ಆ್ಯಪ್ನಗರ

ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ತರಬೇತಿ ಅವಶ್ಯ

ಅಂಕೋಲಾ : ಸೂಕ್ತ ಮಾರ್ಗದರ್ಶನ ಹಾಗೂ ತರಬೇತಿ ನೀಡುವುದರಿಂದ ಮಕ್ಕಳು ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಬೆಳೆಯಲು ಸಾಧ್ಯ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅರುಣ ನಾಯ್ಕ ಅಭಿಪ್ರಾಯಪಟ್ಟರು.

Vijaya Karnataka 13 Jun 2019, 5:00 am
ಅಂಕೋಲಾ : ಸೂಕ್ತ ಮಾರ್ಗದರ್ಶನ ಹಾಗೂ ತರಬೇತಿ ನೀಡುವುದರಿಂದ ಮಕ್ಕಳು ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಬೆಳೆಯಲು ಸಾಧ್ಯ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅರುಣ ನಾಯ್ಕ ಅಭಿಪ್ರಾಯಪಟ್ಟರು.
Vijaya Karnataka Web children need training for all round development
ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ತರಬೇತಿ ಅವಶ್ಯ


ಬಾಲಭವನ ಸೊಸೈಟಿ ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉತ್ತರ ಕನ್ನಡ ಕಾರವಾರ, ಶಿಶು ಅಭಿವೃದ್ಧಿ ಯೋಜನೆ ಅಂಕೋಲಾ ಹಾಗೂ ಸಂಗಾತಿ ರಂಗಭೂಮಿ ಅಂಕೋಲಾ ಇವರ ಆಶ್ರಯದಲ್ಲಿ ಆಯೋಜಿಸಿದ್ದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷ ತೆ ವಹಿಸಿ ಅವರು ಮಾತನಾಡಿದರು.

ಸಂಗಾತಿ ರಂಗಭೂಮಿ ತಂಡವು ಪರಿಣಿತ ಸಂಪನ್ಮೂಲ ವ್ಯಕ್ತಿಗಳನ್ನು ಅಳವಡಿಸಿ ಮಕ್ಕಳಿಗೆ ಬೇಕಾದ ತರಬೇತಿಗಳನ್ನು ನೀಡಿ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಆದ್ದರಿಂದ ಅಂಕೋಲಾದಲ್ಲಿ ಜರುಗಿದ ಮಕ್ಕಳ ಬೇಸಿಗೆ ಶಿಬಿರವು ಅರ್ಥಪೂರ್ಣವಾಗಿ ನಡೆದಿದೆ ಎಂದರು.

ಹಿರಿಯ ಚಿಂತಕ ಕೆ.ಎನ್‌.ನಾಯಕ ಮಾತನಾಡಿ, ಮಕ್ಕಳಿಗೆ ಪಾಲಕರು ಯಾವುದೇ ಕಾರಣಕ್ಕೂ ಮೊಬೈಲ್‌ ನೀಡಲೇಬಾರದು. ಮೊಬೈಲ್‌ನಿಂದ ಮಕ್ಕಳಿಗೆ ಲಾಭಕ್ಕಿಂತ ಹಾನಿಯೇ ಹೆಚ್ಚಾಗುತ್ತದೆ. ಈ ಬಗ್ಗೆ ಪಾಲಕರು ಗಂಭೀರವಾಗಿ ಯೋಚಿಸಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಲೇಖಕ, ಸಾಹಿತಿ ಮಹಾಂತೇಶ ರೇವಡಿ, ಅರ್ಬನ ಬ್ಯಾಂಕ್‌ ನಿರ್ದೇಶಕರಾದ ಗೋವಿಂದ್ರಾಯ ನಾಯ್ಕ, ಡ್ಯಾನ್ಸ್‌ ಮಾಸ್ಟರ್‌ ವಿಕಾಸ ಅವರು ಶಿಬಿರದ ಸಂಘಟನೆ ಹಾಗೂ ವಿದ್ಯಾರ್ಥಿಗಳ ಚಟುವಟಿಕೆಗಳನ್ನು ನೋಡಿ ಪ್ರಶಂಸಿಸಿದರು. ಶಿಬಿರದ ಕುರಿತು ಪಾಲಕರ ಪರವಾಗಿ ಜ್ಯೋತಿ, ಶಿಬಿರಾರ್ಥಿಗಳ ಪರವಾಗಿ ಸಂಚಿತಾ ರಮೇಶ ಹರಿಕಾಂತ, ಶಿವಾನಿ ಗೌಡ, ಶ್ರೇಯಾ ಹರಿಕಾಂತ, ರೋಹನ ನಾಯಕ ಮಾತನಾಡಿದರು.

ಅತ್ಯುತ್ತಮ ಶಿಬಿರಾರ್ಥಿಗಳಾಗಿ ನಾಗಾನಂದ ಆರ್‌. ಗೌಡ, ನಿಸರ್ಗ ಹರಿಕಾಂತ ಪ್ರಮಾಣ ಪತ್ರ ಪಡೆದರು. ತಿಮ್ಮಣ್ಣ ಭಟ್ಟ ಕಾರ್ಯಕ್ರಮ ನಿರೂಪಿಸಿದರು, ಕೆ. ರಮೇಶ ಸ್ವಾಗತಿಸಿದರು, ವಿನಾಯಕ ಶೆಟ್ಟಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ