ಆ್ಯಪ್ನಗರ

ಸಿಎಂ ಮಾಜಿ ಸಿಎಂ ಒಂದೇ ವಿಮಾನದಲ್ಲಿಪ್ರಯಾಣ

ಹುಬ್ಬಳ್ಳಿ : ಹಾಲಿ ಮತ್ತು ಮಾಜಿ ಸಿಎಂಗಳಾದ ಬಿ.ಎಸ್‌.ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯನವರು ಶನಿವಾರ ಬೆಂಗಳೂರಿನಿಂದ ಹುಬ್ಬಳ್ಳಿಗೆ ಒಂದೇ ವಿಮಾನದಲ್ಲಿಆಗಮಿಸಿದರು.

Vijaya Karnataka 27 Oct 2019, 5:00 am
ಹುಬ್ಬಳ್ಳಿ : ಹಾಲಿ ಮತ್ತು ಮಾಜಿ ಸಿಎಂಗಳಾದ ಬಿ.ಎಸ್‌.ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯನವರು ಶನಿವಾರ ಬೆಂಗಳೂರಿನಿಂದ ಹುಬ್ಬಳ್ಳಿಗೆ ಒಂದೇ ವಿಮಾನದಲ್ಲಿಆಗಮಿಸಿದರು.
Vijaya Karnataka Web cm former cm travels in the same plane
ಸಿಎಂ ಮಾಜಿ ಸಿಎಂ ಒಂದೇ ವಿಮಾನದಲ್ಲಿಪ್ರಯಾಣ


ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ 9.30ಕ್ಕೆ ಸಿಎಂ ಮತ್ತು ಮಾಜಿ ಸಿಎಂ ಬಂದಿಳಿದರು. ಪೈಲೆಟ್‌ನಲ್ಲಿಇಬ್ಬರೂ ಮುಖಾಮುಖಿಯಾಗಿ ನಗುಮುಖದಲ್ಲಿಹಸ್ತಲಾಘವ ಮಾಡಿದರು. ಪ್ರಯಾಣದಲ್ಲಿಪರಸ್ಪರ ಕುಶಲೋಪರಿ ವಿಚಾರಿಸುವ ಜತೆಗೆ ಕೆಲ ವಿಷಯಗಳ ಬಗ್ಗೆ ಚರ್ಚೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅದೇ ವಿಮಾನದಲ್ಲಿಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವ ಸಿ.ಸಿ. ಪಾಟೀಲ, ಸಂಸದ ಶಿವಕುಮಾರ ಉದಾಸಿ, ಶಾಸಕ ಅರವಿಂದ ಲಿಂಬಾವಳಿ, ಮಾಜಿ ಸಚಿವ ಎಚ್‌.ಎಸ್‌. ಮಹದೇವಪ್ಪ ಸೇರಿದಂತೆ ಅನೇಕರು ಇದ್ದರು.

ಸಭೆಯಲ್ಲಿಶಾಸಕ ಕತ್ತಿ ಏಕಾಂಗಿ : ನಗರದ ಖಾಸಗಿ ಹೊಟೇಲ್‌ನಲ್ಲಿಶನಿವಾರ ಬೆಳಗ್ಗೆ ನಡೆದ ಏಳು ವಿಧಾನ ಸಭಾ ಕ್ಷೇತ್ರದ ಉಪಚುನಾವಣೆ ಹಾಗೂ ವಿಧಾನ ಪರಿಷತ್‌ ಅಭ್ಯರ್ಥಿಗಳ ಆಯ್ಕೆಯ ಬಿಜೆಪಿ ಸಭೆಯಲ್ಲಿಶಾಸಕ ಉಮೇಶ ಕತ್ತಿ ಏಕಾಂಗಿಯಾಗಿ ಕುಳಿತಿದ್ದು, ಕಂಡು ಬಂದಿತು.

ವೇದಿಕೆಯ ಮೇಲಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ ಕಟೀಲ ಅವರು ಸಭೆಗೆ ಆಗಮಿಸುತ್ತಿದ್ದ ಸಂಸದರು ಹಾಗೂ ಶಾಸಕರನ್ನು ಕರೆದು ವೇದಿಕೆ ಮುಂಭಾಗದಲ್ಲಿಕುಳಿತುಕೊಳ್ಳುವಂತೆ ಸೂಚನೆ ನೀಡುತ್ತಿದ್ದರು. ಆದರೆ ನಳೀನ್‌ ಕುಮಾರ ಕಟೀಲ್‌ ಅವರು ಹಿಂದೆ ಏಕಾಂಗಿಯಾಗಿ ಕುಳಿತಿದ್ದ ಶಾಸಕ ಉಮೇಶ ಕತ್ತಿಯವರನ್ನು ಮುಂದೆ ಕರೆಯಲಿಲ್ಲ. ಅದೇ ರೀತಿ ವೇದಿಕೆ ಮೇಲೆ ಕುಳಿತಿದ್ದ ಸಿಎಂ ಯಡಿಯೂರಪ್ಪ ಕೂಡ ಕತ್ತಿ ಅವರನ್ನು ಮುಂಭಾಗದತ್ತ ಕರೆಯುವ ಗೋಜಿಗೆ ಹೋಗಲಿಲ್ಲ. ಇದು ಸಭೆಯಲ್ಲಿದ್ದವರ ಕುತೂಹಲಕ್ಕೆ ಕಾರಣವಾಯಿತು ಎಂದು ಮೂಲಗಳು ತಿಳಿಸಿವೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ