ಆ್ಯಪ್ನಗರ

ಯೋಜನೆ ತಿಳಿಸಿ ಸರ್ವೇ ನಡೆಸಿ

ಅಂಕೋಲಾ : ಸ್ಥಳೀಯ ಗ್ರಾಮ ಪಂಚಾಯಿತಿಗೆ ತಿಳಿಸದೆ, ಸಾರ್ವಜನಿಕರ ಗಮನಕ್ಕೂ ತರದೆ ಕಳೆದ ಕೆಲವು ದಿನಗಳಿಂದ ಅಲಗೇರಿ ಗ್ರಾಮದ ಭಾಗದಲ್ಲಿ ಸರ್ವೇ ನಡೆಯುತ್ತಿದ್ದು ಇದು ಯಾವ ಯೋಜನೆಗಾಗಿ ಎನ್ನುವುದನ್ನು ತಿಳಿಸಿಯೇ ಸಮೀಕ್ಷೆ ಮುಂದುವರಿಸಬೇಕು. ಒಂದು ವೇಳೆ ಹಾಗೆಯೇ ಸರ್ವೇ ಮುಂದುವರಿಸಿದಲ್ಲಿ ಮುಂದಾಗುವ ಅನಾಹುತಕ್ಕೆ ಅಧಿಕಾರಿಗಳೆ ನೇರ ಹೊಣೆ ಎಂದು ಸಾಮಾಜಿಕ ಕಾರ್ಯಕರ್ತ ಸುರೇಶ ನಾಯಕ ಅಲಗೇರಿ ಎಚ್ಚರಿಸಿದ್ದಾರೆ.

Vijaya Karnataka 1 Aug 2019, 5:00 am
ಅಂಕೋಲಾ : ಸ್ಥಳೀಯ ಗ್ರಾಮ ಪಂಚಾಯಿತಿಗೆ ತಿಳಿಸದೆ, ಸಾರ್ವಜನಿಕರ ಗಮನಕ್ಕೂ ತರದೆ ಕಳೆದ ಕೆಲವು ದಿನಗಳಿಂದ ಅಲಗೇರಿ ಗ್ರಾಮದ ಭಾಗದಲ್ಲಿ ಸರ್ವೇ ನಡೆಯುತ್ತಿದ್ದು ಇದು ಯಾವ ಯೋಜನೆಗಾಗಿ ಎನ್ನುವುದನ್ನು ತಿಳಿಸಿಯೇ ಸಮೀಕ್ಷೆ ಮುಂದುವರಿಸಬೇಕು. ಒಂದು ವೇಳೆ ಹಾಗೆಯೇ ಸರ್ವೇ ಮುಂದುವರಿಸಿದಲ್ಲಿ ಮುಂದಾಗುವ ಅನಾಹುತಕ್ಕೆ ಅಧಿಕಾರಿಗಳೆ ನೇರ ಹೊಣೆ ಎಂದು ಸಾಮಾಜಿಕ ಕಾರ್ಯಕರ್ತ ಸುರೇಶ ನಾಯಕ ಅಲಗೇರಿ ಎಚ್ಚರಿಸಿದ್ದಾರೆ.
Vijaya Karnataka Web KWR-31ANK1


ಅಲಗೇರಿ ಶಾಲಾ ಆವರಣದಲ್ಲಿ ಗ್ರಾಮಸ್ಥರು ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಕೊಂಕಣ ರೈಲ್ವೆ, ಸೀಬರ್ಡ್‌ ರಾಷ್ಟ್ರೀಯ ಹೆದ್ದಾರಿ ಹೀಗೆ ಅನೇಕ ಯೋಜನೆಗಳಿಗೆ ಭೂಮಿ ನೀಡಿ ನಿರಾಶ್ರಿತರಾಗುತ್ತಲೇ ಇದ್ದೇವೆ. ಸರಕಾರ ನಾವು ಭೂಮಿ ಕೊಡುವಾಗ ನುಡಿದಂತೆ ನಡೆದುಕೊಂಡಿಲ್ಲ. ಕೃಷಿ ಭೂಮಿಯನ್ನೇ ನಂಬಿ ಬದುಕು ನಡೆಸುತ್ತಿರುವ ಕೃಷಿಕರ ಹೊಟ್ಟೆಯ ಮೇಲೆ ಬರೆ ಎಳೆಯುವ ಕಾರ್ಯವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ ಎಂದರು.

ಸೀಬರ್ಡ್‌ಗೆ ಭೂಮಿ ನೀಡಿ 35 ವರ್ಷಗಳ ನಂತರ ಸುಪ್ರೀಂ ಕೋರ್ಟಿನ ತೀರ್ಪನ್ನು ಆಧಾರವಾಗಿಟ್ಟುಕೊಂಡು ಪರಿಹಾರ ಪಡೆದುಕೊಳ್ಳುತ್ತಿದ್ದೇವೆ. ಕೇಂದ್ರ ಸರಕಾರದ ಯೋಜನೆಗೆ ರಾಜ್ಯ ಸರಕಾರದ ಸ್ಥಳೀಯ ಅಧಿಕಾರಿಗಳು ಸರ್ವೇ ಕಾರ್ಯಕ್ಕೆ ಬರುವಾಗ ಸಮರ್ಪಕ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಲಿ ಎಂದರು.

ಅಲಗೇರಿ ಗ್ರಾ.ಪಂ. ಅಧ್ಯಕ್ಷ ಮಂಜುನಾಥ ನಾಯಕ ಮಾತನಾಡಿ, ಸರ್ವೇ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳನ್ನು ಕೇಳಿದರೆ ನಮಗೆ ಮಾಹಿತಿ ಇಲ್ಲದೆ ಉತ್ತರಿಸುವುದು ಹೇಗೆ. ನಾಳೆಯಿಂದಲೆ ನಮ್ಮ ಹೊರಾಟ ಪ್ರಾರಂಭವಾಗಲಿದೆ. ಇಲ್ಲಿಯ ಜನರು ಚಿಕ್ಕ ಪುಟ್ಟ ಜಮೀನನ್ನು ಹೊಂದಿದವರು. ಈ ಜಮೀನನ್ನು ಸರಕಾರಕ್ಕೆ ಕೊಟ್ಟರೆ ನಾವೆಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು. ಪ್ರಮುಖರಾದ ನಾರಾಯಣ ನಾಯಕ ಮಾತನಾಡಿ, ಅಲಗೇರಿಯಲ್ಲಿ 160 ಮನೆಗಳು, ಭಾವಿಕೇರಿಯಲ್ಲಿ 35 ಮನೆಗಳು ಯಾವುದೋ ಯೋಜನೆಗೆ ಬೇಕಾಗುತ್ತದೆ ಎನ್ನುತ್ತಾರೆ. ಲೋಕೋಪಯೋಗಿ ಇಲಾಖೆಯವರು ಸಮೀಕ್ಷೆ ಪ್ರಾರಂಭಿಸಿದ್ದಾರೆ. ಕಳೆದ 1 ವರ್ಷದ ಹಿಂದೆ ಹೋರಾಟ ಮಾಡಿದಾಗ ಎಲ್ಲಾ ಅಧಿಕಾರಿಗಳು ಸಮೀಕ್ಷೆ ಕಾರ್ಯಕ್ಕೆ ಬರುವ ಮುನ್ನ ಮಾಹಿತಿ ನೀಡಿಯೇ ಬರುತ್ತೇವೆ ಎಂದಿದ್ದರು. ಆದರೆ ಅವರು ಮಾತಿಗೆ ತಪ್ಪಿದ್ದಾರೆ. ನಾಳೆಯಿಂದ ಸರ್ವೇ ಕಾರ್ಯ ನಿಲ್ಲಿಸಲಿ ಸಂಬಂಧಪಟ್ಟ ಸ್ಥಳೀಯ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿ ಜಿಲ್ಲಾಧಿಕಾರಿಗಳು ಲೋಕಸಭಾ ಸದಸ್ಯರು, ಸ್ಥಳಿಯ ಶಾಸಕರು ಗ್ರಾಮಕ್ಕೆ ಬಂದು ಜನ ಸಂಪರ್ಕ ಸಭೆ ನಡೆಸಿ ಸಮೀಕ್ಷೆ ಪ್ರಾರಂಭಿಸಲಿ. ಪುನಃ ಮಾಹಿತಿ ನೀಡದೇ ಸರ್ವೇ ಕಾರ್ಯಕ್ಕೆ ಮುಂದಾದಲ್ಲಿ ವಾರದೊಳಗೆ ತಹಸೀಲ್ದಾರ್‌ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದರು.

ಗ್ರಾಮದ ಪ್ರಮುಖರಾದ ಗಣೇಶ ನಾಯ್ಕ, ನಂದಾ ಗೌಡ , ಮಹೇಶ ಭಟ್‌, ಸಂದೀಪ ಆಚಾರಿ, ಲಕ್ಷ ್ಮಣ ನಾಯಕ, ಪ್ರಕಾಶ ನಾಯ್ಕ, ಸಣ್ಣಮ್ಮ ಆಗೇರ, ಕರಿಯಾ ಗೌಡ, ಹಮ್ಮಣ್ಣ ನಾಯಕ, ಶಿವಾನಂದ ಗೌಡ, ರಾಜು ನಾಯಕ ಮೊದಲಾದವರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ