ಆ್ಯಪ್ನಗರ

ಮಳೆ ನೀರು ತುಂಬಿದ್ದ ಶಾಲಾ ಕೊಠಡಿ ಸ್ವಚ್ಛ

ಕಾರವಾರ : ಮಳೆನೀರು ತುಂಬಿಕೊಂಡಿದ್ದ ತಾಲೂಕಿನ ಮಾಜಾಳಿಯ ಮೆಡಿಸಿಟ್ಟಾ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ತುಂಬಿದ ಮಳೆನೀರನ್ನು ಕಡಲಸಿರಿ ಯುವಕ ಸಂಘದ ಸದಸ್ಯರು ಶ್ರಮದಾನದ ಮೂಲಕ ಹೊರಗೆ ಚೆಲ್ಲಿ ಸ್ವಚ್ಛಗೊಳಿಸಿದರು.

Vijaya Karnataka 31 Jul 2019, 5:00 am
ಕಾರವಾರ : ಮಳೆನೀರು ತುಂಬಿಕೊಂಡಿದ್ದ ತಾಲೂಕಿನ ಮಾಜಾಳಿಯ ಮೆಡಿಸಿಟ್ಟಾ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ತುಂಬಿದ ಮಳೆನೀರನ್ನು ಕಡಲಸಿರಿ ಯುವಕ ಸಂಘದ ಸದಸ್ಯರು ಶ್ರಮದಾನದ ಮೂಲಕ ಹೊರಗೆ ಚೆಲ್ಲಿ ಸ್ವಚ್ಛಗೊಳಿಸಿದರು.
Vijaya Karnataka Web clean the school room filled with rain water
ಮಳೆ ನೀರು ತುಂಬಿದ್ದ ಶಾಲಾ ಕೊಠಡಿ ಸ್ವಚ್ಛ


ಸ್ವಚ್ಛತಾ ಅಭಿಯಾನದ ಇಂಟರ್ನ್‌ಶಿಪ್‌ ಅಂಗವಾಗಿ ತಾಲೂಕಿನ ವಿವಿಧೆಡೆ ಸ್ವಚ್ಛತಾ ಕಾರ್ಯ ನಡೆಸುತ್ತಿರುವ ಕಡಲಸಿರಿ ಯುವಕ ಮಂಡಳದವರು ಮೆಡಿಸಿಟ್ಟಾ ಶಾಲೆಯ ಆವರಣದಲ್ಲಿ ನೀರು ತುಂಬಿಕೊಂಡ ವಿಚಾರ ತಿಳಿದುಕೊಂಡಿದ್ದರು. ಕಳೆದ ಮೂರು ದಿನಗಳ ಕಾಲ ಮಳೆ ಸತತವಾಗಿ ಸುರಿದ ಪರಿಣಾಮ ಶಾಲೆಯ ಆವರಣ ಜಲಾವೃತಗೊಂಡಿತ್ತು. ಕೊಠಡಿಗಳಿಗೂ ನೀರು ನುಗ್ಗಿತ್ತು. ಕಡಲಸಿರಿ ಯುವಕ ಸಂಘದ ಸದಸ್ಯರು ಸತತ ಶ್ರಮಾದಾನ ನಡೆಸಿ ಶಾಲೆಯ ಕೊಠಡಿಯೊಳಗೆ ತುಂಬಿಕೊಂಡಿದ್ದ ನೀರನ್ನು ತೆಗೆದು ಸ್ವಚ್ಛಗೊಳಿಸಿದರು. ಅಲ್ಲದೆ ಆವರಣದಲ್ಲಿ ಭರಪೂರ ಪ್ರಮಾಣದಲ್ಲಿ ನಿಂತಿದ್ದ ನೀರನ್ನು ಹೊರತೆಗೆದು ವಿದ್ಯಾರ್ಥಿಗಳಿಗೆ ತೆರಳಲು ಸುಗಮ ಮಾರ್ಗ ಒದಗಿಸಿಕೊಟ್ಟಿದ್ದರು. ಯುವಕ ಮಂಡಳದ ಸದಸ್ಯರ ಕಾರ್ಯಕ್ಕೆ ಮಾಜಾಳಿ ಗ್ರಾ.ಪಂ. ಅಧ್ಯಕ್ಷೆ ಶೀತಲ್‌ ಪವಾರ್‌, ಸದಸ್ಯರಾದ ದೀಪಕ್‌ ಗಡ್ಕರ್‌, ಗ್ರಾಮಸ್ಥರಾದ ಲಕ್ಷ್ಮೀನಾರಾಯಣ ಕುಡ್ತರಕರ, ಸಂತೋಷ ನಾಯ್ಕ ಮತ್ತಿತರರು ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾರ್ಥಿ ಪ್ರಮುಖ ಅಭಿಷೇಕ್‌ ಕಳಸ, ಪ್ರಜ್ವಲ್‌ ಶೇಟ್‌ ನೇತೃತ್ವದಲ್ಲಿ ಕಡಲಸಿರಿ ಯುವಕ ಮಂಡಳ ಕಾರ್ಯನಿರ್ವಹಿಸುತ್ತಿದ್ದು, ಕಳೆದ ಕೆಲ ದಿನಗಳಿಂದ ತಾಲೂಕಿನ ಹಲವೆಡೆ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ