ಆ್ಯಪ್ನಗರ

ಕಾಡೋದಿಲ್ಲ ಮಾಂಸ ತ್ಯಾಜ್ಯ ಸಮಸ್ಯೆ

ಭಟ್ಕಳ : ಸಮರ್ಪಕ ಘನ ತ್ಯಾಜ್ಯ ವಿಲೇವಾರಿಯಲ್ಲಿರಾಜ್ಯದ ಗಮನ ಸೆಳೆದಿರುವ ಇಲ್ಲಿಯ ಪುರಸಭೆ ಈ ನಿಟ್ಟಿನಲ್ಲಿಇನ್ನೊಂದು ಹೆಜ್ಜೆ ಮುಂದೆ ಇಟ್ಟಿದೆ. ಮಾಂಸ ತ್ಯಾಜ್ಯ ವಿಲೇವಾರಿ ಸಮಸ್ಯೆಯನ್ನು ಪಟ್ಟಣದಿಂದ ತೊಲಗಿಸುವ ಸಾಹಸಕ್ಕೆ ಇದೀಗ ಕೈ ಹಾಕಿದೆ. ಪ್ರತಿದಿನ ಮಂಗಳೂರು ಬೈಕಂಪಾಡಿಯ ಸೌಝಾ ಟ್ರೇಡಿಂಗ್‌ ಕಂಪನಿಗೆ ಕಳಿಸಲಾಗುತ್ತಿದೆ.

Vijaya Karnataka 25 Nov 2020, 5:00 am
ಭಟ್ಕಳ : ಸಮರ್ಪಕ ಘನ ತ್ಯಾಜ್ಯ ವಿಲೇವಾರಿಯಲ್ಲಿರಾಜ್ಯದ ಗಮನ ಸೆಳೆದಿರುವ ಇಲ್ಲಿಯ ಪುರಸಭೆ ಈ ನಿಟ್ಟಿನಲ್ಲಿಇನ್ನೊಂದು ಹೆಜ್ಜೆ ಮುಂದೆ ಇಟ್ಟಿದೆ. ಮಾಂಸ ತ್ಯಾಜ್ಯ ವಿಲೇವಾರಿ ಸಮಸ್ಯೆಯನ್ನು ಪಟ್ಟಣದಿಂದ ತೊಲಗಿಸುವ ಸಾಹಸಕ್ಕೆ ಇದೀಗ ಕೈ ಹಾಕಿದೆ. ಪ್ರತಿದಿನ ಮಂಗಳೂರು ಬೈಕಂಪಾಡಿಯ ಸೌಝಾ ಟ್ರೇಡಿಂಗ್‌ ಕಂಪನಿಗೆ ಕಳಿಸಲಾಗುತ್ತಿದೆ.
Vijaya Karnataka Web 5934475122BKL2_24
ಭಟ್ಕಳ ಪುರಸಭಾ ವ್ಯಾಪ್ತಿಯಿಂದ ಮಾಂಸದ ತ್ಯಾಜ್ಯಗಳನ್ನು ಸಂಗ್ರಹಿಸಿ ವಾಹನಕ್ಕೆ ತುಂಬಿಸುತ್ತಿರುವುದು


ಪುರಸಭೆ ವ್ಯಾಪ್ತಿಯಲ್ಲಿ25 ಕೋಳಿ ಮಾಂಸ ಮಾರಾಟ ಅಂಗಡಿಗಳಿವೆ. 5-6 ಕುರಿ ಮಾಂಸದ ಅಂಗಡಿಗಳು ನಿತ್ಯವೂ ವ್ಯಾಪಾರ ವಹಿವಾಟು ನಡೆಸುತ್ತಿವೆ. ಪ್ರತಿ ಮನೆಯ ಕಸ, ತ್ಯಾಜ್ಯಗಳ ಸಂಗ್ರಹದ ಜತೆಗೆ ಮಾಂಸದ ಅಂಗಡಿಗಳ ತ್ಯಾಜ್ಯಗಳನ್ನು ಸಂಗ್ರಹಿಸಿ, ಅದನ್ನು ವಿಲೇವಾರಿ ಮಾಡುವುದು ನಿಜಕ್ಕೂ ಸವಾಲಿನ ಸಂಗತಿಯಾಗಿದೆ. ಕಂಡ ಕಂಡಲ್ಲಿಮನುಷ್ಯರೇ ಮಾಂಸ ತ್ಯಾಜ್ಯಗಳನ್ನು ಎಸೆದು ಪರಿಸರಕ್ಕೆ ದುರ್ವಾಸನೆ ಹರಡುವುದು ಒಂದು ಕಡೆಯಾದರೆ, ಇನ್ನೊಂದು ಕಡೆ ಬೀದಿ ಶ್ವಾನಗಳು ಮಾಂಸದ ತ್ಯಾಜ್ಯ ಕಚ್ಚಿ ಎಳೆದಾಡದ ಜಾಗವೇ ಇಲ್ಲಎನ್ನಬಹುದು. ಕಾಗೆ, ಹದ್ದುಗಳು ತ್ಯಾಜ್ಯ ಕಚ್ಚಿಕೊಂಡು ಎಲ್ಲೆಲ್ಲಿಯೋ ಎಸೆದು ಹೊಲಸು ಮಾಡಿದ್ದೂ ಆಗಿದೆ. ಕೆಲವು ಕಂಪೌಂಡ್‌ ಇಲ್ಲದ ದೇವಸ್ಥಾನಗಳ ಒಳಗೂ ಮಾಂಸ ತ್ಯಾಜ್ಯ ಬಿದ್ದು , ಕೋಮುಗಳ ನಡುವಿನ ಸಾಮರಸ್ಯವನ್ನೇ ಹಾಳುಗೆಡುವಿದ ಉದಾಹರಣೆಗಳೂ ಇವೆ. ಈ ಎಲ್ಲಸಂಕಟಗಳಿಗೂ ಪುರಸಭೆ ಇದೀಗ ಮದ್ದು ಕಂಡು ಹಿಡಿದಿದೆ.

ಭಟ್ಕಳದಿಂದ ಮಂಗಳೂರಿಗೆ : ಭಟ್ಕಳದಿಂದ ನಿತ್ಯವೂ ತ್ಯಾಜ್ಯಗಳನ್ನು ಮಂಗಳೂರು ಬೈಕಂಪಾಡಿಯ ಸೌಝಾ ಟ್ರೇಡಿಂಗ್‌ ಕಂಪನಿಗೆ ಕಳಿಸಲಾಗುತ್ತಿದೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಪೌರ ಕಾರ್ಮಿಕರು ಕೋಳಿ, ಕುರಿ ಮಾಂಸದ ಅಂಗಡಿಗಳಿಂದ ತ್ಯಾಜ್ಯ ಸಂಗ್ರಹಿಸುತ್ತಾರೆ. ಸಂಜೆ 4 ಗಂಟೆ ಸುಮಾರಿಗೆ ಸೌಝಾ ಕಂಪನಿಯ ವಾಹನ ಈ ಎಲ್ಲಮಾಂಸದ ತ್ಯಾಜ್ಯಗಳನ್ನು ಪೆಟ್ಟಿಗೆಗಳಲ್ಲಿವ್ಯವಸ್ಥಿತವಾಗಿ ತುಂಬಿಸಿಕೊಂಡು ಮಂಗಳೂರಿಗೆ ಕೊಂಡೊಯ್ಯುತ್ತಿದೆ. ಇದರಿಂದ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಪರಿಹಾರವೊಂದು ಸಿಕ್ಕಂತಾಗಿದೆ.

ಸಾಕು ನಾಯಿಗಳಿಗೆ ಆಹಾರ : ಕಂಪನಿಯು ಮಾಂಸದ ತ್ಯಾಜ್ಯಗಳನ್ನು ಒಣಗಿಸಿ, ಪೌಡರ್‌ ಮಾಡಿ ಕೆಲವು ರಾಸಾಯನಿಕಗಳ ಸೇರ್ಪಡೆಯೊಂದಿಗೆ ಪ್ಯಾಕೆಟ್‌ಗಳಲ್ಲಿತುಂಬಿಸಿ ಮಾರುಕಟ್ಟೆಗೆ ಬಿಡುತ್ತಿದೆ. ಕಳೆದ 5 ವರ್ಷಗಳಿಂದ ಕಂಪನಿಯು ಈ ಕಾರ್ಯದಲ್ಲಿನಿರತವಾಗಿದ್ದು, ಉದ್ಯಮ ಪ್ರಗತಿಯತ್ತ ದಾಪುಗಾಲಿಟ್ಟಿದೆ. ಈ ಪ್ಯಾಕೆಟ್‌ ಫುಡ್‌ ಪ್ರಸಕ್ತವಾಗಿ ವಿವಿಧ ತಳಿಯ ಸಾಕು ನಾಯಿಗಳಿಗೆ ಆಹಾರವಾಗಿದ್ದು, ಮುಂದಿನ ದಿನಗಳಲ್ಲಿಇದನ್ನು ಉಳಿದ ಪ್ರಾಣಿ, ಪಕ್ಷಿಗಳಿಗೂ ನೀಡುವ ಪ್ರಯತ್ನ ಭರದಿಂದ ಸಾಗಿದೆ. ಭಟ್ಕಳದಲ್ಲಿಪುರಸಭೆ ಹಾಗೂ ಸೌಝಾ ಕಂಪನಿಯ ಜಂಟಿ ಪ್ರಯತ್ನ ಯಶಸ್ಸು ಕಂಡರೆ ಮಾಂಸ ತ್ಯಾಜ್ಯ ವಿಲೇವಾರಿ ಕ್ರಮವನ್ನು ಉತ್ತರಕನ್ನಡ ಜಿಲ್ಲೆಯಾದ್ಯಂತ ವಿಸ್ತರಿಸುವ ಸಾಧ್ಯತೆ ಇದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ