ಆ್ಯಪ್ನಗರ

ಕೊರೊನಾ ಫ್ರಂಟ್‌ಲೈನ್‌ ಪೊಲೀಸ್‌ ಟೀಮ್‌

ಶಿರಸಿ : ಕೊರೊನಾ ವೈರಸ್‌ ಹರಡುತ್ತಿರುವುದರಿಂದ ಪೊಲೀಸ್‌ ಸಿಬ್ಬಂದಿ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕಿದೆ. ಹೀಗಾಗಿ ಜನರ ಸಮಸ್ಯೆ ಪರಿಹಾರಕ್ಕೆ ಜಿಲ್ಲೆಯ ಪೊಲೀಸ್‌ ಠಾಣೆಗಳ ಹೊರಗೆ ರಿಸೆಪ್ಶನ್‌ ಸೆಂಟರ್‌ ತೆರೆಯಲಾಗುತ್ತಿದೆ. ಕ್ವಾರಂಟೈನ್‌ ಕೇಂದ್ರ ಸೇರಿದಂತೆ ಕೊರೊನಾಕ್ಕೆ ಸಂಬಂಧಿ ಕಾರ್ಯಚಟುವಟಿಕೆಗಳಲ್ಲಿಕಾರ್ಯನಿರ್ವಹಿಸಲು ಕೊರೊನಾ ಫ್ರಂಟ್‌ಲೈನ್‌ ಪೊಲೀಸ್‌ ಟೀಮ್‌ ರಚಿಸಲಾಗುತ್ತಿದೆ ಎಂದು ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಹೇಳಿದರು.

Vijaya Karnataka 29 May 2020, 5:00 am

Vijaya Karnataka Web corona frontline police team
ಕೊರೊನಾ ಫ್ರಂಟ್‌ಲೈನ್‌ ಪೊಲೀಸ್‌ ಟೀಮ್‌

ನಗರದ ಡಿವೈಎಸ್‌ಪಿ ಕಚೇರಿಯಲ್ಲಿಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿಅವರು ಮಾತನಾಡಿದರು. ರಾಜ್ಯದ ಕೆಲ ಜಿಲ್ಲೆಗಳಲ್ಲಿಪೊಲೀಸ್‌ ಸಿಬ್ಬಂದಿಗೂ ಕೊರೊನೊ ವೈರಸ್‌ ತಗುಲಿ ಸಮಸ್ಯೆಯಾಗಿದೆ. ಹೀಗಾಗಿ ಜಿಲ್ಲೆಯಲ್ಲಿಈ ಬಗ್ಗೆ ಹೆಚ್ಚಿನ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು ಠಾಣೆಯ ಹೊರಗೆ ತೆರೆಯಲಾಗುವ ಸೆಂಟರ್‌ನಲ್ಲಿಸಾರ್ವಜನಿಕರ ಪಾಸ್‌ಪೋರ್ಟ್‌ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಪರಿಹಾರ ನೀಡಲಾಗುತ್ತದೆ. ಇಲ್ಲಿಯೂ ಸಾಮಾಜಿಕ ಅಂತರ ಪಾಲನೆ ಮಾಡಬೇಕಾಗುತ್ತದೆ ಎಂದರು.

ಸಿಬ್ಬಂದಿ ಆರೋಗ್ಯ ತಪಾಸಣೆ... ಕೊರೊನಾ ಕ್ವಾರಂಟೈನ್‌ ಕೇಂದ್ರ, ಹೊರ ರಾಜ್ಯದಿಂದ ಬಂದವರಿದ್ದಲ್ಲಿತೆರಳುವುದು, ಕರೆತರುವುದು ಮುಂತಾದ ಕಾರ್ಯಕ್ಕೆ ಫ್ರಂಟ್‌ಲೈನ್‌ ಪೊಲೀಸ್‌ ಟೀಮ್‌ ರಚಿಸಲಾಗುತ್ತದೆ. ಅವರಿಗೆ ಪಿಪಿಟಿ ಕಿಟ್‌ ನೀಡಲಾಗುತ್ತದೆ. ಪ್ರತಿ 10ದಿನಕ್ಕೊಮ್ಮೆ ತಂಡವನ್ನು ಬದಲಾಯಿಸಲಾಗುತ್ತದೆ. ಇಲ್ಲಿಕಾರ್ಯನಿರ್ವಹಿಸಿದ ಸಿಬ್ಬಂದಿಯ ಪರೀಕ್ಷೆ ನಡೆಸಲಾಗುತ್ತದೆ. ಒಂದಾನುವೇಳೆ ಪಾಸಿಟಿವ್‌ ಬಂದರೆ ಅವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತದೆ ಎಂದು ಅವರು ವಿವರಿಸಿದರು.

ಡಿವೈಎಸ್‌ಪಿ ಗೋಪಾಲಕೃಷ್ಣ ನಾಯಕ, ಸಿಪಿಐ ಪ್ರದೀಪ ಬಿ. ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ