ಆ್ಯಪ್ನಗರ

ಸೆ.13ಕ್ಕೆ ಶಿರಸಿಯಲ್ಲಿ ಕ್ಯಾಂಪ್ಕೋ ಪ್ರಾದೇಶಿಕ ಸಭೆ

ಶಿರಸಿ: ಕೇರಳ ಕರ್ನಾಟಕ ಉಭಯ ರಾಜ್ಯಗಳ ಅಡಕೆ, ಕೊಕ್ಕೋ, ರಬ್ಬರ್‌ ವಹಿವಾಟು ಸಂಸ್ಥೆ ಕ್ಯಾಂಪ್ಕೋ ಸಹಕಾರಿ ಸಂಸ್ಥೆಯ ಸದಸ್ಯ ಬೆಳೆಗಾರರ ಪ್ರಾದೇಶಿಕ ಸಭೆ ಇಲ್ಲಿನ ಟಿಎಂಎಸ್‌ ಸಭಾಂಗಣದಲ್ಲಿಸೆ.13ರಂದು ಬೆಳಗ್ಗೆ 10ಕ್ಕೆ ನಡೆಯಲಿದೆ.

Vijaya Karnataka 10 Sep 2019, 5:00 am
ಶಿರಸಿ: ಕೇರಳ ಕರ್ನಾಟಕ ಉಭಯ ರಾಜ್ಯಗಳ ಅಡಕೆ, ಕೊಕ್ಕೋ, ರಬ್ಬರ್‌ ವಹಿವಾಟು ಸಂಸ್ಥೆ ಕ್ಯಾಂಪ್ಕೋ ಸಹಕಾರಿ ಸಂಸ್ಥೆಯ ಸದಸ್ಯ ಬೆಳೆಗಾರರ ಪ್ರಾದೇಶಿಕ ಸಭೆ ಇಲ್ಲಿನ ಟಿಎಂಎಸ್‌ ಸಭಾಂಗಣದಲ್ಲಿಸೆ.13ರಂದು ಬೆಳಗ್ಗೆ 10ಕ್ಕೆ ನಡೆಯಲಿದೆ.
Vijaya Karnataka Web campco regional meeting in shirazi september 13
ಸೆ.13ಕ್ಕೆ ಶಿರಸಿಯಲ್ಲಿ ಕ್ಯಾಂಪ್ಕೋ ಪ್ರಾದೇಶಿಕ ಸಭೆ


ಸಂಸ್ಥೆಯ ಸ್ಥಳೀಯ ಶಾಖೆಯಲ್ಲಿಸೋಮವಾರ ಸುದ್ದಿಗೋಷ್ಠಿಯಲ್ಲಿಕ್ಯಾಂಪೊ್ಕ ನಿರ್ದೇಶಕ ಶಂಭುಲಿಂಗ ಹೆಗಡೆ ನಿಡಗೋಡ ಅವರು ಈ ಕುರಿತು ವಿವರಣೆ ನೀಡಿದರು. ಮಂಗಳೂರಿನಲ್ಲಿಸಭೆ ನಡೆಸಿದರೆ ಜಿಲ್ಲೆಯ ರೈತರಿಗೆ ಹೋಗುವುದಕ್ಕೆ ತೊಂದರೆಯಾಗುತ್ತದೆ ಎಂಬ ಕಾರಣದಿಂದ ಸ್ಥಳೀಯವಾಗಿಯೇ ಸಭೆ ನಡೆಸಲಾಗುತ್ತಿದೆ ಎಂದರು. ಕ್ಯಾಂಪ್ಕೋ ಅಧ್ಯಕ್ಷ ಎಸ್‌.ಆರ್‌.ಸತೀಶ್ಚಂದ್ರ ಅಧ್ಯಕ್ಷತೆಯಲ್ಲಿಸಭೆ ನಡೆಯಲಿದೆ. ಉಪಾಧ್ಯಕ್ಷ ಶಂಕರನಾರಾಯಣ ಭಟ್ಟ ಕೆ., ನಿರ್ದೇಶಕರು ಕೂಡ ಪಾಲ್ಗೊಳ್ಳಲಿದ್ದಾರೆ ಎಂದರು.

ಜಿಲ್ಲೆಯಲ್ಲಿ8ಸಾವಿರಕ್ಕೂ ಹೆಚ್ಚು ಸದಸ್ಯರಿದ್ದು ಅದರಲ್ಲಿ650ರಷ್ಟು ಸದಸ್ಯರು ಸಂಸ್ಥೆಯೊಂದಿಗೆ ನೇರವಾಗಿ ವ್ಯವಹಾರ ಮಾಡುತ್ತಿದ್ದಾರೆ. ಶಿರಸಿಯಲ್ಲಿಕಳೆದ ಅವಧಿಯಲ್ಲಿ26ಸಾವಿರ ಕ್ವಿಂಟಲ್‌ ಖರೀದಿಯಾಗಿದೆ. 5 ತಾಲೂಕುಗಳ ವ್ಯಾಪ್ತಿಯಲ್ಲಿ68ಸಾವಿರ ಕ್ವಿಂಟಲ್‌ ಖರೀದಿ ಮಾಡಲಾಗಿದೆ ಎಂದು ವಿವರಿಸಿದರು.

ಅಡಕೆ ದರ ಹಿಂದಕ್ಕೆ ಬಂದಾಗ ಸ್ಥಿರವಾಗಿ ಅಡಕೆ ದರ ನಿಲ್ಲಲು ಕೆಲಸ ಮಾಡುತ್ತಿದೆ. ಅಡಕೆಯ ನೇರ ಖರೀದಿಯನ್ನೂ ಶಿರಸಿಯಲ್ಲಿಮಾಡಲಾಗುತ್ತಿದೆ. ಈ ಭಾಗದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ಸಂಸ್ಥೆ ಈ ಬಾರಿ 28 ಕೋ.ರೂ. ಲಾಭ ಮಾಡಿದೆ. ಸಾರ್ವಕಾಲಿಕ ದಾಖಲೆ ವಹಿವಾಟಾಗಿ 1875 ಕೋ.ರೂ.ಗಳಾಗಿದೆ ಎಂದರು.

ಕ್ಯಾಂಪ್ಕೋ ಚಾಕಲೇಟ್‌ ಸ್ವಾಭಿಮಾನದ ಸ್ವದೇಶಿ ಉತ್ಪನ್ನವಾಗಿದೆ. ಚಾಕಲೇಟ್‌ ಕ್ಯಾಂಪ್ಕೋ ಚಾಕಲೇಟ್‌ ಉತ್ಪಾದನೆ 10,042 ಮೆ.ಟನ್‌ ಆಗಿದೆ. 6.98 ಕೋ.ರೂ. ಲಾಭ ಸಿಹಿ ಚಾಕಲೇಟ್‌ ಘಟಕದಿಂದ ಬಂದಿದೆ ಎಂದರು. ಪ್ರಾದೇಶಿಕ ವ್ಯವಸ್ಥಾಪಕ ಭರತ್‌ ಭಟ್ಟ, ಶಾಖಾ ವ್ಯವಸ್ಥಾಪಕ ಹರೀಶ ಭಟ್ಟ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ