ್ತೆ ನಿರ್ಮಿಸಿ ಕೊಡುವುದಾಗಿ ತಿಳಿಸಿದರು. ಈ ಸಮಯದಲ್ಲಿ ನಾಗೇಶ ಸೂರಿ, ಗಣಪತಿ ನಾಯ್ಕ, ಊರ ನಾಗರಿಕರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ