ಆ್ಯಪ್ನಗರ

ಕದಂಬೋತ್ಸವದಲ್ಲಿಮ್ಯಾರಥಾನ್‌ ಮೆರಗು

ಶಿರಸಿ : ಬನವಾಸಿಯಲ್ಲಿಎರಡು ದಿನಗಳ ಕಾಲ ನಡೆಯಲಿರುವ ಕದಂಬೋತ್ಸವಕ್ಕೆ ಈ ಬಾರಿ ಮ್ಯಾರಥಾನ್‌ ಸ್ಪರ್ಧೆ ಮೆರಗು ನೀಡಲಿದೆ. ಫೆ.8ರಂದು ಗುಡ್ನಾಪುರದ ರಾಣಿ ನಿವಾಸದಿಂದ ಬನವಾಸಿಯ ಶ್ರೀ ಮಧಕೇಶ್ವರ ದೇವಸ್ಥಾನದವರೆಗೆ ಮ್ಯಾರಥಾನ್‌ ಹಮ್ಮಿಕೊಳ್ಳಲಾಗಿದೆ.

Vijaya Karnataka 5 Feb 2020, 5:00 am
ಶಿರಸಿ : ಬನವಾಸಿಯಲ್ಲಿಎರಡು ದಿನಗಳ ಕಾಲ ನಡೆಯಲಿರುವ ಕದಂಬೋತ್ಸವಕ್ಕೆ ಈ ಬಾರಿ ಮ್ಯಾರಥಾನ್‌ ಸ್ಪರ್ಧೆ ಮೆರಗು ನೀಡಲಿದೆ. ಫೆ.8ರಂದು ಗುಡ್ನಾಪುರದ ರಾಣಿ ನಿವಾಸದಿಂದ ಬನವಾಸಿಯ ಶ್ರೀ ಮಧಕೇಶ್ವರ ದೇವಸ್ಥಾನದವರೆಗೆ ಮ್ಯಾರಥಾನ್‌ ಹಮ್ಮಿಕೊಳ್ಳಲಾಗಿದೆ.
Vijaya Karnataka Web cheerleader
ಕದಂಬೋತ್ಸವದಲ್ಲಿಮ್ಯಾರಥಾನ್‌ ಮೆರಗು


ಸಹಾಯಕ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಮಂಗಳವಾರ ಈ ಕುರಿತು ಮಾಹಿತಿ ನೀಡಿದರು. ಸುಮಾರು 5ಕಿ.ಮೀ ದೂರದವರೆಗೆ ನಡೆಯಲಿರುವ ಮ್ಯಾರಥಾನ್‌ ಸ್ಪರ್ಧೆಗೆ ಅಂತಾರಾಷ್ಟ್ರೀಯ ಖ್ಯಾತಿಯ ಕಬಡ್ಡಿ ಪಟು ಹರೀಶ ನಾಯ್ಕ ಚಾಲನೆ ನೀಡಲಿದ್ದಾರೆ. ಸಾರ್ವಜನಿಕರಿಗೆ ಸ್ಪರ್ಧೆಯಲ್ಲಿಭಾಗವಹಿಸಲು ಮುಕ್ತ ಅವಕಾಶ ನೀಡಲಾಗಿದೆ. ಆಸಕ್ತರು ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಇತ್ಯಾದಿ ಮಾಹಿತಿಗಳಿಗೆ ಪೂರಕವಾದ ದಾಖಲೆಗಳೊಂದಿಗೆ ಇಸಳೂರು ಪ್ರೌಢಶಾಲೆ ದೈಹಿಕ ಶಿಕ್ಷಕ ಬಿ.ವಿ ಗಣೇಶ (9448893933) ಇವರನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿದರು.

ಮ್ಯಾರಥಾನ್‌ ಸ್ಪರ್ಧೆಯಲ್ಲಿಭಾಗವಹಿಸಿ ಪ್ರಥಮ ಸ್ಥಾನ ಪಡೆದವರಿಗೆ 11ಸಾವಿರ ರೂ. ನಗದು ಬಹುಮಾನ ನೀಡಲಾಗುತ್ತಿದೆ. ದ್ವಿತೀಯ ಸ್ಥಾನ ಪಡೆದ ಇಬ್ಬರಿಗೆ 7ಸಾವಿರ ರೂ., ಹಾಗೂ ತೃತಿಯ ಸ್ಥಾನ ಪಡೆದ ಇಬ್ಬರಿಗೆ 5 ಸಾವಿರ ರೂ. ಹಾಗೂ ನಾಲ್ಕನೆ ಸ್ಥಾನ ಪಡೆದ ಇಬ್ಬರಿಗೆ 2ಸಾವಿರ ರೂ., ಬಹುಮಾನ ನೀಡಲಾಗುತ್ತದೆ ಎಂದು ವಿವರಿಸಿದ್ದಾರೆ.

ಫೆ.6ರ ಮಧ್ಯಾಹ್ನ 3ಗಂಟೆಗೆ ಕದಂಬೋತ್ಸವ ಕ್ರೀಡಾಕೂಟವು ಬನವಾಸಿಯ ಜಯಂತಿ ಪ್ರೌಢಶಾಲಾ ಆವರಣದಲ್ಲಿನಡೆಯಲಿದೆ. ಪುರುಷರ ಕಬಡ್ಡಿ, ಹಗ್ಗ-ಜಗ್ಗಾಟ, ಮಡಿಕೆ ಒಡೆಯುವ ಸ್ಪರ್ಧೆ, ಸಂಗೀತ ಖುರ್ಚಿ, ಬಿಂದಿಗೆ ಹೊತ್ತು ಓಡುವದು, ಸ್ಲೋ-ಮೊಪೆಡ್‌ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಸಹಾಯಕ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ