ಆ್ಯಪ್ನಗರ

ಸಹಕಾರ, ಸಹಬಾಳ್ವೆಯಿಂದ ವೃತ್ತಿ ನಿಭಾಯಿಸಿ

ಅಂಕೋಲಾ : ಶಿಕ್ಷ ಕರು ಮಕ್ಕಳಿಗೆ ಪ್ರೀತಿ ವಿಶ್ವಾಸದ ಜೊತೆ ಸಹಕಾರ, ಸಹಬಾಳ್ವೆಯನ್ನು ತಿಳಿಸಿ ಜೊತೆಯಲ್ಲಿ ಸಾಗುವಂತೆ ಮಾಡುತ್ತಾ ವೃತ್ತಿಯನ್ನು ಜವಾಬ್ದಾರಿಯುತವಾಗಿ ನಿಭಾಯಿಸಬೇಕು ಎಂದು ವಿ.ಕೆ. ಗರ್ಲ್ಸ್ ಹೈಸ್ಕೂಲಿನ ಮುಖ್ಯಾಧ್ಯಾಪಕಿ ನಾಗಮ್ಮ ಟಿ. ಆಗೇರ ಹೇಳಿದರು.

Vijaya Karnataka 9 Feb 2019, 5:00 am
ಅಂಕೋಲಾ : ಶಿಕ್ಷ ಕರು ಮಕ್ಕಳಿಗೆ ಪ್ರೀತಿ ವಿಶ್ವಾಸದ ಜೊತೆ ಸಹಕಾರ, ಸಹಬಾಳ್ವೆಯನ್ನು ತಿಳಿಸಿ ಜೊತೆಯಲ್ಲಿ ಸಾಗುವಂತೆ ಮಾಡುತ್ತಾ ವೃತ್ತಿಯನ್ನು ಜವಾಬ್ದಾರಿಯುತವಾಗಿ ನಿಭಾಯಿಸಬೇಕು ಎಂದು ವಿ.ಕೆ. ಗರ್ಲ್ಸ್ ಹೈಸ್ಕೂಲಿನ ಮುಖ್ಯಾಧ್ಯಾಪಕಿ ನಾಗಮ್ಮ ಟಿ. ಆಗೇರ ಹೇಳಿದರು.
Vijaya Karnataka Web KWR-8ANK1
ಕೆ.ಎಲ್‌.ಇ. ಸಂಸ್ಥೆಯ ಶಿಕ್ಷ ಣ ಮಹಾವಿದ್ಯಾಲಯದಲ್ಲಿ ನಡೆದ ತಂಡ ಬೋಧನಾ ಶಿಬಿರದ ಸಮಾರೋಪ ಸಮಾರಂಭದಲ್ಲಿ 'ನೆಳಲು' ಹಸ್ತಪತ್ರಿಕೆಯನ್ನು ನಾಗಮ್ಮ ಟಿ ಆಗೇರ ಬಿಡುಗಡೆ ಮಾಡಿದರು.


ಕೆ.ಎಲ್‌.ಇ. ಸಂಸ್ಥೆಯ ಶಿಕ್ಷ ಣ ಮಹಾವಿದ್ಯಾಲಯ ಅಂಕೋಲಾದ ತಂಡ ಬೋಧನಾ ಶಿಬಿರದ ಸಮಾರೋಪ ಹಾಗೂ 'ನೆಳಲು' ಹಸ್ತಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಧ್ಯಕ್ಷ ತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಜಿ. ಹೆಗಡೆ ವಿದ್ಯಾರ್ಥಿಗÜಳು ಜ್ಞಾನವನ್ನು ಪಡೆಯಲು ಸದಾ ಮಗ್ನರಾಗಿ, ಮಹತ್ವಾಕಾಂಕ್ಷೆಯೊಂದಿಗೆ ಪ್ರತಿ ಕ್ಷ ಣ ಸಾಧನೆಗಾಗಿ ಹಂಬಲಿಸಬೇಕೆಂದು ಎಂದರು.

ಪವಿತ್ರಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಶಿಲ್ಪಾ ಅಗೇರ ಸ್ವಾಗತಿಸಿದರು. ಸಹನಾ ನಾಯ್ಕ ಪರಿಚÜಯಿಸಿದರು. ವೀಣಾ ಗೌಡ ವರದಿ ವಾಚಿಸಿದರು. ಪ್ರಶಿಕ್ಷ ಣಾರ್ಥಿಗಳಾದ ಅಪರ್ಣಾ ಶೇಟ, ಶಾಲಾ ಶಿಕ್ಷ ಕಿಯಾದ ಅನುರಾಧಾ ಗೋಂದಕರ, ಮಾರ್ಗದರ್ಶಕರಾದ ಫ್ಲೋವಿಯಾ ಮೀರಾಂಡಾ ಅನಿಸಿಕೆ ವ್ಯಕ್ತ ಪಡಿಸಿದರು. ಸಂಜನಾ ನಾಯ್ಕ ನಿರೂಪಿಸಿದರು. ಸಹನಾ ನಾಯಕ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ