ಆ್ಯಪ್ನಗರ

ಸತತ ಮಳೆ: ಅವಘಡಗಳ ಸರಣಿ

ಯಲ್ಲಾಪುರ: ತಾಲೂಕಿನಾದ್ಯಂತ ಮಳೆಯ ಮುನಿಸು ಶನಿವಾರವೂ ನಿಂತಿಲ್ಲ. ಶನಿವಾರ ಬೆಳಗ್ಗೆ ಸ್ವಲ್ಪ ಕಡಿಮೆಯಾಗಿದ್ದ ಮಳೆ ಮಧ್ಯಾಹ್ನದ ನಂತರ ಮತ್ತೆ ಜೋರಾಗಿ ಸುರಿಯತೊಡಗಿದೆ. ನಿರಂತರ ಸುರಿಯುತ್ತಿರುವ ಮಳೆಯ ಕಾರಣದಿಂದಾಗಿ ಸಂಭವಿಸುತ್ತಿರುವ ಅವಘಡಗಳ ಸರಣಿಯೂ ಮುಂದುವರಿದಿದೆ.

Vijaya Karnataka 11 Aug 2019, 5:00 am
ಯಲ್ಲಾಪುರ: ತಾಲೂಕಿನಾದ್ಯಂತ ಮಳೆಯ ಮುನಿಸು ಶನಿವಾರವೂ ನಿಂತಿಲ್ಲ. ಶನಿವಾರ ಬೆಳಗ್ಗೆ ಸ್ವಲ್ಪ ಕಡಿಮೆಯಾಗಿದ್ದ ಮಳೆ ಮಧ್ಯಾಹ್ನದ ನಂತರ ಮತ್ತೆ ಜೋರಾಗಿ ಸುರಿಯತೊಡಗಿದೆ. ನಿರಂತರ ಸುರಿಯುತ್ತಿರುವ ಮಳೆಯ ಕಾರಣದಿಂದಾಗಿ ಸಂಭವಿಸುತ್ತಿರುವ ಅವಘಡಗಳ ಸರಣಿಯೂ ಮುಂದುವರಿದಿದೆ.
Vijaya Karnataka Web continuous rain a series of disasters
ಸತತ ಮಳೆ: ಅವಘಡಗಳ ಸರಣಿ


ಗ್ರಾಮೀಣ ಭಾಗದ ಬಹುತೇಕ ಜನರ ಅಡಕೆ ತೋಟಗಳಲ್ಲಿ ಮಳೆಯ ನೀರು ತುಂಬಿ, ಮಣ್ಣು, ಗೊಬ್ಬರ ಕೊಚ್ಚಿಕೊಂಡು ಹೋಗಿದೆ. ತೋಟದಲ್ಲಿ ಮಣ್ಣಿನ ಸವಕಳಿ ಉಂಟಾಗಿ ಮುಂದೆ ಹೇಗೆ ಎಂಬ ಚಿಂತೆ ರೈತರನ್ನು ಕಾಡುತ್ತಿದೆ. ಶನಿವಾರ ಬೆಳಗ್ಗೆ ಬೇಡ್ತಿ ನದಿಯಲ್ಲಿ ನೀರಿನ ಹರಿವು ಕೊಂಚ ಇಳಿಮುಖವಾದರೂ ಮಧ್ಯಾಹ್ನದ ನಂತರ ನೀರಿನ ಮಟ್ಟ ಏರಿಕೆ ಕಂಡಿದೆ. ಶನಿವಾರ ತಾಲೂಕಿನಲ್ಲಿ ಸುರಿದ ಮಳೆಯ ಪ್ರಮಾಣ 116 ಮಿ.ಮೀ. ಇಲ್ಲಿಯ ವರೆಗೆ ಸುರಿದ ಒಟ್ಟು ಮಳೆಯ ಪ್ರಮಾಣ 2719.4 ಮಿ.ಮೀ.

ಹಲವೆಡೆ ಹಾನಿ:
ಜೋರಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ವಿವಿಧ ಭಾಗಗಳಲ್ಲಿ ಅನೇಕ ಅವಘಡಗಳು ಸಂಭವಿಸಿವೆ. ಕಿರವತ್ತಿಯ ಯಲ್ಲಪ್ಪಾ ಹೊಸಮನಿಯವರ ಮನೆ ಹಾನಿಯಾಗಿದೆ. ಕಂಚನಹಳ್ಳಿಯ ಮೀರಾ ಕೈಟ್‌ ಕರ್‌ ಅವರ ತೋಟ ಹಾಗೂ ಚಂದಗುಳಿಯ ದೀಪಾ ಬಾಂದೇಕರ್‌ ಅವರ ಮನೆಗೆ ಹಾನಿಯಾಗಿದೆ. ನಂದೊಳ್ಳಿಯ ಅಂಗನವಾಡಿ ಕಟ್ಟಡ ಬಿರುಕು ಬಿಟ್ಟಿದೆ. ನಂದೊಳ್ಳಿಯ ಜವಳೇಕೆರೆ ಕಟ್ಟೆ ಸವಕಳಿಯಾಗಿ ನೀರು ನುಗ್ಗುವಂತಾಗಿದೆ. ಕಾರ್ಕುಂಕಿ, ಬಲೇಕಣಿ ರಸ್ತೆ ಕೊಚ್ಚಿ ಹೋಗಿದೆ. ಹೊಸ್ತೋಟ-ಕೋಡ್ನಗುಡ್ಡೆ ರಸ್ತೆ ಕೊಚ್ಚಿ ಹೋಗಿದೆ. ನಂದೊಳ್ಳಿ ಹೈಸ್ಕೂಲಿನ ಎರಡು ಕೋಣೆಗಳ ಚಾವಣಿ ಹಾನಿಯಾಗಿದೆ.

ದಂತಳಿಗೆ ಶಿವರಾಮ ಭಾಗ್ವತ್‌ ಅವರ ತೋಟಕ್ಕೆ ಹಾನಿಯಾಗಿದೆ. ಬಲೇಕಣಿಯಲ್ಲಿ ಬಾಂದಾರ ಒಡೆದು ತೋಟಕ್ಕೆ ನೀರು ನುಗ್ಗಿದೆ. ಗುಮ್ಮಾನಿಮನೆ ಹಳ್ಳದ ಏರಿ ಒಡೆದು ನೀರು ಗದ್ದೆಗೆ ನುಗ್ಗಿದೆ. ಆನಗೋಡಿನ ನರಸಿಂಹ ಗಾಂವ್ಕಾರ ತೋಟ ಹಾನಿಯಾಗಿದೆ. ಸಾವಗದ್ದೆಯ ದಾಮೋದರ ಗೌಡ ಮನೆ ಹಾನಿಯಾಗಿದೆ. ಚಂದಗುಳಿಯ ನಾಗೇಂದ್ರ ಭಟ್ಟ, ಮಹಾಬಲೇಶ್ವರ ಭಟ್ಟ,ವೆಂಕಟರಮಣ ಹೆಗಡೆಯವರ ತೋಟ ಹಾನಿಯಾಗಿದೆ. ಕೃಷ್ಣ ಭಾಗ್ವತ್‌, ನಾಗೇಂದ್ರ ಭಾಗ್ವತ್‌, ಪಾರ್ವತಿ ಹೆಗಡೆಯವರ ತೋಟ ಹಾನಿಯಾಗಿದೆ. ಕೃಷ್ಣಾ ಮರಾಠಿ, ಸುಶೀಲಾ ಮರಾಠಿ, ಗೋಪಾಲ

ಮರಾಠಿ, ರಾಮಾ ಮರಾಠಿಯವರ ತೋಟ, ಗದ್ದೆ ಹಾನಿಯಾಗಿದೆ.

ಹಲವು ಮನೆಗೆ ಹಾನಿ: ತಾಲೂಕಿನ ಸೋಮನಹಳ್ಳಿಯ ಬಾಯು ಕುಣಬಿ, ನಾಗೇಶ ಕುಣಬಿ, ಶಿವಾ ಕುಣಬಿ, ಕೇಶವ ಕುಣಬಿ, ಪುರುಷಾ ಕುಣಬಿ, ಗೋಪಾಲ ಕುಣಬಿ, ನಾಗ್ಯಾ ಕುಣಬಿ, ಮಹಾಲಕ್ಷ್ಮಿ ಕುಣಬಿ, ಅರಬೈಲಿನ ಸುಬ್ರಾಯ ನಾಯಕ, ಮಹಾಬಲೇಶ್ವರ ಭಟ್ಟ, ಮಾಧವ ಕಾಗಾಲ್‌, ಲಕ್ಷ್ಮೀನಾರಾಯಣ ಹೆಗಡೆ, ಚಿಕ್ಕೂಮನೆಯ ಯಶ್ವಂತ ನಾಯಕ, ಲೋಕಪಾಲ ನಾಯ್ಕ್‌, ತುಕಾರಾಮ ನಾಯ್ಕ್‌ ಅವರ ಮನೆಗಳು ಜಖಂಗೊಂಡಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ