ಆ್ಯಪ್ನಗರ

22ರಿಂದ ಸಮಗ್ರ ಕೃಷಿ ಅಭಿಯಾನ ರಥ ಸಂಚಾರ

ಹಳಿಯಾಳ : ತಾಲೂಕಿನಲ್ಲಿ ಸಮಗ್ರ ಕೃಷಿ ಅಭಿಯಾನ ಧಿ-2019 ಜೂ.22ರಿಂದ ಆರಂಭವಾಗಿ ಜುಲೈ 3ರ ವರೆಗೆ ನಡೆಯಲಿದೆ. ತಾಲೂಕಿನ 4 ಹೋಬಳಿಗಳಲ್ಲಿ 12 ದಿನಗಳ ಕಾಲ ಸಂಚಾರ ನಡೆಸಲಿದ್ದು, ಈ ಅವಧಿಯಲ್ಲಿ ರೈತರಿಗೆ ಕೃಷಿ ವಿಜ್ಞಾನಿಗಳಿಂದ ಉಚಿತವಾಗಿ ಕೃಷಿ ಚಟುವಟಿಕೆ ಕುರಿತು ಸಂವಾದ ನಡೆಯಲಿದೆ ಎಂದು ಇಲ್ಲಿಯ ಸಹಾಯಕ ಕೃಷಿ ನಿರ್ದೇಶಕ ನಾಗೇಶ ನಾಯ್ಕ ಹೇಳಿದರು.

Vijaya Karnataka 20 Jun 2019, 5:00 am
ಹಳಿಯಾಳ : ತಾಲೂಕಿನಲ್ಲಿ ಸಮಗ್ರ ಕೃಷಿ ಅಭಿಯಾನ ಧಿ-2019 ಜೂ.22ರಿಂದ ಆರಂಭವಾಗಿ ಜುಲೈ 3ರ ವರೆಗೆ ನಡೆಯಲಿದೆ. ತಾಲೂಕಿನ 4 ಹೋಬಳಿಗಳಲ್ಲಿ 12 ದಿನಗಳ ಕಾಲ ಸಂಚಾರ ನಡೆಸಲಿದ್ದು, ಈ ಅವಧಿಯಲ್ಲಿ ರೈತರಿಗೆ ಕೃಷಿ ವಿಜ್ಞಾನಿಗಳಿಂದ ಉಚಿತವಾಗಿ ಕೃಷಿ ಚಟುವಟಿಕೆ ಕುರಿತು ಸಂವಾದ ನಡೆಯಲಿದೆ ಎಂದು ಇಲ್ಲಿಯ ಸಹಾಯಕ ಕೃಷಿ ನಿರ್ದೇಶಕ ನಾಗೇಶ ನಾಯ್ಕ ಹೇಳಿದರು.
Vijaya Karnataka Web comprehensive agricultural campaign chariot traffic from 22nd
22ರಿಂದ ಸಮಗ್ರ ಕೃಷಿ ಅಭಿಯಾನ ರಥ ಸಂಚಾರ


ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾಂಡೇಲಿ, ಹಳಿಯಾಳ, ಸಾಂಬ್ರಾಣಿ ಮತ್ತು ಮುರ್ಕವಾಡ ಹೋಬಳಿಗಳ ಪೈಕಿ ಪ್ರತಿ ಹೋಬಳಿಯಲ್ಲಿ ಮೂರು ದಿನಗಳ ಕಾಲ ಸಮಗ್ರ ಕೃಷಿ ಅಭಿಯಾನದ ರಥವು ಸಂಚರಿಸಲಿದೆ. ಈ ಸಂದರ್ಭದಲ್ಲಿ ಕೃಷಿ ಸಂಬಂಧಿತ ಇಲಾಖೆಗಳಾದ ರೇಷ್ಮೆ, ಮೀನುಗಾರಿಕೆ, ಪಶು ಸಂಗೋಪನೆ ಹಾಗೂ ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು ಹಾಗೂ ತಾಂತ್ರಿಕ ಸಿಬ್ಬಂದಿ ಭಾಗವಹಿಸಿ ರೈತರ ಸಮಸ್ಯೆಗಳು ಸೇರಿದಂತೆ ಅವರಿಗೆ ಆಧುನಿಕ ಹಾಗೂ ಸುಧಾರಿತ ಕೃಷಿ ಕುರಿತು ಸಮಗ್ರ ಮಾಹಿತಿ ನೀಡುವುದರ ಜತೆಗೆ ಅವರಿಗೆ ಮಾರ್ಗದರ್ಶನ ನೀಡಲಿದ್ದಾರೆ.

ರೈತರಿಗೆ ಬೇಕಾಗುವ ಚಟುವಟಿಕೆಗಳ ಪ್ರಾತ್ಯಕ್ಷಿಕೆ, ಮಾಹಿತಿ, ಸಾಮಗ್ರಿಗಳ ಚಿತ್ರಣ ದೊರೆಯಲಿದೆ. ಮಳೆ ವಿಳಂಬವಾಗಿದ್ದರಿಂದ ಕೃಷಿ ರಥವು ಸಹ ವಿಳಂಬವಾಗಿ ಸಂಚರಿಸುತ್ತಿದೆ.

22ರಂದು ಚಾಲನೆ : ಜೂ.22ರಂದು ಪಟ್ಟಣದ ಮಿನಿವಿಧಾನಸೌಧದ ಆವರಣದಲ್ಲಿ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಅವರು ಚಾಲನೆ ನೀಡಲಿದ್ದು, ಈ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಕೃಷಿ ಸಾಮಗ್ರಿ ಮತ್ತು ಯಂತ್ರೋಪಕರಣಗಳನ್ನು ವಿತರಿಸಲಾಗುವುದು. ರೈತರಿಗೆ ಬೇಕಾಗುವ ರಸಗೊಬ್ಬರ, ಭತ್ತ, ಹತ್ತಿ, ಮೆಕ್ಕೆಜೋಳ ಮತ್ತು ಕ್ರಿಮಿನಾಶಕಗಳ ಸಂಗ್ರಹ ಭರಪೂರ ಆಗಿದೆ. ರೈತರು ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದು, ಕೃಷಿ ಮಾಹಿತಿ ರಥದ ಸದುಪಯೋಗ ಪಡೆಯುವಂತೆ ಎಡಿಎ ನಾಗೇಶ ನಾಯ್ಕ ತಿಳಿಸಿದರು.

ಈ ವೇಳೆ ಪಶು ಇಲಾಖೆಯ ನರೇಂದ್ರ ಹೆಗಡೆ, ತೋಟಗಾರಿಕೆ ಅಧಿಕಾರಿ ಎಂ.ಎಂ.ಮುಲ್ಲಾ, ಕೃಷಿ ಅಧಿಕಾರಿಗಳಾದ ಸುರೇಖಾ ಪಟ್ಟಣಶೆಟ್ಟಿ, ಅಕ್ಷ ತಾ ಹೊಸಮನಿ ಮತ್ತು ಎಂ.ಸಿ.ಪ್ರಭಾಕರ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ