ಆ್ಯಪ್ನಗರ

ಯಲ್ಲಾಪುರದಲ್ಲಿ ಮುಂದುವರಿದ ಜಿಟಿಜಿಟಿ ಮಳೆ

ಯಲ್ಲಾಪುರ : ತಾಲೂಕಿನಾದ್ಯಂತ ಮಂಗಳವಾರವೂ ಜಿಟಿಜಿಟಿ ಮಳೆ ಮುಂದುವರಿದಿತ್ತು. ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ಹಲವೆಡೆ ಮರಗಿಡಗಳು ಕಿತ್ತುಬಿದ್ದಿವೆ. ನಿರಂತರವಾಗಿ ಸುರಿಯುತ್ತಿದ್ದ ಜಿಟಿಜಿಟಿ ಮಳೆಯಿಂದಾಗಿ ಬುಡದ ಮಣ್ಣು ಸಡಿಲಗೊಂಡ ಪರಿಣಾಮ ಹೆದ್ದಾರಿ ಬದಿಯಲ್ಲಿದ್ದ ಬೃಹತ್‌ ಗುಲ್‌ಮೊಹರ್‌ ಮರವೊಂದು ಧರಾಶಾಹಿಯಾದ ಘಟನೆ ಯಲ್ಲಾಪುರ ಪಟ್ಟಣದ ತಟಗಾರ್‌ ಕ್ರಾಸ್‌ ಸಮೀಪದಲ್ಲಿಸೋಮವಾರ ಸಂಜೆ ನಡೆದಿದೆ.

Vijaya Karnataka 3 Jun 2020, 5:00 am
ಯಲ್ಲಾಪುರ : ತಾಲೂಕಿನಾದ್ಯಂತ ಮಂಗಳವಾರವೂ ಜಿಟಿಜಿಟಿ ಮಳೆ ಮುಂದುವರಿದಿತ್ತು. ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ಹಲವೆಡೆ ಮರಗಿಡಗಳು ಕಿತ್ತುಬಿದ್ದಿವೆ. ನಿರಂತರವಾಗಿ ಸುರಿಯುತ್ತಿದ್ದ ಜಿಟಿಜಿಟಿ ಮಳೆಯಿಂದಾಗಿ ಬುಡದ ಮಣ್ಣು ಸಡಿಲಗೊಂಡ ಪರಿಣಾಮ ಹೆದ್ದಾರಿ ಬದಿಯಲ್ಲಿದ್ದ ಬೃಹತ್‌ ಗುಲ್‌ಮೊಹರ್‌ ಮರವೊಂದು ಧರಾಶಾಹಿಯಾದ ಘಟನೆ ಯಲ್ಲಾಪುರ ಪಟ್ಟಣದ ತಟಗಾರ್‌ ಕ್ರಾಸ್‌ ಸಮೀಪದಲ್ಲಿಸೋಮವಾರ ಸಂಜೆ ನಡೆದಿದೆ.
Vijaya Karnataka Web continued gtgt rainfall in yallapur
ಯಲ್ಲಾಪುರದಲ್ಲಿ ಮುಂದುವರಿದ ಜಿಟಿಜಿಟಿ ಮಳೆ

ಬುಡ ಸಮೇತ ಕಿತ್ತುಬಿದ್ದ ಮರ ಹೆದ್ದಾರಿಯ ಮೇಲೆಯೇ ಬಿದ್ದ ಪರಿಣಾಮ ಕೆಲಕಾಲ ವಾಹನ ಸಂಚಾರಕ್ಕೆ ವ್ಯತ್ಯಯವಾಯಿತು. ಸದಾ ವಾಹನ ಸಂಚಾರ ಹಾಗೂ ಜನ ಸಂಚಾರ ಇರುವ ಹೆದ್ದಾರಿಯಲ್ಲಿನಡೆದ ಈ ಘಟನೆಯಿಂದಾಗಿ ಅದೃಷ್ಟವಶಾತ್‌ ಯಾರಿಗೂ ಹಾನಿಯಾಗಿಲ್ಲ. ಜೋರಾಗಿ ಮಳೆ ಬೀಳುತ್ತಿದ್ದ ಕಾರಣದಿಂದಾಗಿ ಮರ ಬೀಳುವ ಸಮಯದಲ್ಲಿವಾಹನ ಸಂಚಾರ, ಜನ ಸಂಚಾರ ಇರಲಿಲ್ಲ. ಮರ ಬೀಳುತ್ತಿರುವ ಸಂದರ್ಭದಲ್ಲಿಯೇ ಸಂಚರಿಸುತ್ತಿದ್ದ ಕಾರೊಂದು ಕೂದಲೆಳೆಯ ಅಂತರದಲ್ಲಿಪಾರಾಯಿತೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸ್ವಲ್ಪ ಸಮಯದ ನಂತರ ಮರವನ್ನು ಹೆದ್ದಾರಿಯಿಂದ ತೆರವುಗೊಳಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ