ಆ್ಯಪ್ನಗರ

ರಾಮನಗರದಲ್ಲಿ ನಿರಂತರ ತಪಾಸಣೆ

ಜೋಯಿಡಾ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಲು ಹೊರ ರಾಜ್ಯ ಜಿಲ್ಲೆಗಳಿಂದ ಬರುವ ಹಣ ಮತ್ತು ಸಾರಾಯಿ ಸಾಗಾಟದ ಪರಿಶೀಲನೆಗೆ ಕಟ್ಟು ನಿಟ್ಟಿನ ತಪಾಸಣೆಯನ್ನು ರಾಮನಗರ, ಅನಮೋಡ ಬಾಪೇಲಿ ಕ್ರಾಸ್‌ ತನಿಖಾ ಠಾಣೆಯಲ್ಲಿ ವಾಹನಗಳ ನಿರಂತರ ತಪಾಸಣೆ ನಡೆಯುತ್ತಿದೆ.

Vijaya Karnataka 17 Mar 2019, 5:00 am
ಜೋಯಿಡಾ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಲು ಹೊರ ರಾಜ್ಯ ಜಿಲ್ಲೆಗಳಿಂದ ಬರುವ ಹಣ ಮತ್ತು ಸಾರಾಯಿ ಸಾಗಾಟದ ಪರಿಶೀಲನೆಗೆ ಕಟ್ಟು ನಿಟ್ಟಿನ ತಪಾಸಣೆಯನ್ನು ರಾಮನಗರ, ಅನಮೋಡ ಬಾಪೇಲಿ ಕ್ರಾಸ್‌ ತನಿಖಾ ಠಾಣೆಯಲ್ಲಿ ವಾಹನಗಳ ನಿರಂತರ ತಪಾಸಣೆ ನಡೆಯುತ್ತಿದೆ.
Vijaya Karnataka Web continuous inspection in ramanagar
ರಾಮನಗರದಲ್ಲಿ ನಿರಂತರ ತಪಾಸಣೆ


ತಾಲೂಕಿಗೆ ಅನಮೊಡ ಮುಖಾಂತರ ಗೋವಾ ರಾಜ್ಯದಿಂದ ಅಕ್ರಮ ಸರಾಯಿ ಹಾಗೂ ರಾಮನಗರ ಬೆಳಗಾಂವ ರಾಷ್ಟ್ರೀಯ ಹೆದ್ದಾರಿ ಮೂಲಕ ಅಕ್ರಮ ಸರಾಯಿ ಹಾಗೂ ಅಕ್ರಮ ಹಣವು ಲೋಕಸಭೆ ಚುನಾವಣೆ ಸಂಬಂಧ ಜಿಲ್ಲೆಗೆ ಬರುವ ಸಾಧ್ಯತೆ ಇರುವುದರಿಂದ ಈಗಾಗಲೇ ಜೊಯಿಡಾ ಕಂದಾಯ ಇಲಾಖೆ, ರಾಮನಗರ, ಜೊಯಿಡಾ ಪೊಲೀಸರು ಮತ್ತು ಚುನಾವಣೆ ಕಾರ್ಯಕ್ಕೆ ನಿಯೋಜನೆಯಾದ ಅಧಿಕಾರಿಗಳ ತಂಡದಿಂದ ಕಟ್ಟು ನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರವೂ ಉತ್ತರ ಕನ್ನಡ ಜಿಲ್ಲೆ ಮತ್ತು ಬೆಳಗಾವಿ ಜಿಲ್ಲೆಯ ಕಿತ್ತೂರ, ಖಾನಾಪುರ ತಾಲೂಕಗಳನ್ನು ಒಳಗೊಂಡಿರುವುದರಿಂದ ಬೆಳಗಾವಿ ಗೋವಾ ರಾಷ್ಟ್ರೀಯ ಹೆದ್ದಾರಿ ಮೂಲಕ ಜಿಲ್ಲೆಯಲ್ಲಿ ಅಕ್ರಮ ಸರಾಯಿ, ಹಣ ಬರಬಹುದಾಗಿದೆ. ರಾಮನಗರದಲ್ಲಿ ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯಲ್ಲಿ, ಬಾಪೇಲಿ ಕ್ರಾಸನಲ್ಲಿ ಬೇರೆ ಬೇರೆ ಇಲಾಖೆಯ ಅಧಿಕಾರಿಗಳನ್ನ ನೇಮಿಸಿ ಎಲ್ಲಾ ವಾಹನಗಲನ್ನು ಕಟ್ಟು ನಿಟ್ಟಾಗಿ ತಪಾಸಣೆ ಮಾಡಲಾಗುತ್ತಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ