ಆ್ಯಪ್ನಗರ

ಕಾರು, ಲಾರಿ ಅಪಘಾತ, ಮಹಿಳೆ ಸಾವು

ಅಂಕೋಲಾ : ರಾಷ್ಟ್ರೀಯ ಹೆದ್ದಾರಿ 66ರ ಸರಳೇಬೈಲ ಗ್ರಾಮದ ಬಳಿ ಕಾರು ಹಾಗೂ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿಮಹಿಳೆಯೊಬ್ಬರು ಮೃತಪಟ್ಟ ಘಟನೆ ಶನಿವಾರ ಸಂಜೆ ನಡೆದಿದೆ.

Vijaya Karnataka 29 Sep 2019, 5:00 am
ಅಂಕೋಲಾ : ರಾಷ್ಟ್ರೀಯ ಹೆದ್ದಾರಿ 66ರ ಸರಳೇಬೈಲ ಗ್ರಾಮದ ಬಳಿ ಕಾರು ಹಾಗೂ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿಮಹಿಳೆಯೊಬ್ಬರು ಮೃತಪಟ್ಟ ಘಟನೆ ಶನಿವಾರ ಸಂಜೆ ನಡೆದಿದೆ.
Vijaya Karnataka Web car lorry accident woman death
ಕಾರು, ಲಾರಿ ಅಪಘಾತ, ಮಹಿಳೆ ಸಾವು


ಕಾರಿನಲ್ಲಿಪ್ರಯಾಣಿಸುತ್ತಿದ್ದ ದಾಂಡೇಲಿಯ ನಗರದ ಉರ್ದು ಶಾಲೆಯ ಶಿಕ್ಷಕಿ ನಾಗವೇಣಿ ವಿಠೋಬ ನಾಯಕ (58) ಮೃತಪಟ್ಟವರು. ಕಾರು ಚಲಾಯಿಸುತ್ತಿದ್ದ ಇವರ ಪತಿ ನಿವೃತ್ತ ಹವಾಲ್ದಾರ ವಿಠೋಬ ನಾಯಕ ತೀವ್ರವಾಗಿ ಗಾಯಗೊಂಡಿದ್ದಾರೆ.

ಶನಿವಾರ ಅಂಕೋಲಾದ ಬೇಲೇಕೇರಿಯಲ್ಲಿವಾಸವಾಗಿದ್ದ ವಿಠೋಬ ನಾಯಕ ಅವರ ತಾಯಿ ಮೃತಪಟ್ಟಿದ್ದರು. ಇವರ ಅಂತ್ಯಸಂಸ್ಕಾರಕ್ಕಾಗಿ ದಾಂಡೇಲಿಯಿಂದ ಅಂಕೋಲಾಕ್ಕೆ ಕಾರಿನಲ್ಲಿಪ್ರಯಾಣಿಸುತ್ತಿದ್ದಾಗ ಅಪಘಾತ ನಡೆದಿದೆ. ಪಿಎಸ್‌ಐ ಎ.ವೈ.ಕಾಂಬಳೆ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ