ಆ್ಯಪ್ನಗರ

ಕೊರೊನಾ ಚಿಕಿತ್ಸೆಗೆ ಕಾರವಾರ ಮೆಡಿಕಲ್‌ ಕಾಲೇಜ್‌ ಸಜ್ಜು

ಕಾರವಾರ : ಕೊರೊನಾ ಚಿಕಿತ್ಸೆಗೆ ಇಲ್ಲಿನ ಕಾರವಾರ ಮೆಡಿಕಲ್‌ ಕಾಲೇಜು ಸಂಪೂರ್ಣ ಸಜ್ಜುಗೊಂಡಿದ್ದು ಶುಕ್ರವಾರ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿಪ್ರಾತ್ಯಕ್ಷಿಕೆಯ ಮೂಲಕ ವೈದ್ಯಾಧಿಕಾರಿಗಳು ಚಿಕಿತ್ಸಾ ಸೌಲಭ್ಯಗಳ ವಿವರ ನೀಡಿದರು.

Vijaya Karnataka 2 May 2020, 5:00 am
ಕಾರವಾರ : ಕೊರೊನಾ ಚಿಕಿತ್ಸೆಗೆ ಇಲ್ಲಿನ ಕಾರವಾರ ಮೆಡಿಕಲ್‌ ಕಾಲೇಜು ಸಂಪೂರ್ಣ ಸಜ್ಜುಗೊಂಡಿದ್ದು ಶುಕ್ರವಾರ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿಪ್ರಾತ್ಯಕ್ಷಿಕೆಯ ಮೂಲಕ ವೈದ್ಯಾಧಿಕಾರಿಗಳು ಚಿಕಿತ್ಸಾ ಸೌಲಭ್ಯಗಳ ವಿವರ ನೀಡಿದರು.
Vijaya Karnataka Web gurudaat 2
ಕಾರವಾರ ಮೆಡಿಕಲ್‌ ಕಾಲೇಜಿನಲ್ಲಿಕೊರೊನಾ ಚಿಕಿತ್ಸೆಯ ವಿಧಾನಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಲಾಯಿತು.


ಚಿಕಿತ್ಸೆಗೆ ಅಗತ್ಯವಿರುವ ವಿಶೇಷ ವಾರ್ಡ್‌ಗಳು, ಐಸಿಯು, ವೆಂಟಿಲೇಟರ್‌, ನೆಬ್ಯುಲೈಸರ್‌ ಸೌಲಭ್ಯಗಳನ್ನು ವಿವರಿಸಲಾಯಿತು. ಸೋಂಕಿತರಿಗೆ ವಿವಿಧ ಹಂತಗಳಲ್ಲಿನೀಡುವ ಚಿಕಿತ್ಸೆಯನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಲಾಯಿತು. ಈ ವೇಳೆ ಮಾತನಾಡಿದ ಡಿಸಿ ಡಾ. ಹರೀಶಕುಮಾರ, ಕೊರೊನಾ ಚಿಕಿತ್ಸೆಗೆ ಆಸ್ಪತ್ರೆ ಸಜ್ಜಾಗಿರುವುದಲ್ಲದೇ ವೈದ್ಯರೂ ಕೂಡ ಸಂಪೂರ್ಣ ಸನ್ನದ್ಧರಾಗಿದ್ದಾರೆ. ಇದರಿಂದ ಜಿಲ್ಲೆಯ ಜನರಲ್ಲಿಆತ್ಮ ವಿಶ್ವಾಸ ಮೂಡುವಂತಾಗಿದೆ. ಸೋಂಕಿತರು ಕಂಡುಬಂದಲ್ಲಿಅವರನ್ನು ತಿರಸ್ಕಾರದಿಂದ ನೋಡಬಾರದು, ನಮ್ಮ ಹೋರಾಟ ಸೋಂಕಿನೊಂದಿಗೆ ಹೊರತು ಸೋಂಕಿತರೊಂದಿಗಲ್ಲಎಂದರು. ಸಿಇಒ ಎಂ. ರೋಶನ್‌ ಮಾತನಾಡಿ, ಮೆಡಿಕಲ್‌ ಕಾಲೇಜಿನಲ್ಲಿಸ್ಥಾಪನೆಗೊಂಡ ಐಸೋಲೇಶನ್‌ ವಾರ್ಡ್‌ ಕೇವಲ ಕೊರೊನಾ ಚಿಕಿತ್ಸೆಗೆ ಸೀಮಿತವಲ್ಲ. ಕೆಎಫ್‌ಡಿ ಸೇರಿದಂತೆ ಎಲ್ಲಬಗೆಯ ವೈರಾಣು ಚಿಕಿತ್ಸೆಗೆ ಮುಂದಿನ ದಿನಗಳಲ್ಲಿಬಳಕೆಯಾಗಲಿದೆ ಎಂದರು. ಮೆಡಿಕಲ್‌ ಕಾಲೇಜಿನ ಡಾ. ಮಂಜುನಾಥ ಭಟ್‌, ಡಾ. ಹೇಮಗಿರಿ ಅವರು ಕೊರೋನಾ ಚಿಕಿತ್ಸೆಯ ಬಗ್ಗೆ ವಿವರಿಸಿದರು. ಕಾಲೇಜಿನ ಡೀನ್‌ ಡಾ. ಗಜಾನನ ನಾಯಕ, ಜಿಲ್ಲಾಸರ್ಜನ್‌ ಡಾ. ಶಿವಾನಂದ ಕುಡ್ತಳಕರ್‌, ಡಿಎಚ್‌ಒ ಡಾ. ಜಿ. ಎನ್‌. ಅಶೋಕಕುಮಾರ, ಡಾ. ವಿನೋದ ಭೂತೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ